ಅಂದು ಅಬ್ಬರಿಸಿದ್ದ ಶಾಸಕರು ಇಂದು ಸೈಲೆಂಟ್!MLA silent

Suddilive || Nitturu

ಅಂದು ಅಬ್ಬರಿಸಿದ್ದ ಶಾಸಕರು ಇಂದು ಸೈಲೆಂಟ್-The MLAs who were loud back then are silent today!

MLA, Silent

ತೂಗು ಸೇತುವೆ ಎಂಬ ತೂಗು ಕತ್ತಿಯ ಮೇಲೆ ಮೂರು ಗ್ರಾಮಗಳ ಜನರ ಸಂಚಾರ ನಡೆಯುತ್ತಿದೆ. ತೂಗು ಸೇತುವೆ ಅಪಾಯದ ಅಂಚಿನಲ್ಲಿದ್ದರೂ, ಅದರ ಮೇಲೆ ಮೂರು ಗ್ರಾಮದ ಜನ ಸಂಚರಿಸುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಕಣ್ಮುಚ್ಚಿಕುಳಿತಿದ್ದಾರೆ. 

ಲಿಂಗನಮಕ್ಕಿ ಆಣೆ ಕಟ್ಟಿಗೆ ತಮ್ಮ ಬದುಕನ್ನೆ ಬಾಗಿನದ ರೀತಿಯಲ್ಲಿ ಅರ್ಪಿಸಿದವರ ಜೀವನ ಅತಂತ್ರವಾಗಿದೆ. ದೀಪದ ಬುಡ ಕತ್ತಲೆ ಎನ್ನುವಂತೆ ಕಗ್ಗತ್ತಲೆಯ ನರಕದಲ್ಲೆ ಬದುಕುವಂತಾಗಿದೆ ನಾಡಿಗೆ ಬೆಳಕು ಕೊಟ್ಟವರ ಜೀವನ. 

ನಿರ್ವಹಣೆ ಇಲ್ಲದೆ ಬಸವಳಿದಿದೆ ರಾಜ್ಯದ ಎರಡನೇ ಅತಿ ಉದ್ದದ ತೂಗುಸೇತುವೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಿಟ್ಟೂರು ತೂಗುಸೇತುವೆ ಅನುದಾನ ಬಿಡುಗಡೆಯಾಗಿ ವರ್ಷವಾದ್ರೂ ಕೆಲಸ ಮಾತ್ರ ಮರಿಚೀಕೆಯಾಗಿದೆ. 

ಈ ವಿಚಾರವಾಗಿ ಈ ಹಿಂದೆ ಎಂಎಲ್ಎ ಅಗಿದ್ದ ಹಾಲಪ್ಪರನ್ನ ಟೀಕಿಸಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ, ಅಂದು ತೂಗುಸೇತುವೆ ದುರಸ್ಥಿ ಮಾಡುವಂತೆ ಒತ್ತಡ ಹಾಕಿದ್ದರು. ಇಂದು ಸೈಲೆಂಟ್ ಆಗಿದ್ದಾರೆ. 

ಈಗ ತಾವೇ ಎಂಎಲ್ ಎ ಅಗಿ ಎರಡು ವರ್ಷ ಕಳೆದ್ರು ದುರಸ್ಥಿ ಕಾರ್ಯ ಮರಿಚೀಕೆಯಾಗಿದೆ. ಮಲೆನಾಡಿನ ಹಿನ್ನೀರ ಜನರ ಸಂಪರ್ಕ ಕೊಂಡಿ ತೂಗುಸೇತುವೆಗೆ ಸಂಚಕಾರವೊಡ್ಡಿದೆ. ಈಗಲೇ ಎಚ್ಚೆತ್ತು ನಿರ್ವಹಣೆ ಮಾಡದೆ ಇದ್ರೆ ನಂತರದ ಮಳೆಗಾಲಕ್ಕೆ  ಕಂಟಕ ಎದುರಾಗುವ ಸಾಧ್ಯತೆಯಿದೆ. 

ನಾಗೋಡಿ ಮತ್ತು ಹೆಬ್ಬಿಗೆ ಗ್ರಾಮಗಳನ್ನು  ಸಂಪರ್ಕಿಸಲು 2011 ರಲ್ಲಿ  ತೂಗು ಸೇತುವೆ ನಿರ್ಮಿಸಲಾಗಿತ್ತು. ಅಂದಿನಿಂದ ಇಂದಿನ ವರೆಗೂ ಒಮ್ಮೆಯೂ ದುರಸ್ಥಿ ಮಾಡದೇ  ಮಲೆನಾಡು ಅಭಿವೃದ್ಧಿ ಪ್ರಾಧಿಕಾರವೂ ನಿರ್ಲಕ್ಷ ತೋರುತ್ತಿದೆ. ಮುಳುಗಡೆ ಸಂತ್ರಸ್ತರ ಸಂಪರ್ಕಕೊಂಡಿ ತೂಗು ಸೇತುವೆ ಸಂಪೂರ್ಣ ಶಿಥಿಲವಾಗಿದೆ. 

ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ. ಹೆಬ್ಬಿಗೆ, ಬರುವೆ, ಏಳಿಗೆ ಗ್ರಾಮಸ್ಥರಿಗೆ ಸಂಪರ್ಕ ಕಡಿತದ ಭೀತಿ ಉಂಟಾಗಿದೆ. 2011 ರಿಂದ ತೂಗು ಸೇತುವೆಯ ರೋಪ್ ಗೆ ಒಮ್ಮೆಯೂ ಅಯಿಲ್ ಹಚ್ಚಿಲ್ಲ. ತೂಗು ಸೇತುವೆಯ ಕಬ್ಬಿಣ ಸಂಪೂರ್ಣವಾಗಿ ತುಕ್ಕು ಹಿಡಿದಿದ್ದು ಸಂಚಾರಕ್ಕೆ ಸೂಕ್ತವಾಗಿಲ್ಲ. 

ಸೇತುವೆಗೆ ಬಳಸಲಾಗಿರುವ ಮಧ್ಯದ ಕಡಪಗಳಲ್ಲೆವೂ ಬಿರುಕುಗೊಂಡಿವೆ. ಪ್ರವಾಸಿಗರ ನೆಚ್ಚಿನ ಸ್ಥಳವಾಗಿರುವ ಹಿನ್ನೀರಿನ ಮೇಲಿರುವ ತೂಗುಸೇತುವೆ ಪ್ರವಾಸೋದ್ಯಮವಾಗಿ ಪರಿಣಮಿಸಬಹುದಿತ್ತು. ಇವೆಲ್ಲದರ ಇಚ್ಚಕೊರತೆ ಈ ದಿವ್ಯ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. 

MLA Silent

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close