Suddilive || Shivamogga
ಕಾಂತರಾಜು ವರದಿ ಸರಿಯಿಲ್ಲ-ರಾಜ್ಯ ವನ್ನಯಾರ್ ಮಹಾಸಭಾ ಆಗ್ರಹ-Kantaraju report is not correct - demands of the State Vannyar Mahasabha
ಜಾತಿ ಗಣತಿಯ ವಿರುದ್ಧ ರಾಜ್ಯ ವನ್ನಿಯಾರ್ ಮಹಾಸಭಾ ಗುಡುಗಿದೆ. ಗೌಂಡರ್ ಜನಾಂಗ 1,03,125 ಇದೆ ಎಂದು ಕಾಂತರಾಜು ವರದಿ ತಿಳಿಸಿದೆ. ನಾವೆಲ್ಲ ತಮಿಳುನಾಡಿನಿಂದ ಜೀವನಾಂಶ ಹುಡುಕಿ ರಾಜ್ಯಕ್ಕೆ ಬಂದಿದ್ದೇವು. ರಾಜ್ಯದಲ್ಲಿ 25 ರಿಂದ 30 ಲಕ್ಷ ಜನಸಂಖ್ಯೆಯಿದೆ ಎಂದು . ಇವರನ್ನ 2 ಎ ಕೆಟಗರಿಗೆ ತರಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿ ನಡೆಸಿದ ರಾಜ್ಯ ವನ್ನಿಯರ್ ಮಹಾಸಭಾದ ಸಂಘಟನಾಕಾರ್ಯದರ್ಶಿ ಚಕ್ರವರ್ತಿ, ಪಡೆಯಾಚಿ, ವನ್ನಿ, ವನ್ನಿಗೌಂಡರ್, ಗೌಂಡರ್, ನಾಯ್ಕರ್ ಪಡಿಯಾಚಿ, ಪಲ್ಲಿ ಎಂದು ಕರೆಯಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲೇ 70 ಸಾವಿರ ಜನ ಇದ್ದಾರೆ. ಚಿಕ್ಕಮಗಳೂರಿನಲ್ಲಿ 75-80 ಸಾವಿರ ಜನ ಸಂಖ್ಯೆ ಇರುತ್ತದೆ ಎಂದು ಹೇಳಿದರು.
30 ಲಕ್ಷ ವಿರುವ ಸಮುದಾಯವೊಂದರ ಜನಸಂಖ್ಯೆಯನ್ನ 1,03,125 ಜನ ಸಂಖ್ಯೆಯಿದೆ ಎಂದು ನಮೂದಿಸಲಾಗಿದೆ. ಯಾರ ಮನೆಗೂ ಬಂದು ಸಮೀಕ್ಷೆ ಮಾಡದೆ ಒಂದು ಲಕ್ಷಕ್ಕೆ ಸೀಮಿತಗೊಳಿಸಿರುವುದು ದುರದೃಷ್ಟಕರ ಎಂದರು.
Kantaraju report is not correct