Suddilive || Bhadravathi
ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಭದ್ರಾವತಿಯಲ್ಲಿ ಬೃಹತ್ ಪ್ರತಿಭಟನೆ-Massive protest in Bhadravati against Waqf Amendment Act
ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ವಿರುದ್ಧ ಗುರುವಾರ ಅಂಜುಮನ್ ಎ ಇಸ್ಲಾಹುಲ್ ಮುಸ್ಲಿಮೀನ್ ವತಿಯಿಂದ ಪ್ರತಿಭಟನೆ ನಡೆದಿದೆ.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಗರಸಭಾ ಸದಸ್ಯ ಬಿಕೆ ಮೋಹನ್ ಡಾ|| ಬಿ ಆರ್ ಅಂಬೇಡ್ಕರ್ ಸರ್ವಜನರ ಹಿತಕ್ಕಾಗಿ ಸಂವಿಧಾನವನ್ನು ರಚಿಸಿದಂತವರು ಅದೇ ರೀತಿ ಬಸವಣ್ಣನವರು ಸರ್ವರನ್ನು ಗೌರವಿಸಿ ಸರ್ವ ಜನಾಂಗವನ್ನು ಪ್ರೀತಿಸು ಎಂದು ಪ್ರತಿಪಾದಿಸಿದ ದೇಶವಿದು ಎಂದು ತಿಳಿಸಿದರು
ಸಂವಿಧಾನ ರಚನೆ ಆದ ನಂತರ ಇದುವರೆಗೂ ಇಂತಹ ತಿದ್ದುಪಡಿಗಳು ನಡೆದಿಲ್ಲ ಇದು ಬಾವ್ಯತೆಗೆ ಧಕ್ಕೆ ಉಂಟುಮಾಡುತ್ತದೆ ಮಲತಾಯಿ ಧೋರಣೆ ಮಾಡದೆ ಸರ್ವ ಜನಾಂಗವನ್ನು ಏಕ ರೀತಿ ಕಾಣುವಂತೆ ಬಿಕೆ ಮೋಹನ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು
ನಾವು ಸಹ ಭಾರತೀಯರು ನಮ್ಮನ್ನು ವರ್ಣಭೇದ ಮಾಡದೆ ತಮ್ಮಲ್ಲಿ ಒಂದು ಎಂಬ ಭಾವನೆಯನ್ನು ಮೂಡಿಸಲು ಅವಕಾಶ ನೀಡಿ ಎಂದು ಅಂಜುಮನ್ ಇಸ್ಲಾಹುಲ್ ಮುಸ್ಲಿಂ ಸಂಘಟನೆಯ ಅಧ್ಯಕ್ಷ ಮುರ್ತುಜಾ ಖಾನ್ ಅಭಿಪ್ರಾಯಸಿದರು.
ಕೇಂದ್ರ ಸರ್ಕಾರವು ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದು ಇದು ಅಸಂವಧಾನಿಕ ನಡೆಯಾಗಿದೆ ಆದ್ದರಿಂದ ಭಾರತೀಯ ಪ್ರಜೆಗಳಾದ ನಾವು ಈ ಕಾಯ್ದೆಯನ್ನು ಹಿಂಪಡೆದು ಮರು ಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ವಕ್ಸ್ ಬೋರ್ಡಿನ ಆಸ್ತಿ ಸರ್ಕಾರದಿಂದ ಪಡೆದಿದ್ದಲ್ಲ ಅಲ್ಪಸಂಖ್ಯಾತರ ನಡೆಸುತ್ತಿರುವ ವಿವಿಧ ಶಾಲೆಗಳು ಮಸೀದಿಗಳು ಗಳಿಂದ ಪಡೆದಂತಹ ಹಣದಲ್ಲಿ ಅಲ್ಪ ಮತ್ತು ಕಳುಹಿಸಿ ಶೇಖರಿಸಿ ಆ ಹಣದಿಂದ ಆಸ್ತಿಗಳನ್ನು ಮಾಡಲಾಗಿದೆ ಹೊರತು ಯಾರಿಂದಲೂ ಸಹ ಆಸ್ತಿಯನ್ನು ಕಿತ್ತುಕೊಂಡಿಲ್ಲ ಎಂದು ತಿಳಿಸಿದರು
