ಮೈದಾನದ ಜಾಗದಲ್ಲಿ ಬೇರೆ ಯಾವ ಚಟುವಟಿಕೆ ನಡೆಯದಂತೆ ರಾಷ್ಟ್ರಭಕ್ತರ ಮನವಿ-Rastra Bhaktara Balaga

 Suddilive || Shivamogga

Rastra Bhaktara Balaga appeal not to hold any other activities on the grounds

Rastra, Balaga

ಶಿವಮೊಗ್ಗ ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರುಗಡೆಯ ಮಹಾನಗರ ಪಾಲಿಕೆಗೆ ಸೇರಿದ ಸರ್ಕಾರಿ ಜಾಗವನ್ನ ಸರ್ಕಾರಿ ಜಾಗವೆಂದು ಘೋಷಿಸಬೇಕೆಂದು ರಾಷ್ಟ್ರಭಕ್ತರ ಬಳಗ ಇಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ನೀಡಿದೆ.

ಹಲವಾರು ದಶಕಗಳಿಂದಲೂ ಸಹ ಸಾರ್ವಜನಿಕ ಉದ್ದೇಶಕ್ಕೆ ಉಪಯೋಗಿಸುತ್ತಾ ಬಂದಿರುವ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಜಾಗವು,  ಸರ್ಕಾರದ ಜಾಗವಾಗಿದ್ದು ಹಾಗು ಸರ್ಕಾರದ ಅಂಗಸಂಸ್ಥೆಯಾದ ಶಿವಮೊಗ್ಗ ಮಹಾನಗರ ಪಾಲಿಕೆಯ ಹಕ್ಕು, ಹಿತಾಸಕ್ತಿ ಒಡೆತನಕ್ಕೆ ಒಳಪಟ್ಟ ಜಾಗವಾಗಿದೆ ಹಾಗಾಗಿ ಕೆಲವು ಬೇಡಿಕೆಯನ್ನ ರಾಷ್ಡ್ರಭಕ್ತರ ಬಳಗ ಆಗ್ರಹಿಸಿದೆ. 

ಮೈದಾನದ ಜಾಗವು ಶಿವಮೊಗ್ಗ ಮಹಾನಗರ ಪಾಲಿಕೆಯ ಸಂಪೂರ್ಣ ಒಡೆತನಕ್ಕೊಳಪಟ್ಟ ಆಸ್ತಿಯಾಗಿದ್ದು ಎಲ್ಲಾ ದಾಖಲೆಗಳಿಂದ ದೃಡಪಡುವಂತಿದ್ದು ಆದ್ದರಿಂದ ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ಮಾತ್ರ ಅನುವುಮಾಡಿಕೊಡತಕ್ಕದ್ದು ಹಾಗೂ ಬೇರೆ ಯಾವುದೇ ಚಟುವಟಿಕೆಗಳಿಗೆ ಆ ಜಾಗವನ್ನು ಬಳಸದಂತೆ ನಿರ್ಭಂದಿಸಬೇಕು.

ಜಾಗದ ವಿವಾದಕ್ಕೆ ಸಂಬಂದಿಸಿದಂತೆ ಆಗಿನ ಮಹಾನಗರ ಪಾಲಿಕೆಯ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದು ಖಾತೆ ಬದಲಾವಣೆಗೆ ಅವಕಾಶವಿಲ್ಲವೆಂದು ದಾಖಲೆ ಸಮೇತ ವಿವರಿಸಿದ್ದರು, ಆದರೂ ಕೆಲವು ಸಂಸ್ಥೆಗಳು ಹಾಗು ಪಾಲಿಕೆಯ ಕೆಲವು ಅಧಿಕಾರಿಗಳ ಅವ್ಯವಹಾರದ ಫಲವಾಗಿ ಸದರಿ ಜಾಗದ ಖಾತೆಯನ್ನು ನಿಯಮಬಾಹಿರವಾಗಿ ಬದಲಾವಣೆ ಮಾಡಲಾಗಿದೆ, ಆದ್ದರಿಂದ ತಕ್ಷಣ ಈ ನಿಯಮಬಾಹಿರವಾಗಿ ಮಾಡಲಾದ ಖಾತೆಯನ್ನು ರದ್ದುಪಡಿಸಿ ಸ್ವತ್ತನ್ನು ಪಾಲಿಕೆ ತನ್ನ ವಶಕ್ಕೆ ಪಡೆಯಬೇಕು.

ನಿಮಗೆ ತಿಳಿದಂತೆ ಇತ್ತೀಚೆಗೆ ಕೆಲವು ದುಷ್ಕರ್ಮಿಗಳು ಈ ಜಾಗವನ್ನು ಅತಿಕ್ರಮಿಸಿ ರಾತ್ರೋರಾತ್ರಿ ಬೇಲಿ ಹಾಕಿ ನಗರದಲ್ಲಿ ಪ್ರಕ್ಷಬ್ಧವಾತಾವರಣ ನಿರ್ಮಾಣವಾಗಲು ಕಾರಣರಾಗಿದ್ದರು, ಅಲ್ಲದೆ ಬೇಲಿ ಹಾಕಲು ರೈಲ್ವೇ ಇಲಾಖೆಯ ಕಂಬಿಗಳನ್ನು ಬಳಸಿದ್ದು ಇವುಗಳು ಭಾರತ ಸರ್ಕಾರದ ಆಸ್ತಿಯಾಗಿದ್ದು ಅವುಗಳನ್ನು ಕದ್ದು ತಂದಿರುವುದು ಗಂಭೀರ ಅಪರಾಧ ಪ್ರಕರಣವಾಗಿರುತ್ತದೆ. 

ಆದ್ದರಿಂದ ತಾವುಗಳು ಈ ವಿಷಯವಾಗಿ ಮಾನ್ಯ ಜಿಲ್ಲಾ ರಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಗತ್ಯಬಿದ್ದರೆ ಈ ದುಷ್ಕರ್ಮಿಗಳ ವಿರುದ್ಧ ರೈಲ್ವೇ ಇಲಾಖೆಗೆ ದೂರು ಕೊಟ್ಟು ಕೂಡಲೆ ಅವರನ್ನು ಬಂಧಿಸಿ ಕಾನೂನುಕ್ರಮ ಜರುಗಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.

ಈ ವೇಳೆ ಮಾಜಿ ಡಿಸಿಎಂ ಈಶ್ವರಪ್ಪ, ಪುತ್ರ ಕೆ.ಈ.ಕಾಂತೇಶ್, ವಿಶ್ವಾಸ್ ಮೊದಲಾದವರು ಉಪಸ್ಥಿತರಿದ್ದರು. 

Rastra Bhaktara Balaga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close