ಕಿರಾಣಿ ಅಂಗಡಿಯಲ್ಲಿ ಕಳವು -Theft at a grocery store

 Suddilive || Shivamogga

ಕಿರಾಣಿ ಅಂಗಡಿಯಲ್ಲಿ ಕಳವು -Theft at a grocery store

Theft, store

ಶಿವಮೊಗ್ಗ ಓಟಿ ರಸ್ತೆಯಲ್ಲಿರುವ ಕಿರಾಣಿ ಅಂಗಡಿಯಲ್ಲಿ ಅಪರಿಚಿತ ಬಾಲಕನೋರ್ವ ನುಗ್ಗಿ  ಕಳ್ಳತನ ಮಾಡಿರುವ ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಕೆಂಚರಾಯನ ಬೀದಿಯಲ್ಲಿ ಸವಿತಾ ಎಂಬುವರು ಜೀವನೋಪಾಯಕ್ಕಾಗಿ ಕಿರಾಣಿ ನಡೆಸುತ್ತಿದ್ದು ಅಂಗಡಿಯ ಹಿಂಭಾಗದಲ್ಲಿಯೇ ಮನೆ ಮಾಡಿಕೊಂಡಿದ್ದರು. 

ಮಧ್ಯಾಹ್ನ ಊಟಕ್ಕೆಂದು ಒಳಗೆ ಹೋದ ವೇಳೆ ಅಂಗಡಿಯಲ್ಲಿ ಏನೋ ಶಬ್ಧ ಕೇಳಿದೆ. ಶಬ್ದ ಆಲಿಸಿ ಬಂದಾಗ ಅಪರಿಚಿತ ಬಾಲಕನೋರ್ವ ಅಂಗಡಿಯ ಕ್ಯಾಶ್ ಡ್ರಾಗೆ ಕೈಹಾಕಿ 1500 ರೂ. ಕೈಹಾಕಿ ಕಿತ್ತುಕೊಂಡು ಹೋಗಿದ್ದಾನೆ. ಈ ಘಟನೆ  ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

Theft at a grocery store

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close