ಟ್ರಾನ್ಸ್ ಫಾರಂ ತಪಾಸಣೆ ವೇಳೆ ವಿದ್ಯತ್ ಶಾಕ್ ಹೊಡೆದು ಕೆಳಗೆ ಬಿದ್ದ ಮೆಸ್ಕಾಂ ಮೆಕಾನಿಕ್-Mescom mechanic falls down

 Suddilive || Shivamogga

ಟ್ರಾನ್ಸ್ ಫಾರಂ ತಪಾಸಣೆ ವೇಳೆ ವಿದ್ಯತ್ ಶಾಕ್ ಹೊಡೆದು ಕೆಳಗೆ ಬಿದ್ದ ಮೆಸ್ಕಾಂ ಮೆಕಾನಿಕ್-Mescom mechanic falls down after being shocked by electricity while inspecting a transformer

Mechanic, falls down
ಸಾಂಧರ್ಭಿಕ ಚಿತ್ರ


ಟ್ರಾನ್ಸ್ ಫಾರಂ ತಪಾಸಣೆಗೆ ತೆರಳಿದ್ದ ಮೆಸ್ಕಾಂನ ಮೆಕಾನಿಕ್ ಗೆ ವಿದ್ಯುತ್ ಶಾಕ್ ಹೊಡೆದು ಒದ್ದಾಡಿ ನೆಲಕ್ಕೆ ಬಿದ್ದಿರುವ ಘಟನೆ ವರದಿಯಾಗಿದೆ.‌   

ಬೇರೊಂದು ಟ್ರಾನ್ಸ್ ಫಾರಂನಿಂದ ವಿದ್ಯುತ್ ಸಂಪರ್ಕ ಪಡೆದಿದ್ದ ಕಾರಣ ಟ್ರಾನ್ಸಫಾರಂ ತಪಾಸಣೆ ಮಾಡುತ್ತಿದ್ದ ಮೆಸ್ಕಾಂ ಮೆಕಾನಿಕ್ ಶ್ರೀನಿವಾಸ್ ಅವರಿಗೆ ವಿದ್ಯುತ್ ಶಾಕ್ ಹೊಡೆದಿದೆ. ವಿದ್ಯುತ್ ಶಾಕ್ ನಿಂದ ಒದ್ದಾಡಿ ನೆಲಕ್ಕೆ ಬಿದ್ದಿರುವ ಘಟನೆ ನಡೆದಿದೆ.

ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಬಿ ಬ್ಲಾಕ್ 3rd ಕ್ರಾಸ್ ನಲ್ಲಿನ  ಪರಿವರ್ಥಕ ಕೇಂದ್ರ ವಿಫಲವಾಗಿದ್ದು ಇದರ ತಪಾಸಣೆಗೆ ಮೆಸ್ಕಾಂನ ಮೆಕಾನಿಕ್ ಶ್ರೀನಿವಾಸ್ ಮತ್ತು ಇತರೆ ಸಿಬ್ಬಂದಿಗಳು ತಪಾಸಣೆಗೆ ತೆರಳಿದ್ದರು. 

ಅಲ್ಲಿನ ಎರಡು ಅಂಗಡಿಗಳ ಮಾಲೀಕರು ಪರಸ್ಪರ ಒಪ್ಪಂದದಿಂದ ಪದೇ ಪದೇ ವಿದ್ಯುತ್ ಕೊರತೆ ಎದುರಿಸುತ್ತಿದ್ದ ಅಂಗಡಿಗೆ ವಿದ್ಯುತ್ ಸಂಪರ್ಕ ಪಡೆಯಲು ಅವಕಾಶ ಮಾಡಿಕೊಟ್ಟ ಪರಿಣಾಮ ವಿದ್ಯುತ್ ರಿವರ್ಸ್ ಹೊಡೆದು ಟ್ರಾನ್ಸ್ ಫಾರಂ ನ ಬಳಿ ಬಳಿ ಕೆಲಸ ಮಾಡುತ್ತಿದ್ದ ಮೆಕಾನಿಕ್ ಗೆ ವಿದ್ಯುತ್ ಶಾಕ್ ಹೊಡೆದಿದೆ.   

ಮೆಕಾನಿಕ್ ಶ್ರೀನಿವಾಸ್ ವಿದ್ಯುತ್ ಶಾಕ್ ನಿಂದ ಟ್ರಾನ್ಸ್ ಫಾರಂ ನಿಂದ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಸಣ್ಣ ಪ್ರಮಾಣದಲ್ಲಿ ಅವಘಡ ಸಂಭವಿಸಿದ್ದು ಶ್ರೀನಿವಾಸ್ ಪ್ರಾಣಾಪಾಯದಿಂದ ಬಜಾವ್ ಆಗಿದ್ದಾರೆ.  ತುಂಗ ನಗರ ಪೊಲೀಸ್ ಠಾಣೆಯಲ್ಲಿ ಎರಡು ಅಂಗಡಿಯ ಮಾಲೀಕರ ವಿರುದ್ಧ ದೂರು ದಾಖಲಾಗಿದೆ. 

Mescom mechanic falls down

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close