Suddilive || Bhadravathi
ತೋಟದಲ್ಲಿ ಚಿರತೆ ಪತ್ಯಕ್ಷ- Leopard sighting in the garden
ತಾಲೂಕಿನ ಕೂಡ್ಲಿಗಿರೆ ಸಮೀಪದ ಟಿವಿಎಸ್ ಫಾರಂನಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಚಿರತೆಯನ್ನ ನೋಡಿ ನಾಯಿಗಳು ಬೆದರಿಸಿಕೊಂಡು ಹೋಗಿರುವ ದೃಶ್ಯ ಲಭ್ಯವಾಗಿದೆ.
ಮಾಜಿ ಎಪಿಎಂಸಿ ಸದಸ್ಯರು ಆದ ಟಿವಿ ಸುಜಾತಮ್ಮನವರ ತೋಟದ ಮನೆಯಲ್ಲಿ ಚಿರತೆ ರಾತ್ರಿ 9:28ರ ಸಮಯದಲ್ಲಿ ಏಕಾಏಕಿ ಅವರ ಸಾಕು ನಾಯಿಗಳು ಬೊಗಳಿವೆ. ನಾಯಿಗಳು ಬೊಗಳುತ್ತಿರುವುದರಿಂದ ನೋಡಲು ಮೇಡಂ ಬಾಗಿಲ ಬಳಿ ಬಂದಿದ್ದಾರೆ.
ಒಳಗಿನಿಂದಲೇ ಗಮನಿಸಿದಾಗ ಚಿರತೆಯನ್ನು ಕಂಡು ಭಯಗೊಂಡಿದ್ದಾರೆ. ಸಿಸಿ ಕ್ಯಾಮೆರಾ ಅಳವಡಿಕೆ ಮಾಡುವ ಸ್ನೇಹಿತರಾದ ಕೋಡಿಹಳ್ಳಿ ಸತೀಶ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ನಾಗರಾಜಣ್ಣನವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ರಾತ್ರಿ ತಕ್ಷಣ ಬಂದ ನಾಯಕರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಚಿರತೆಯು 3-4 ಬಾರಿ ಮನೆ ಸುತ್ತ ಓಡಾಡಿರುವ ದೃಶ್ಯ ಕಂಡು ಬಂದಿದೆ.
Leopard sighting in the garden