Suddilive || thirthahalli
ಕಳ್ಳತನಕ್ಕೆ ಬಂದವನು ಗುಂಡಿಗೆ ಬಿದ್ದು ಗಾಯಗೊಂಡವರನಿಗೆ ಮಾನವೀಯತೆ ತೋರಿದ ಗ್ರಾಮಸ್ಥರು- Villagers show humanity to injured man who fell into a pit after being robbed
ಮನೆಗಳ್ಳತನಕ್ಕೆ ಬಂದಾತ ಪರಾರಿಯಾಗಲು ಯತ್ನಿಸಿ ಗುಂಡಿಗೆ ಬಿದ್ದಿದ್ದು ಆತನನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ನಂತರ ಗ್ರಾಮಸ್ಥರೇ ಪೊಲೀಸರಿಗೆ ಒಪ್ಪಿಸಿರುವ ಘಟನೆ ತೀರ್ಥಹಳ್ಳಿಯ ಗ್ರಾಮವೊಂದರಲ್ಲಿ ನಡೆದಿದೆ.
ತೀರ್ಥಹಳ್ಳಿ ತಾಲೂಕು ದೇಮ್ಲಾಪುರ ಗ್ರಾಮದ ಚಂದ್ರಶೇಖರ್ ಎಂಬುವವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿ ಪರಾರಿಯಾಗಲು ಯತ್ನಿಸಿ ಜಲಜೀವನ ಯೋಜನೆಗಾಗಿ ತೋಡಿದ್ದ ಗುಂಡಿಗೆ ಬಿದ್ದು ಗಾಯಗೊಂಡಿದ್ದಾನೆ. ಗಾಯಗೊಂಡವನನ್ನ ಮಾನವೀಯತೆ ಮೇರೆಗೆ ಗ್ರಾಮಸ್ಥರೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಂದ್ರಶೇಖರ್ ಅವರು ತೋಟದಲ್ಲಿ ಔಷಧಿ ಹೊಡೆಯಲು ಹೋಗಿದ್ದರು. ಅವರ ಪತ್ನಿ ಮತ್ತು ಮಗ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಮಧ್ಯಾಹ್ನ ಚಂದ್ರಶೇಖರ್ ಅವರು ಮನೆಗೆ ಮರಳಿದ್ದು, ಆಗ ವ್ಯಕ್ತಿಯೊಬ್ಬ ಮನೆಯ ಬಾಗಿಲಿನ ಬೀಗ ಒಡೆಯುತ್ತಿರುವುದನ್ನು ಗಮನಿಸಿದ್ದಾರೆ. ಚಂದ್ರಶೇಖರ್ ಜೋರಾಗಿ ಕೂಗಿಕೊಂಡಿದ್ದು, ನೆರೆ ಹೊರೆಯ ಮನೆಯ ಜನರೆಲ್ಲ ಅತ್ತ ಧಾವಿಸಿದ್ದಾರೆ.
ಆತಂಕಗೊಂಡ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಸಂದರ್ಭ ಪೈಪ್‌ಲೈನ್ ಅಳವಡಿಸಲು ತೋಡಿದ್ದ ಗುಂಡಿಗೆ ಬಿದ್ದು ಗಾಯಗೊಂಡಿದ್ದಾನೆ. ಗ್ರಾಮಸ್ಥರೆ ಆತನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳ್ಳತನಕ್ಕೆ ಬಂದವನ ಹೆಸರನ್ನು ಹನೀಫ್ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Villagers show humanity