ಸಿಎನ್ ಜಿ ಗ್ಯಾಸ್ ತುಂಬುವಾಗ ಅವಘಡ, ಭದ್ರಾವತಿ ತಾಲೂಕಿನ ಯುವಕ ಸಾವು-accident while filling CNG gas

 Suddilive || Shivamogga || Chitradurga

 ಸಿಎನ್ ಜಿ ಗ್ಯಾಸ್ ತುಂಬುವಾಗ ಅವಘಡ, ಭದ್ರಾವತಿ ತಾಲೂಕಿನ ಯುವಕ ಸಾವು-A young man from Bhadravati taluk died in an accident while filling CNG gas.

CNG, Gas

ಚಿತ್ರದುರ್ಗದಲ್ಲಿ ಸಿಎನ್ ಜಿ ಗ್ಯಾಸ್ ನ್ನ ಲಾರಿಯೊಂದಕ್ಕೆ ತುಂಬಿಸುವ ವೇಳೆ ಬ್ಲಾಸ್ಟ್ ಆದ ಕಾರಣ ಭದ್ರಾವತಿ ತಾಲೂಕಿನ ಯುವಕ ಪ್ರಾಣ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.

ಚಿತ್ರದುರ್ಗದಲ್ಲಿ ಸಿಎನ್ ಜಿ ಗ್ಯಾಸ್ ನ್ನ ಲಾರಿಗೆ ಡಂಪ್ ಮಾಡುವಾಗ ಗ್ಯಾಸ್ ಬಸ್ಟ್ ಆಗಿದೆ. ಸಿಎನ್ ಜಿ ಗ್ಯಾಸ್ ನ್ನ ಲಾರಿಗೆ ತುಂಬಿಸಿ ಶಿವಮೊಗ್ಗದ ಕಡೆ ಹೊರಡುವಾಗ ಅವಘಡ ಸಂಭವಿಸಿದೆ. ಈ ಅವಘಡದಲ್ಲಿ ಭದ್ರಾವತಿ ತಾಲೂಕಿನ ಗೋಣಿಬೀಡಿನ ಕಂಬದಾಳು ಹೊಸೂರಿನ ಯುವಕ ಲಕ್ಷ್ಮಣ ಎಂಬ 27 ವರ್ಷದ ಯುವಕ ಸಾವನ್ನಪ್ಪಿದ್ದಾನೆ.

ಲಕ್ಷ್ಮಣ್ ಶಿವಮೊಗ್ಗದ ಏರ್ ಪೋರ್ಟ್ ನಲ್ಲಿ ಟ್ಯಾಕ್ಸಿ ಚಲಾಯಿಸಿಕೊಂಡಿದ್ದು, ಇತ್ತೀಚೆಗೆ ಲಾರಿಗಳಿಗೆ ಸಿಎನ್ ಜಿ ಗ್ಯಾಸ್ ತುಂಬಿಸುವ ಕೆಲಸಕ್ಕೆ ಸೇರಿಕೊಂಡಿದ್ದರು. ಇವರ ಸಾವಿಗೆ ಏರ್ ಪೋರ್ಟ್ ನ ಟ್ಯಾಕ್ಸಿ  ಚಾಲಕರ ಮಾಲೀಕರ ಸಂಘದ ಅಧ್ಯಕ್ಷ ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. 

accident while filling CNG gas.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close