ಸಾಗರದ ತಾಳಗುಪ್ಪ ಆರ್ ಐ ಲೋಕಾಯುಕ್ತ ಬಲೆಗೆ-Talaguppa RI Lokayukta caught in the trap

Suddilive || Sagara

ಸಾಗರದ ತಾಳಗುಪ್ಪ ಆರ್ ಐ ಲೋಕಾಯುಕ್ತ ಬಲೆಗೆ-Talaguppa RI Lokayukta caught in the trap  

Lokayukta, caught


ಜಮೀನು ಸಮತಟ್ಟು ಮಾಡಲು ಹಣದ ಬೇಡಿಕೆಯಿಟ್ಟದ್ದ ಆರ್ ಐ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

ಸಾಗರ ತಾಲೂಕಿನ ಶಿರೂರು ಗ್ರಾಮದ ಮಂಡಿಗೆಹಳ್ಳದ ನಿವಾಸಿ ಹೆಚ್.ಎಸ್.ಕೃಷ್ಣಮೂರ್ತಿ, ಬಿನ್ ಲೇಟ್ ನಾರಾಯಣಪ್ಪ, (64) ಅವರು ಕುಟುಂಬದ ಹೆಸರಿನಲ್ಲಿ ಒಟ್ಟು 11 ಎಕರೆ ತರಿ ಸಹಿತ ಖುಷಿ ಮತ್ತು ಇದಕ್ಕೆ ಲಗತ್ತಾಗಿ ಸರ್ವೇ ನಂ 125 ರಲ್ಲಿ 2 ಎಕರೆ ಖುಷ್ಕಿ ಜಮೀನು ಇದ್ದು, ಶಿರೂರು ಗ್ರಾಮದ ಸರ್ವೆ ನಂ.125 ರಲ್ಲಿರುವ ಜಮೀನು ಉಬ್ಬು ತಗ್ಗುಗಳಿಂದ ಕೂಡಿದ್ದು, ಇದನ್ನು ಸಮತಟ್ಟುಗೊಳಿಸಲು ಅನುಮತಿಗಾಗಿ 2 ಬಾರಿ ಸಾಗರ ತಹಶೀಲ್ದಾರ್ ರವರಿಗೆ ಅರ್ಜಿಯನ್ನು ಸಲ್ಲಿಸಿದ್ದರು. 

ಆದರೆ ಸಾಗರ ತಹಶೀಲ್ದಾರ್ ಕಛೇರಿಯಿಂದ ಯಾವುದೇ ಅನುಮತಿ ಬಂದಿರುವುದಿಲ್ಲ. ಪಿರ್ಯಾದುದಾರರು ಕೆಲಸಗಾರರಿಂದ ಜಮೀನು ಸಮತಟ್ಟು ಮಾಡುವಾಗ ತಾಳಗುಪ್ಪ ಆ‌ರ್.ಐ ಮಂಜುನಾಥ ರವರು ಜಮೀನಿನ ಬಳಿ ಬಂದು ಕೆಲಸ ನಿಲ್ಲಿಸುವಂತೆ ಒತ್ತಾಯಿಸಿ, ಯಾವುದೇ ನೋಟೀಸ್ ನೀಡದೆ ಲಂಚದ ಹಣ ಕೊಡಿ ಎಂದು ಬೇಡಿಕೆ ಇಟ್ಟಿದ್ದರು.

