ಛತ್ರಿ ಹಿಡಿದೇ ಮಳೆಯಲ್ಲೇ ಕುಂತ ಬಿಜೆಪಿ ನಾಯಕರು-BJP leaders stand in the rain holding umbrellas

 suddilive ||| Shivamogga

ಛತ್ರಿ ಹಿಡಿದೇ ಮಳೆಯಲ್ಲೇ ಕುಂತ ಬಿಜೆಪಿ ನಾಯಕರು-BJP leaders stand in the rain holding umbrellas

Umbrella, bjp


ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನ ಖಂಡಿಸಿ ಇಂದು ಶಿವಮೊಗ್ಗದ ಗೋಪಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಂದ್ರ ಅವರ ನೇತೃತ್ವದಲ್ಲಿ ಪ್ರತಿಭಟನೆ ಮೆರವಣಿಗೆ ನಡೆದಿದೆ. 

ರಾಮಣ್ಣ ಶ್ರೇಷ್ಠಿ ಪಾರ್ಕ್ನ ವಿಘ್ನ ವಿನಾಶಕನಿಗೆ ಪೂಜೆ ಮಾಡಿ ವಿಜೇಂದ್ರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಶಿವಪ್ಪ ನಾಯಕನ ವೃತ್ತದಲ್ಲಿರುವ ಶಿವಪ್ಪ ನಾಯಕನ ಪ್ರತಿಮೆಗೆ ಹೂವಿನ ಹಾರ ಹಾಕಿ ನಡೆದಿದೆ.   ಗೋಪಿ ವೃತ್ತದ ವರೆಗೆ ಕಾಲ್ನಡಿಗೆಯಲ್ಲೇ ಆಗಮಿಸಿದ ಪ್ರತಿಭಟನಾ ಮೆರವಣೆ ಗೆ ತಲುಪಿದೆ. ಇನ್ನೇನು ಶಾಸಕ ಚೆನ್ನಿ ಮಾತನಾಡಬೇಕು ಆ ವೇಳೆ ಮಳೆ ಸುರಿದಿದೆ. 

ಭರ್ಜರಿ ಮಳೆಯಲ್ಲೇ ನಾಯಕರು ಭಾಷಣ ಮುಂದು ವರೆದಿದೆ. ಭಾಷಣಕ್ಕೂ ಮೊದಲು ಸಂಸದ ರಾಘವೇಂದ್ರ ಅವರು ಮಳೆ ಬಂದರೂ ಕಾರ್ಯಕರ್ತರು ಹೆದರುವಂತಿಲ್ಲ. ಬೆಲೆ ಏರಿಕೆಗೆ ಹೆದರದ ಕಾರ್ಯಕರ್ತರು ಮಳೆಗೆ ಹೆದರಿ ಹೋಗುವಂತಿಲ್ಲ ಎಂದು ಕರೆ ನೀಡಿದರು.

ಆದರೆ ಶಾಸಕ ಚೆನ್ನಿ ಅವರ ಮಾತು ಆರಂಭವಾಗುತ್ತಿದ್ದಂತೆ ಕಾರ್ಯಕರ್ತರು ಮಳೆಯ ಶೆಲ್ಟರ್ ಹುಡುಕಲು ಆರಂಭಿಸಿದರು. ಕಾರ್ಯಕ್ರಮದಲ್ಲಿ  ಸಂಸದ ಗೋವಿಂದ ಕಾರಜೋಳ, ಸಂಸದ ರಾಘವೇಂದ್ರ ಆರಗ ಜ್ಞಾನೇಂದ್ರ, ಮೊದಲಾದವರು ಉಪಸ್ಥಿತರಿದ್ದರು. 

BJP leaders stand in the rain holding umbrellas

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close