Suddilive || Shivamogga
ಮೀಸಲಾತಿ ವಿರೋಧಿಸಿ ವಿಶ್ವಹಿಂದೂ ಪರಿಷತ್, ಬಜರಂಗದಳ ಪ್ರತಿಭಟನೆ-protest against Muslim reservation -Vishwa Hindu Parishad, Bajrang Dal protest against Muslim reservation
ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲೀರಿಗೆ 4% ಮೀಸಲಾತಿ ನೀಡಿರುವಿದನ್ನ ವಿರೋಧಿಸಿ ಇಂದು ವಿಶ್ವಹಿಙದೂ ಪರಿಷದ್, ಬಜರಂಗದಳ ಪ್ರತಿಭಟನೆ ನಡೆಸಿ ಡಿಸಿ ಮೂಲಕ ರಾಜ್ಯಪಾಲರಿಗೆ ಮನವಿ ನೀಡಲಾಯಿತು.
ಕೆಟಿಟಿಪಿ ಕಾಯಿದೆಯಲ್ಲಿನ ತಿದ್ದುಪಡಿಯು 2 ಕೋಟಿ ರೂ. ವರೆಗಿನ ಸಿವಿಲ್ ವರ್ಕ್ ಗುತ್ತಿಗೆಗಳಲ್ಲಿ 1 ಕೋಟಿ ರೂ.ವರೆಗೆಸರಕು ನತ್ತು ಸೇವಾ ಗುತ್ತಿಗೆಯಲ್ಲಿ ಮುಸ್ಲೀಂರಿಗೆ ಶೇ.4 ಮೀಸಲಾತಿಯನ್ನ ಅನುಮತಿಸಿದೆ. ಈ ಮೀಸಲಾತಿಯು ಸಂವಿದಾನದಲ್ಲಿನ ಆರ್ಟಿಕಲ್ 15 ರ ಉಲ್ಲಂಘನೆ ಆಗಿದೆ.
ರಾಜ್ಯವು ಧರ್ಮ ಮತ್ತು ಜಾತಿ ಆಧಾರದ ಮೇಲೆ ನಾಗರೀಕ ತಾರತಮ್ಯ ಮಾಡುವುದನ್ನ ನಿಷೇಧಿಸಿದರೂ ರಾಜ್ಯ ಸರ್ಕಾರ ಮೀಸಲಾತಿ ತಂದಿರುವುದು ದುರಾದೃಷ್ಟಕರ ಎಂದು ಸಂಘಟನೆ ಈ ಮೀಸಲಾತಿಯು ರಾಷ್ಟ್ರೀಯ ಸಮಗ್ರತೆಗೆ, ಏಕತೆ ಮತ್ತು ಸಾರ್ವಭಭಮಕ್ಕೆ ದಕ್ಕೆ ಉಂಟಾಗಲಿದ್ದು, ರಾಜ್ಯ ಸರ್ಕಾರ ತಕ್ಷಣವೇ ಈ ಆದೇಶವನ್ನ ಹಿಂಪಡೆಯಬೇಕಿದೆ ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷ ವಾಸುದೇವ್, ರಮೇಶ್ ಬಾಬು, ಶಾಸಕ ಚೆನ್ನಬಸಪ್ಪ, ಶಶಿ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಭಟನಾ ಮೆರವಣಿಗೆ ಗೋಪಿ ವೃತ್ತದಿಂದ ಆಗಮಿಸಿ ಡಿಸಿ ಕಚೇರಿಯ ವರೆಗೆ ತಲುಪಿ ನಂತರ ಡಿಸಿಗೆ ಮನವಿ ಸಲ್ಲಿಸಲಾಯಿತು.
protest against Muslim reservation