Suddilive || Shivamogga
The Attigund Fair's annual gathering witnessed Counter Fir
ಅತ್ತಿಗುಂದದ ಅಂತರಘಟ್ಟಮ್ಮ ದೇವಿಯ ಜಾತ್ರೆಯ ನಂತರ ಇಳೆವು ಸಭೆಯಲ್ಲಿ ನಡೆದ ಘಟನೆ ದೂರು ಪ್ರತಿದೂರು ದಾಖಲಾಗಿದೆ.
ಮಂಜುನಾಥ್, ಸಂತೋಷ್, ಪ್ರವೀಣ, ಬೈರಪ್ಪ, ಗೋವಿಂದ ಸೀನಾರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಊರಿನ ಅಂತಘಟ್ಟಮ್ಮ ದೇವಸ್ಥಾನದ ಜಾತ್ರೆ ವಿಚಾರದಲ್ಲಿ ಇಳೆವು ವಿಚಾರದಲ್ಲಿ ಗಲಾಟೆಯಾದ ಪರಿಣಾಮ ದೂರು ಪ್ರತಿ ದೂರು ದಾಖಲಾಗಿದೆ.
ಊರಿನ ಗ್ರಾಮಸ್ಥರೆಲ್ಲರ ಸೇರಿಕೊಡು ಲೆಕ್ಕವನ್ನು ಕೊಟ್ಟು ಅಂತರಘಟ್ಟಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಿ ನಂತರ ಊರಿನ ಜನರಲ್ಲ ಜಾತ್ರೆ ನಡೆಸಿದ 5 ಜನರೇ ಅಂತಘಟ್ಟಮ್ಮ ದೇವಸ್ಥಾನದ ಉಸ್ತುವಾರಿಯನ್ನು ಮುಂದುವರೆಸಿಕೊಂಡು ಹೋಗುವಂತೆ ತಿಳಿಸಿದ್ದಾರೆ.
ಈ ವೇಳೆ ಮಂಜುನಾಥ್, ಸಂತೋಷ್, ಪ್ರವೀಣ, ಬೈರಪ್ಪ, ಗೋವಿಂದ ಸೀನಾ ಇಳೆವು ನೀಡಿ ದೇವರ ಪೂಜೆ ನಡೆಸಬೇಕಿತ್ತು. ಇಳೆವುಯಾಕೆ ಇಟ್ಟಿಲ್ಲ ಎಂದು ಗದರಿದ್ದಾರೆ. ಈ ಹಿಂದೆಯೂ ಸಭೆಯಲ್ಲಿ ಇಳೆವು ಇಟ್ಟಿಲ್ಲ ಹಾಗಾಗಿ ಇಖೆವು ಇಟ್ಟಿಲ್ಲ ಎಂದು ದೂರಿದ್ದಾರೆ. ನಿಮ್ಮ ಗೌಡಿಕೆಯಲ್ಲಿ ಜಾತ್ರೆ ನಡೆದಾಗ ಯಾಕೆ ಇಳೆವು ಇಟ್ಟಿಲ್ಲ ಎಂದು ರಾಜಪ್ಪ ಪ್ರಶ್ನಿಸಿದ್ದಾರೆ.
ಪ್ರಶ್ನಿಸಿದ ರಾಜಪ್ಪನವರ ವಿರುದ್ಧ ಈ 6 ಜನ ಏಕಾಏಕಿ ಆಯುಧಗಳಿಙದ ದಾಳಿ ನಡೆಸಿದ್ದಾರೆ ಎಂದು ಪ್ರತಿದೂರು ದಾಖಲಾಗಿದೆ.
Counter Fir