ರಾಗಿಗುಡ್ಡದಲ್ಲಿ ಸಂಗ್ರಹವಾಗಿದ್ದ ಮರಳು ಅಕ್ರಮನಾ? ಸಕ್ರಮನಾ?illegal? Legal?

 Suddilive || Shivamogga

 ರಾಗಿಗುಡ್ಡದಲ್ಲಿ ಸಂಗ್ರಹವಾಗಿದ್ದ ಮರೂ ಅಕ್ರಮನಾ? ಸಕ್ರಮನಾ?Was the sand collected in Ragigudda illegal? Legal?

Illegal, sand

ಸಂಗ್ರಹಿಸಿಟ್ಟ ಮರಳಿನ ಮೇಲೆ ಎಸಿ ನೇತೃತ್ವದಲ್ಲಿ ದಾಳಿ ನಡೆದಿದೆ. ಟಾರ್ಪಲ್, ತೆಂಗಿನ ಗರಿಯನ್ನ ಹೊದಿಸಿಟ್ಟ ಕೆಲ ಮರಳನ್ನ ವಶಕ್ಕೆ ಪಡೆಯಲಾಗಿದೆ.

ರಾಗಿಗುಡ್ಡದಲ್ಲಿ ಅಕ್ರಮ ಮರಳನ್ನ ಸಂಗ್ರಹಿಸಿ ಬೇರೆ ಲಾರಿಗಳಿಗೆ ತುಂಬಿಸಲಾಗುತ್ತಿದೆ ಎಂಬ ಮಾಹಿತಿಯ ಆಧಾರದ ಮೇಲೆ ಎಸಿ ಸತ್ಯನಾರಾಯಣ ಅವರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಕೆಲವೊಂದಿಷ್ಟು ಮೆಟ್ರಿಕ್ ಟನ್ ಗೆ ದಾಖಲೆ ದೊರೆತಿವೆ. 

ಆದರೆ ಕೆಲ ಮರಳಿಗೆ ದಾಖಲಾತಿ ನೀಡದ ಹಿನ್ನಲೆಯಲ್ಲಿ ಈ ದಾಳಿ ಮಹತ್ವ ಪಡೆದುಕೊಂಡಿದೆ. ಸುಮಾರು 40 ಕ್ಕೂ ಹೆಚ್ಚು ಲಾರಿ ಮರಳಿಗೆ ದಾಖಲಾತಿ ನೀಡುವಲ್ಲಿ ಮಾಲೀಕರು ವಿಫಲರಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಮರಳನ್ನ ವಶಪಡಿಸಿಕೊಳ್ಳಲಾಗಿದೆ. 

ಈ ಅಕ್ರಮ‌ ಮರಳು ದಾಸ್ತಾನು ಬಾಬು ಎಂಬುವರಿಗೆ ಸೇರಿದೆಯಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಪರಿಶೀಲನೆ ನಡೆದಿದೆ. ದಾಳಿ ಕುರಿತು ಎಸಿ ಅವರು ಸ್ಪಷ್ಟಪಡಿಸಿದ್ದಾರೆ. ಈ ದಾಳಿ ರಾಗಿಗುಡ್ಡದ ಸರ್ವೆ ನಂಬರ್ 76 ರಲ್ಲಿರುವ ಅಂಲಂಕಾರ್ ತೋಟದಲ್ಲಿ ನಡೆದಿದೆ. 

ಆದರೆ ಈ ಮರಳಿಗೆ ದಾಖಲಾತಿ ಇಲ್ಲದೆ ಇಬ್ಬರು ನಮ್ಮದು ಎಂದೆ ಮುಂದೆಬಂದಿದ್ದು ಮರಳಿನ ಕುರಿತು ದಾಖಲಾತಿಯಿಲ್ಲದ ಕಾರಣ ವಶಕ್ಕೆ ಪಡೆದಿರುವುದಾಗಿ ಉಪವಿಭಾಗಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

Illegal leagl

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close