ಮಾಜಿ ಪ್ರಧಾನಿ ದಿವಂಗತ ವಾಜಿಪೇಯಿ ನಂತರ 2014 ರಲ್ಲಿ ಬಂದಂತ ಭಾಜಪ ಸರ್ಕಾರವು ಅಲ್ಪಸಂಖ್ಯಾತರಾದ ತಮ್ಮ ಮೇಲೆ ಗದಪ್ರಹಾರ ಮಾಡುತ್ತಾ ಮಲತಾಯಿ ಧೋರಣೆಯನ್ನು ತೋರುತ್ತಿದೆ ಎಂದು ಸಿಎಂ ಖಾದರ್ ಆರೋಪಿಸಿದರು
ಈ ರೀತಿ ನಡೆದುಕೊಂಡ ಬ್ರಿಟಿಷರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡರು ಮುಂಬರುವ ದಿನಗಳಲ್ಲಿ ಭಾಜಪ ಸರ್ಕಾರ ಸಹ ಇದಕ್ಕೆ ಹೊರತಾಗಿಲ್ಲ ಎಂದರು ತಾವುಗಳು ಸಹ ಭಾಜಪ ಸರ್ಕಾರಕ್ಕೆ ಮತವನ್ನು ನೀಡಿದ್ದು ಇದರಿಂದಾಗಿಯೇ ಸರ್ಕಾರವು ಶೇ. 80 ಮತ ಪಡೆಯಲು ಸಹಕಾರಿಯಾಗಿದೆ ಭಾಜಪ ಸರ್ಕಾರ ನಡೆಸಲು ಅಲ್ಪಸಂಖ್ಯಾತರ ಮತವನ್ನು ಪಡೆದಿದೆ ಮುಂದಿನ ದಿನಗಳಲ್ಲಿ ಈ 80ರ ಅಂಶವು ಶೇ 8 ಕ್ಕೆ ಇಳಿಸಿಕೊಳ್ಳುವುದು ನಿಶ್ಚಿತ ಎಂದು ತಿಳಿಸಿದರು ದೇಶದಲ್ಲಿ ಸರ್ವ ಜನಾಂಗಕ್ಕೂ ಒಂದೇ ಕಾನೂನು ಎಂದು ಹೇಳಿ ಅಲ್ಪಸಂಖ್ಯಾತರಾದ ಮುಸ್ಲಿಮರ ವಿರುದ್ಧ ಈ ರೀತಿ ತಿದ್ದುಪಡಿಗಳನ್ನು ತಂದು ಜನಾಂಗಕ್ಕೆ ಅವಮಾನ ಉಂಟುಮಾಡುತ್ತಿದೆ ಭಾಜಪ ಸರಕಾರ ಎಂದರು
ಪ್ರತಿಭಟನೆಯಲ್ಲಿ ಮುಸಾಫೀರ್ ಭಾಷಾ, ಜೆ ಬಿ ಟಿ ಬಾಬು, ಅಮೀರ್ ಜಾನ್, ಬಾಬಾ ಜಾನ್, ಮಹಮ್ಮದ್ ಸನಾವುಲ್ಲಾ, ರಾಜೇಂದ್ರ, ಬಿಕೆ ಜಗನ್ನಾಥ್ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು
ರಂಗಪ್ಪ ವೃತ್ತದಲ್ಲಿ ನಡೆದ ಪ್ರತಿಭಟನೆಯ ಮುನ್ನ ಮಾಧವಚಾರ್ ವೃತ್ತದಿಂದ ರಂಗಪ್ಪ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು ರಂಗಪ್ಪ ವೃತ್ತದಲ್ಲಿ ತಹಶೀಲ್ದಾರ್ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು . ಪ್ರತಿಭಟದ ಕಾರರು ತೋಳುಗಳಿಗೆ ಕಪ್ಪು ಪಟ್ಟಿ ಧರಸಿ ವಕ್ಫ್ ಕಾಯ್ದೆ ತಿದ್ದು ಪಡಿಯನ್ನು ಹಿಂಪಡೆಯುವಂತೆ ಅಗ್ರಹಿಸಿದರು.
Massive protest in Bhadravati