suddilive || shivamogga
ಮೈದಾನಕ್ಕೆ ಸಿಸಿ ಟಿವಿ ಕಣ್ಗಾವಲು-CCTV surveillance of the ground
ಡಿಸಿ ಕಚೇರಿ ಎದುರಿನ ಮೈದಾನಕ್ಕೆ ಭದ್ರತೆ ಹೆಚ್ಚಳ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈದ್ಗಾ ಮೈದಾನದ ಸುತ್ತಲು CCTV ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪೊಲೀಸ್ ಕಾವಲಿನ ಜೊತೆಗೆ ಸಿಸಿ ಟಿವಿ ಫೂಟೇಜ್ ಅಳವಡಿಸಿರುವುದರಿಂದ ಭದ್ರತೆ ಹೆಚ್ಚಿದೆ.
ಮೈದಾನದ ಮಾಲೀಕತ್ವ ವಿವಾದದ ಬೆನ್ನಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮೈದಾನಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಇಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಈಗ ಈದ್ಗಾ ಮೈದಾನದ ಸುತ್ತಲು CCTV ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಮೈದಾನದ ಸುತ್ತಲು ಒಟ್ಟು 14 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮಹಾನಗರ ಪಾಲಿಕೆ ಮತ್ತು ಪೊಲೀಸ್ ಅಧಿಕಾರಿಗಳು ಇದನ್ನು ಪರಿಶೀಲಿಸುತ್ತಿದ್ದಾರೆ.
CCTV surveillance of the ground