Suddilive || Shivamogga
ಒಳಮೀಸಲಾತಿ ಜಾರಿಗೆ ಕುರಿತು ಭಾಸ್ಕರ್ ಪ್ರಸಾದ್ ಸುದ್ದಿಗೋಷ್ಠಿ-Bhaskar Prasad press conference on implementation of internal reservation
ಒಳಮೀಸಲಾತಿ ಜಾರಿಗಾಗಿ ಮಲೈಮಹದೇಶ್ವರ ಬೆಟ್ಟದಿಂದ ಕ್ರಾಂತಿ ಕಾರಿ ರಥಯಾತ್ರೆ ಆರಂಭಗೊಂಡಿದೆ ಎಂದು ಒಳಮೀಸಲಾತಿ ಹೋರಾಟ ಸಮಿತಿ ತಿಳಿಸಿದೆ
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಎಸ್ ಡಿಪಿಐನ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್, ರಥಯಾತ್ರೆಯು ಜೂ. 9 ರಂದು ಸಮರೋಪ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಮತಯಾಚಿಸಲು ಅವಕಾಶವಿಲ್ಲ ಎಂಬ ಎಚ್ಚರಿಕೆ ನೀಡಲಾಗುವುದು ಎಂದರು.
ದತ್ತಾಂಶ ಸಂಗ್ರಹಿಸಿ ಒಳಮೀಸಲು ಜಾರಿಗೊಳಿಸಲು ಕರ್ನಾಟಕ ಸರ್ಕಾರ ಹೊಸದೊಂದು ಆಯೋಗ ರಚಿಸಿ ಕಾಲಹರಣ ಮಾಡಿದೆ. ಹಾವನೂರು, ಕಾಂತರಾಜು, ಮಾದುಸ್ವಾಮಿ ಆಯೋಗವಿದ್ದರೂ ಹೊಸ ಆಯೋಗ ರಚಿಸಲು ಮುಂದಾಗಿರುವುದು ಶೋಚನೀಯ ಎಂದರು.
ನಾಗಮೋಹನ್ ದಾಸ್ ಅವರಿಗೆ ದತ್ತಾಂಶ ನೀಡಲು ಸೂಚಿಸಿದೆ. ಮದ್ಯಾಂತರ ವರದಿಯಲ್ಲಿ ಮನೆಮನೆಗೆ ಸರ್ವೆ ಮಾಡಲು ನಾಗಮೋಹನ್ ದಾಸ್ ವರದಿ ಸಲ್ಲಿಸಿದೆ. ಹೊಸ ಅವಧಿ ಪಡೆದು ಒಂದು ತಿಂಗಳು ಮುಗಿದಿದೆ ಯಾವ ಮನೆಗೂ ಬರಲಿಲ್ಲ.
ಒಳಮೀಸಲು ಜಾರಿಗೆ ಮೊದಲು ರಾಜ್ಯ ಸರ್ಕಾರ 36 ಸಾವಿರ ಬ್ಯಾಕ್ ಲಾಗ್ ಹುದ್ದೆಗಳನ್ನ ತುಂಬಲು ಹೊರಟಿದೆ. ಸಚಿವ ಮಹದೇವಪ್ಪನವರು ಮುಂದಾಗಿದ್ದು, ಎಚ್ಚರಿಕೆಯ ಮೂಲಕ ತಡೆಯೊಡ್ಡಲಾಗಿದೆ. ಇದಾದನಂತರ 8 ಸಾವಿರ ಬ್ಯಾಕ್ ಲಾಗ್ ತುಂಬಲು ಕುತಂತ್ರ ನಡೆಸಲಾಯಿತು ಅದನ್ನ ತಡೆಹಿಡಿಯಲಾಗುತ್ತದೆ. ಈಗ ಭಡ್ತಿ ಮೂಲಕ ಈ ಹುದ್ದೆಗಳನ್ನ ಸರ್ಕಾರ ತುಂಬಲು ಮುಂದಾಗಿದೆ. ಈ ನೀಚತನವನ್ನ ಬಿಡಬೇಕು ಎಂದರು.
ಹಾಗಾಗಿ ರಥಯಾತ್ರೆಯನ್ನ ಹಮ್ಮಿಕೊಳ್ಳಲಾಗಿದೆ. ಏ.17 ರಂದು ಸರ್ಕಾರ ಭಡ್ತಿ ಮೂಲಕ ಹುದ್ದೆ ಭರ್ತಿಸುವ ಕೆಲಸಕ್ಕೆ ತಡೆಯಲಾಹುವುದಾಗಿ ಭರವಸೆ ನೀಡಿದೆ. ಇದನ್ನ ಮಾಡದಿದ್ದರೆ ಸಚೊವರ ಮನೆಗೆ ಮುತ್ತಿಗೆ, ಪ್ರತಿಭಟನೆ ನಡೆಯಲಿದೆ ಎಂದರು.
Bhaskar Prasad press conference