Suddilive || Shivamogga
ಮಹಿಷಿ ಮಠದಲ್ಲಿ 300 ಕೋಟಿ ಹಣ ಇಡಲಾಗಿದೆ ಎಂಬ ಅನುಮಾನಕ್ಕೆ ನಡೆದಿತ್ತು ದರೋಡೆ, ಡಕಾಯಿತರಿಗೆ ಸಿಕ್ಕಿದ್ದೆಷ್ಟು?The robbery was carried out on suspicion that Rs 300 crores were kept in Mahishi Math, this is how much the robbers got
ಏ.5 ರಂದು ರಾತ್ರಿ ಮಹಿಷಿಯ ಉತ್ತರಾಧಿ ಮಠದಲ್ಲಿ ನಡೆದ ದರೋಡೆ ಪ್ರಕರಣದಲ್ಲಿ 12 ಜನ ಆರೋಪಿಗಳನ್ನ ಮಾಳೂರು ಪೊಲೀಸರು ಬಂಧಿಸಿದ್ದಾರೆ. ಮಠವನ್ನ ದರೋಡೆ ಮಾಡಲು ಆರೋಪಿಗಳ ಕಥೆಗಳನ್ನ ಎಸ್ಪಿ ಮಿಥುನ್ ಕುಮಾರ್ ಇಂದು ಮಾಧ್ಯಮಗಳ ಎದುರು ಬಿಚ್ಚಿಟ್ಟಿದ್ದಾರೆ.
ನಿನ್ನೆ ಆರೋಪಿಗಳ ಬಂಧನಕ್ಕೆ ತೆರಳಿದ ವೇಳೆ ಶಿಕಾರಿಪುರದ ಶ್ರೀನಿವಾಸ ಯಾನೆ ಸೀನ ತಪ್ಪಿಸಿಕೊಳ್ಳಲು ಹೋಗಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿತ್ತು. ಉಳಿದ 12 ಜನರನ್ನೂ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಎಸ್ಪಿ ಮಿಥುನ್ ಕುಮಾರ್ ಏ.5 ರಂದು ರಾತ್ರಿ ಮುಸುಕುದಾರಿಯಾಗಿ ಬಂದು ಆಯುಧಗಳನ್ನ ತೋರಿಸಿ ಮಹಿಷಿ ಉತ್ತರಾಧಿ ಮಠದಲ್ಲಿ ದರೋಡೆ ಮಾಡಲಾಗಿದೆ. ದರೋಡೆ ನಡೆಸಿದ್ದವರು ಕ್ಲೂ ಬಿಟ್ಟು ಹೋದ ಕಾರಣ ಕ್ಲೂವಿನ ಜಾಡು ಹಿಡಿದ ಪೊಲೀಸರು ಮೊದಲಿಗೆ ಸೀನನ್ನ ಬಂಧಿಸಿರುವುದಾಗಿ ವಿವರಿಸಿದರು.
ಮಠದಲ್ಲಿ ಹಣ 300 ಕೋಟಿ ಹಣ ಇದೆ ಎಂಬ ರೂಮರ್ಸ್ ಸೃಷ್ಠಿಸಿಕೊಂಡು ಹಣವನ್ನ ಲಫ್ಟಾಯಿಸಲು ಸಂಚು ರೂಪಿಸುತ್ತಾರೆ. ಶ್ರೀನಿವಾಸ್ ಮತ್ತು ರಿಪ್ಪನ್ ಪೇಟೆ ಪೃಥ್ವಿರಾಜ್ 300 ಕೋಟಿ ಹಣ ಹೊಡೆದು ಸೆಟ್ಲು ಆಗಲು ಪ್ಲಾನ್ ಮಾಡುತ್ತಾರೆ. ಇವರ ಸ್ನೇಹಿತ ಅಭಿಯನ್ನ ಸೇರಿ ಪ್ಲಾನ್ ಗಳನ್ನ ಮಾಡುತ್ತಾರೆ.
ಎರಡು ಮೂರು ಬಾರಿ ಮಹಿಷಿಗೆ ಬೈಕ್ ನಲ್ಲಿ ಹೋಗಿ ಬಂದಿದ್ದರು. ಈ ಮಹಿಷಿ ಮಠದಲ್ಲಿಯೇ 300 ಕೋಟಿ ಹಣ ಇಡಲಾಗಿದೆ ಎಂದು ತಿಳಿದು ಆ ಹಣವನ್ನ ಎಗುರಿಸಲು ಶನಿವಾರ ಏ.5 ರಂದು ರಾತ್ರಿ ಹಣ ಎಗುರಿಸಲು ದರೋಡೆ ನಡೆಸುತ್ತಾರೆ. ಆಯುಧಗಳನ್ನ ಹಿಡಿದು 300 ಕೋಟಿ ಹಣ ಕೊಡಿ ಎಂದು ಗದರಿಸುತ್ತಾರೆ. ಆಗ ಮಠದ ಜನ 50 ಸಾವಿರ ಹಣವಿದೆ ಎಂದು ಹೇಳಿದಾಗ ಆ ಹಣವನ್ನ ಪಡೆದುಕೊಂಡು ದರೋಡೆ ನಡೆಸಿದ್ದರು.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಸುರೇಶ ಯಾನೆ ನೇರಲೆ ಸುರೇಶ, ಸತೀಶ, ಯಾನೆ ಸತ್ಯನಾರಾಯಣ, ಪೃಥ್ವಿರಾಜ್, ಸಿರಿ ಯಾನೆ ಸಿರಿಕಾಂತ್, ಅಭಿಲಾಶ ಯಾನೆ ಅಭಿ, ರಾಕೇಶ್, ಭರತ ಯಾನೆ ಚಿಟ್ಟೆ, ಪವನ ಯಾನೆ ಗಿಡ್ಡಪವನ್, ರಮೇಶ ಯಾನೆ ನವೀನ, ನವೀನ ಕುಮಾರ್ ಯಾನೆ ಡೈಮೆಂಡ್ ನವೀನ, ಕರಿಬಸಪ್ಪ ಆರ್ ಸೇರಿ 12 ಜನರನ್ನ ಬಂಧಿಸಲಾಗಿದೆ. ಇವರೆಲ್ಲರೂ ಶಿವಮೊಗ್ಗದವರು ಎಂದು ಎಸ್ಪಿ ಸ್ಪಷ್ಟಪಡಿಸಿದರು.
The robbery was carried out on suspicion