Suddilive || Shivamogga
ಕಾಂತಾಜು ವರದಿ ಜಾರಿಗೊಳಿಸದಂತೆ ಬಸವೇಶ್ವರ ವೀರಶೈವ ಸಮಾಜ ಮನವಿ-Basaveshwara Veerashaiva Samaj appeals not to implement Kantaju report
ಕಾಂತರಾಜು ವರದಿಯನ್ನ ಜಾರಿಗೊಳಿಸದಂತೆ ಅಗ್ರಹಿಸಿ ಇಂದು ಬಸವೇಶ್ವರ ವೀರಶೈವ ಲಿಂಗಾಯಿತ ಸಮಾಜ ಸೇವಾ ಸಂಘ ಸುದ್ದಿಗೋಷ್ಠಿ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದೆ
ಈ ಕುರಿತು ಮಾತನಾಡಿದ ಅಧ್ಯಕ್ಷ ಜ್ಯೋತಿ ಪ್ರಕಾಶ್ ಜಾತಿಜನಗಣತಿ ಹೆಸರಿನಲ್ಲಿ ರಾಜ್ಯದಲ್ಲಿ ಗೊಂದಲ ಮೂಡಿಸಲಾಗಿದೆ. 66 ಲಕ್ಷ ಲಿಂಗಾಯತರ ಜನಸಂಖ್ಯೆ ಎಂದು ಹೇಳಿದೆ. ರಾಜ್ಯದಲ್ಲಿ ಎರಡು ಕೋಟಿ ಲಿಂಗಾಯಿತರಿದ್ದಾರೆ ಎಂದು ತಿಳಿಸಿದರು.
ವೀರಶೈವ ಮತ್ತು ಲಿಂಗಾಯಿತ ಎಂದು ಬೇರೆ ಬೇರೆ ಎಂದು ಹೇಳಲಾಗುತ್ತಿದೆ. ಮುಸ್ಲೀಂರು 75 ಲಕ್ಷವಿದ್ದರೆ, ಅವರು ಅಲ್ಪಸಂಖ್ಯಾತರು ಎಂದು ಹೇಗೆ ಹೇಳುತ್ತೀರಿ. ಅವರನ್ನೂ ಹಿಂದೂಗಳಂತೆ ಸೇರಿಸಿ ಎಂದು ಆಗ್ರಹಿಸಿದರು. ಜನಗಣತಿಯನ್ನ ಹಠ ಮಾಡಿಕೊಂಡು ಸರ್ಕಾರ ಜಾರಿಗೊಳಿಸಿದರೆ ವೀರಶೈವ ಲಿಂಗಾಯತ ಸಮಾಜ ಪ್ರತಿಭಟಿಸಲಿದೆ ಎಂದು ಎಚ್ಚರಿಸಿದರು.
ಸರಿಪಡಿಸಲು 3000 ಮಠದ ಸ್ವಾಮಿಜಿಗಳು ಸಹ ಸರ್ಕಾರಕ್ಕೆ ಬುದ್ದಿಹೇಳಬೇಕಿದೆ. ಜನಗಣತಿಯನ್ನ ಪ್ರತಿಭಟನೆ ಮೂಲಕ ತಿರಸ್ಕರಿಸಬೇಕೆಂದರೆ ಪ್ರತಿಭಟಿಸುವುದಾಗಿ ಹೇಳಿದರು.
Basaveshwara Veerashaiva Samaj appeals