Suddilive || Bhdravathi
ನಸ್ರುಲ್ಲಾನ ಕಾಲಿಗೆ ಬಿತ್ತು ಗುಂಡು-Nasrullah was shot in the leg
ಭದ್ರಾವತಿಯಲ್ಲಿ ಮತ್ತೊಮ್ಮೆ ಗುಂಡಿನ ಶಬ್ಧ ಕೇಳಿ ಬಂದಿದೆ. ಆರೋಪಿಯನ್ನ ಕರೆತರಲು ಹೋದಾಗ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಲಾಗಿದೆ.
ಗಾಂಜಾ ಪ್ರಕರಣದಲ್ಲಿ ನಸ್ರುಲ್ಲಾ ಎಂಬ ವ್ಯಕ್ತಿ ಪ್ರಮುಖ ಆರೋಪಿಯಾಗಿದ್ದ. ಆತನನ್ನ ಭದ್ರಾವತಿ ಓಲ್ಡ್ ಪೊಲೀಸ್ ಠಾಣೆ ಪಿಎಸ್ಐ ಚಂದ್ರ ಶೇಖರ್ ಅವರ ನೇತೃತ್ವದಲ್ಲಿ ಇಂದು ಬೆಳಗ್ಗಿನ ಜಾವ ಹಿಡಿಯಲು ಹೋದ ವೇಳೆ ನಸ್ರುಲ್ಲಾ ತಿರುಗಿ ಬಿದ್ದಾನೆ.
ಪಿಸಿ ಮೌನೇಶ್ ನ ಮೇಲೆ ತೀವ್ರತರನಾದ ಹಲ್ಲೆ ಮಾಡಿದ್ದಾನೆ. ಪಿಸ್ತೂಲ್ ತೋರಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆತನ ಅಟ್ಟಹಾಸಕ್ಕೆ ಪೊಲೀಸರು ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಕೇಳದ ನಸ್ರುಲ್ಲಾ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ.
Nasrullah was shot in the leg