Suddilive || Anandpura
ಲಾರಿ ಪಲ್ಟಿ-Lorry overturned
ಅಪಘಾತ ತಪ್ಪಿಸಲು ಹೋದ ಲಾರಿಯೊಂದ ಆನಂದಪುರ ಹೋಬಳಿಯ ಆಚಾಪುರದ ಸಹಕಾರ ಭವನದ ಬಳಿ ಪಲ್ಟಿ ಹೊಡೆದಿದೆ.
ಶಿವಮೊಗ್ಗದ ಆಹಾರ ನಿಗಮದಿಂದ ಸಾಗರದ ಎಪಿಎಂಸಿಗೆ ಗೋಧಿ ತುಂಬಿದ ಲಾರಿ ಹೋಗುವಾಗ ಆಚಾಪುರದಲ್ಲಿ ಖಾಸಗಿ ಬಸೊಂದು ನಿಂತಿತ್ತು. ಆ ಬಸ್ ನ್ನ ಹಿಂದಿಕ್ಕಿ ಮುಂದೆ ಸಾಗುವಾಗ ಎದುರಿನಿಂದ ಬಂದ ಕಾರು ಏಕಾಏಕಿ ನುಗ್ಗಿದ ಪರಿಣಾಮ ಲಾರಿ ಚಾಲಕ ಲಾರಿಯನ್ನ ಎಡಕ್ಕೆ ಎಳೆದಿದ್ದಾರೆ.
ಪರಿಣಾಮ ಲಾರಿ ಪಲ್ಟಿ ಹೊಡೆದಿದೆ. ಚಾಲಕನಾದ ಸಿಂಗಂ ಎಂಬುವರಿಗೆ ಗಾಯಗೊಂಡಿದೆ. ಲಾರಿ ಮಾಲೀಕ ವಿಜಯರಿಗೆ ಈ ಲಾರಿ ಸೇರಿದೆ. ಶಿವಮೊಗ್ಗದ ಲಯನ್ ಸಫಾರಿ ಎದುರಿನ ಸರ್ಕಾರಿ ಗೋಡನ್ ನಿಂದ ಸಾಗರಕ್ಕೆ ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ. ಆನಂದ ಪುರ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
Lorry overturned