ತೀರ್ಥಹಳ್ಳಿ - ಕೊಪ್ಪ ರಸ್ತೆಯಲ್ಲಿ ಧರೆಗುರುಳಿದ ಮರ - ಬೈಕ್ ಸವಾರನಿಗೆ ಗಾಯ-Biker injured

 Suddilive || Thirthahalli

ತೀರ್ಥಹಳ್ಳಿ - ಕೊಪ್ಪ ರಸ್ತೆಯಲ್ಲಿ ಧರೆಗುರುಳಿದ ಮರ - ಬೈಕ್ ಸವಾರನಿಗೆ ಗಾಯ-Tree falls on Thirthahalli - Koppa road - Biker injured

Biker, injured

ರಾಷ್ಟ್ರೀಯ ಹೆದ್ದಾರಿ ತೀರ್ಥಹಳ್ಳಿ - ಕೊಪ್ಪ ರಸ್ತೆ ಸಂಪರ್ಕಿಸುವ ರಸ್ತೆಯ ಮೇಲಿನಕುರುವಳ್ಳಿ ಸಮೀಪದ ಸೋಮೇಶ್ವರ ಬಳಿ ಗೋಳಿ ಮರವೊಂದು ಏಕಾಏಕಿ ಧರೆಗುರುಳಿರುವ ಘಟನೆ ಬುಧವಾರ ಸಂಜೆ ನಡೆದಿದೆ. 

ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿ ಸಮೀಪದ ಸೋಮೇಶ್ವರ ಬಳಿ ಮಧ್ಯ ರಸ್ತೆಗೆ ಮರ ಉರುಳಿ ಬಿದ್ದಿದೆ. ಇತ್ತೀಚಿಗೆ ರಸ್ತೆ ಕಾಮಗಾರಿ ವೇಳೆ ಸ್ವಲ್ಪ ಮಟ್ಟಿಗೆ ಮರದ ಬುಡವನ್ನು ತೆಗೆಯಲಾಗಿತ್ತು ಇದರಿಂದ ಇಂದು ಮರ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

 ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರನ ಮೇಲೆಯೇ ಮರ ಬಿದ್ದಿದ್ದು ಆತನಿಗೆ ಗಾಯವಾಗಿದ್ದು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮರದ ಕೆಳಗೆ ಸ್ಪ್ಲೆಂಡರ್ ಬೈಕ್ ಇದ್ದು ಅದನ್ನು ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಇನ್ನು ರಸ್ತೆ ಸಂಪೂರ್ಣ ಬಂದ್ ಆಗಿದ್ದು ವಾಹನಗಳು ಬುಕ್ಲಾಪುರ ಮೂಲಕ ಸಂಚರಿಸುತ್ತಿದೆ ಎಂದು ತಿಳಿದುಬಂದಿದೆ.

Biker injured

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close