 ದಿನಾಂಕ: 20/03/2025 ರಂದು ಫೋನ್ ಪೇ ಮೂಲಕ 2500/-ಹಣವನ್ನು ಮತ್ತು ದಿನಾಂಕ: 02/04/2025 ಎಂದು 500 ರೂ ಲಂಚದ ಹಣವನ್ನು ಪಡೆದುಕೊಂಡ ಆರ್ ಐ ಪುನಃ 3000/-ರೂ ಲಂಚದ ಹಣವನ್ನು ಕೊಡುವಂತೆ ಬೇಡಿಕೆ ಇಟ್ಟಿದ್ದನು. ಆರ್.ಐ ಮಂಜುನಾಥ್ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ  ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇಂದು ಮದ್ಯಾಹ್ನ ಸುಮಾರು 03-05 ಗಂಟೆಗೆ ಆರ್ ಐ ಮಂಜುನಾಥ.ಎಸ್.ಎಂ. ರಾಷ್ಟ್ರೀಯ ಹೆದ್ದಾರಿ 206 ರ ಬದಿಯಲ್ಲಿ  ರೂ. 3000/- ಲಂಚದ ಹಣವನ್ನು ಪಡೆದುಕೊಂಡ ಸಮಯದಲ್ಲಿ ಆರ್ ಐ ಲೋಕಾ ಬಲೆಗೆ ಬಿದ್ದಿದ್ದಾನೆ. 

ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ವೀರಬಸಪ್ಪ. ಎಲ್. ಕುಸಲಾಪುರ ರವರು ಕೈಗೊಂಡಿರುತ್ತಾರೆ. ಟ್ರ್ಯಾಪ್ ಕಾರ್ಯಾಚರಣೆಯನ್ನು ಶ್ರೀ ಬಿ ಪಿ ಚಂದ್ರಶೇಖರ್. ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಶ್ರೀ ವೀರಬಸಪ್ಪ.ಎಲ್.ಕುಸಲಾಪುರ, ಪೊಲೀಸ್ ಇನ್ಸ್‌ಪೆಕ್ಟರ್ ರವರು ಕಾರ್ಯಾಚರಣೆ ನಡೆಸಿದ್ದರು.

ಟ್ರ್ಯಾಪ್ ಕಾರ್ಯದಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯವರಾದ ಶ್ರೀ ಟೀಕಪ್ಪ.ಎನ್.ಬಿ, ಸಿ.ಹೆಚ್.ಸಿ. ಶ್ರೀ ಮಂಜುನಾಥ.ಎಂ. ಸಿ.ಹೆಚ್.ಸಿ, ಶ್ರೀ ಸುರೇಂದ್ರ.ಹೆಚ್.ಜಿ.. ಸಿ.ಹೆಚ್.ಸಿ, ಶ್ರೀ ಯೋಗೇಶ್.ಜಿ.ಸಿ, ಸಿ.ಹೆಚ್.ಸಿ, ಶ್ರೀ ಪ್ರಶಾಂತ್ ಕುಮಾರ್.ಹೆಚ್, ಸಿ.ಪಿ.ಸಿ, ಶ್ರೀ ಬಿ.ಟಿ. ಚನ್ನೇಶ್, ಸಿ.ಪಿ.ಸಿ, ಶ್ರೀ ದೇವರಾಜ್.ವಿ, ಸಿ.ಪಿ.ಸಿ, ಶ್ರೀ ಅರುಣ್ ಕುಮಾರ್.ಯು.ಬಿ, ಸಿ.ಪಿ.ಸಿ. ಶ್ರೀ ಪ್ರಕಾಶ್ ಬಾರಿಮರದ. ಸಿಪಿಸಿ, ಶ್ರೀ ಆದರ್ಶ, ಸಿ.ಪಿ.ಸಿ. ಶ್ರೀಮತಿ ಚಂದ್ರಿಬಾಯಿ, ಮ.ಪಿ,ಸಿ ಶ್ರೀ ಪ್ರದೀಪ, ಎ.ಹೆಚ್.ಸಿ. ಶ್ರೀ ಗೋಪಿ.ವಿ, ಎ.ಪಿ.ಸಿ. ಶ್ರೀ ಜಯಂತ್.ಕೆ.ಸಿ, ಎ.ಪಿ.ಸಿ ಮತ್ತು ಶ್ರೀ.ತರುಣ್ ಕುಮಾರ್, ಎಪಿಸಿ, ಶ್ರೀ ಗಂಗಾಧರ ಎ.ಪಿ.ಸಿ. ಶ್ರೀ ಆನಂದ. ಎ.ಪಿ.ಸಿ. ರವರು ಹಾಜರಿರುತ್ತಾರೆ.

Talaguppa RI Lokayukta caught in the trap

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close