MrJazsohanisharma

103 ವಯಸ್ಸಿನಲ್ಲೂ ಎದ್ದು ಬಂದ ಶಿವಮ್ಮ-Shivamma console

Suddilive || Shivamogga

103 ವಯಸ್ಸಿನಲ್ಲೂ ಎದ್ದು ಬಂದ ಶಿವಮ್ಮ-Shivamma, who came to console even at the age of 103

ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ನಿವಾಸಕ್ಕೆ ಆಗಮಿಸಿದ ತುಮಕೂರಿನ ತಿಪಟೂರಿನಿಂದ 103 ವರ್ಷದ ಅಜ್ಜಿ ಸಾಂತ್ವಾನ ಹೇಳಿದ್ದಾರೆ. 

ತಿಪಟೂರಿನಿಂದ ಮೃತ ಮಂಜುನಾಥ್ ಕುಟುಂಬಕ್ಕೆ ಸಾಂತ್ವನ ಹೇಳಿದ ಅಜ್ಜಿ ಮಾಧ್ಯಮದಲ್ಲಿ ಈ ಘಟನೆಯನ್ನು ನೋಡಿ ನೋವನ್ನು ಪಟ್ಟು ಶಿವಮೊಗ್ಗಕ್ಕೆ ಆಗಮಿಸಿರುವುದಾಗಿ ಹೇಳಿಕೊಂಡಿದ್ದಾರೆ.

103 ವರ್ಷದ ಶಿವಮ್ಮದೇಶದ ಸೈನಿಕರಿಗೆ ಬಲ ನೀಡಲು ಅಲ್ಲಿಂದ ಬಂದಿರುವುದಾಗಿ ಹೇಳಿದ ಅಜ್ಜಿ ಭಯೋತ್ಪಾದನೆಯನ್ನು ಬೇರು ಸಮೇತ ಕೀಳುವಂತೆ ಹೇಳಿಕೆ ನೀಡಿದ್ದಾರೆ. 

ಘಟನೆಯನ್ನು ಟಿವಿಯಲ್ಲಿ ನೋಡಿ ತಿಪಟೂರಿನಿಂದ ಆಗಮಿಸಿದ ಶಿವಮ್ಮಇವತ್ತು ಈ ರೀತಿ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಹಿಂದೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡಿದರೆ ಏನು ಗತಿ ಎಂದಿರುವ ಶಿವಮ್ಮ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ‌


ಬಸ್ಸಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ಶಿವಮ್ಮಟಿವಿಯಲ್ಲಿ ನೋಡಿ ಮರಗಿ ಹೋಗಿದ್ದಾರೆ. ಮಗನನ್ನು ಕರೆದುಕೊಂಡು ಮಂಜುನಾಥ್ ಮನೆಗೆ ಆಗಮಿಸಿದ ಶಿವಮ್ಮಪಾಕಿಸ್ತಾನದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡಬೇಕಾಗಿ ವಿನಂತಿಸಿಕೊಂಡ ಶಿವಮ್ಮನಮ್ಮ ಸೈನಿಕರಿಗೆ ಮಹಾದೇಶ್ವರ ಹಾಗೂ ಮಂಜುನಾಥ ಸ್ವಾಮಿ ಫಲ ನೀಡಲಿ ಎಂದು ಬೇಡಿಕೊಂಡಿದ್ದಾರೆ. ಸೈನಿಕರಿಗೆ ಒಳ್ಳೆಯ ಆಯುಧ ಕೊಡಿ ಎಂದು ಮೋದಿ ಅವರಿಗೆ ಮನವಿ ಮಾಡಿದ್ದಾರೆ. 

ಧೈರ್ಯವಿದ್ದರೆ ಎದುರಿಗೆ ಬಂದು ಹೊಡೆಯಿರಿ ಎಂದು ಇದೇ ವೇಳೆ ಉಗ್ರರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಸಂಗತಿಗಳನ್ನ ನೋಡಿದರೆ ಜನ ಸಾಮಾನ್ಯರಿಗೆ ಇರುವ ಅಭಿಮಾನ ರಾಜಕಾರಣಿಗಳಿಗೆ ಯಾಕೆ ಇಲ್ಲವೆಂಬುದೆ ಕಟ್ಟಕಡೆಯದಾಗಿ ಪ್ರಶ್ನೆಯೊಂದು ಕಾಡಿದೆ.

Shivama, console

Girl in a jacket

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close