Suddilive || holehonnuru
ಬೈಕ್ ವೀಲಿಂಗ್, ನಾಲ್ವರ ವಿರುದ್ಧ ಬಿತ್ತು ಕೇಸ್ -Bike wheeling case filed against four
ವೀಲಿಂಗ್, ಗಾಂಜಾ, ಅಕ್ರಮ ಮದ್ಯ ಮಾರಾಟ ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲೇ ಯುವಜನಾಂಗ ಅಡ್ಡದಾರಿಗೆ ಇಳಿಯುತ್ತಿರುವುದು ಆತಂಕ ಮೂಡಿಸಿದೆ. ಗಾಂಜಾ ಮಾರಾಟ ಅಕ್ರಮವೆಂದು ತಿಳಿದು ಬಂದರೂ ಯುವಜನರಲ್ಲಿ ಜಾಗೃತಿ ಮೂಡುತ್ತಿಲ್ಲ.
ಅದರಂತೆ ವೀಲಿಂಗ್ ಸಹ ಜೀವಕ್ಕೆ ಅಪಾಯಕಾರಿ ಮತ್ತು ಇತರೆ ವಾಹನ ಸವಾರರಿಗೂ ಸಮಸ್ಯೆ ಉಂಟಾಗುತ್ತಿದೆ ಎಂದು ತಿಳಿದರೂ ವೀಲಿಂಗ್ ಮಾಡಿಕೊಂಡು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲು ಮಾಡಿಕೊಳ್ಳುವುದು ಯುವಜನರಲ್ಲಿ ಕ್ರೇಜ್ ಆಗಿದೆ. ಆಯುಧ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಫೋಸ್ ಕೊಡ್ಕೊಂಡು ನಂತರ ಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ.
ಅದರಂತೆ ವೀಲಿಂಗ್ ಮಾಡುತ್ತಿದ್ದ ಎರಡು ಬೈಕ್ ಗಳ ಸವಾರರ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದೆ. ಎರಡು ಬೈಕ್ ನ ಸವಾರರನ್ನ ಕರೆಯಿಸಿ ವಿಚಾರಣೆ ಮಾಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಹೊಳೆಹೊನ್ನೂರಿನ ಬೈಪಾಸ್ ರಸ್ತೆ ಬಂದ್ ಆಗಿರುವುದರಿಂದ ವೀಲಿಂಗ್ ಮಾಡುವ ಅಡ್ಡವಾಗಿ ಪರಿಣಮಿಸಿದೆ.
ಹೊಳೆಹೊನ್ಬೂರಿನ ಬೈಪಾಸ್ ರಸ್ತೆನಲ್ಲಿ ರಸ್ತೆ ಅಪಘಾತ ಹೆಚ್ಚಾದ ಪರಿಣಾಮ ಬಂದ್ ಮಾಡಲಾಗಿದೆ. ಇಲ್ಲಿ ವೀಲಿಂಗ್ ಮತ್ತು ಇತರೆ ಚಟುವಟಿಕೆಗೆ ಕಾರಣವಾಗಿದೆ. ಕೆಎ 14 ಇಜೆಡ್ 5408 ಕ್ರಮ ಸಂಖ್ಯೆಯ ಬೈಕ್ ನಲ್ಲಿ ಅಫ್ರೀದಿ ಎಂಬ 18 ವರ್ಷದ ಯುವಕ ವೀಲಿಂಗ್ ಮಾಡಿರುವ ವಿಡಿಯೋವೊಂದು ಪೊಲೀಸರ ಕೈಗೆ ಸಿಕ್ಕಿದೆ.
ಇದನ್ನ ಪರಶೀಲಿಸಿದ ಪಿಎಸ್ಐ ಉಮೇಶ್ ಎರಡು ಬೈಕ್ ಗಳನ್ನ ವಶಕ್ಕೆ ಪಡೆದು ಅಫ್ರೀದಿ ಸೇರಿ ನಾಲ್ವರನ್ನ ತಂದು ವಿಚಾರಣೆ ನಡೆಸಿದ್ದಾರೆ.
Bike wheeling case filed against four