Suddilive || Shivamogga
ಶಾಸಕ ಚೆನ್ನಬಸಪ್ಪ ಎಂಟ್ರಿಯಾಗುತ್ತಿದ್ದಂತೆ ರಣರಂಗವಾದ ಸಭೆ-The meeting turned into a battleground as MLA Chennabasappa entered
ಶಿವಮೊಗ್ಗದ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆ ರಣರಂಗವಾಗಿದೆ. ವಿಧಾನ ಸಭೆಯಲ್ಲಿ ಅಮಾನತ್ತುಗೊಂಡ ಶಾಸಕ ಚೆನ್ನಬಸಪ್ಪ ಇಂದು ಜಿಪಂಗೆ ಬಂದಾಗ ಕಾಂಗ್ರೆಸ್ ಶಾಸಕರು ಶಾಸ ಮುಗಿದು ಬಿದ್ದಿರುವ ಘಟನೆ ನಡೆದಿದೆ.
ಇಂದು ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ಜಿಪಂನ ಕೆಡಿಪಿ ಸಭೆ ನಡೆಯುವಾಗ ಸಿಮ್ಸ್ ನ ಅನುಪಾಲನಾ ವರದಿ ಓದುವಾಗ ಎಂಎಲ್ ಸಿ ಬಲ್ಕಿಸ್ ಬಾನು ಸಸ್ಪೆಂಡ್ ಆದ ಶಾಸಕರು ಸಭೆಗೆ ಹಾಜರಾಗ ಬಹುದಾ ಎಂದು ಪ್ರಶ್ನಿಸಿದ್ದಾರೆ.
ಕುಪಿತಗೊಂಡ ಶಾಸಕ ಚೆನ್ನಬಸಪ್ಪ ಆಹ್ವಾನ ಇರುವುದಕ್ಕೆ ಸಭೆಗೆ ಬಂದಿರುವುದಾಗಿ ಏರು ಧ್ವನಿಯಲ್ಲಿ ಹೇಳಿದ್ದಾರೆ. ತೂತು... ಮೈಮೈ... ಎಂದು ಇಬ್ಬರು ಶಾಸಕರು ಬೈದಾಡಿಕೊಂಡಿದ್ದಾರೆ. ಪ್ರಕರಣ ವಿಕೋಪಕ್ಕೆ ಹೋಗಿದೆ. ಬಲ್ಕಿಸ್ ಬಾನುಗೆ ಶಾಸಕ ಗೋಪಾಲ ಕೃಷ್ಣ ಬೇಳೂರು ಸಾಥ್ ನೀಡಿದ್ದಾರೆ ಶಾಸಕ ಚೆನ್ನಬಸಪ್ಪನವರು ಬಲ್ಕಿಸ್ ಬಾನುಗೆ ಬಳಸಿದ ಶಬ್ದಗಳನ್ನ ಹಿಂಪಡೆಯ ಬೇಕು ಎಂದು ಆಗ್ರಹಿಸಿದ್ದಾರೆ.
ಇದರಿಂದ ಶಾಸಕ ಚೆನ್ನಬಸಪ್ಪ ನೀವೆ ಸಭೆ ನಡೆಸಿ ಎಂದು ಮೈಕೊಡವಿ ಹೊರಡುವಾಗ ಶಾಸಕಿ ಶಾರದ ಪೂರ್ಯನಾಯ್ಕ್ ಹಾಗೂ ಸಚಿವ ಮಧು ಬಂಗಾರಪ್ಪ ಶಾಸಕರನ್ನ ಸಮಾಧಾನಗೊಳಿಸಿದ್ದಾರೆ. ನಂತರ ಸಭೆ ಎಂದಿನಂತೆ ಮುಂದು ವರೆದಿದೆ.
turned into a battleground