ಬೆಣ್ಣೆ ಕೃಷ್ಣ ಸರ್ಕಲ್ ನಲ್ಲಿ ನಡೆದಿದ್ದೇನು?What happened at Benne Krishna Circle?

 suddilive || Bhdravathi

 ಬೆಣ್ಣೆ ಕೃಷ್ಣ ಸರ್ಕಲ್ ನಲ್ಲಿ ನಡೆದಿದ್ದೇನು?What happened at Benne Krishna Circle?


Benbekrishna, circle


ಭದ್ರಾವತಿ ಬೆಣ್ಣೆಕೃಷ್ಷ ಸರ್ಕಲ್ ನಿಂದ ಸ್ನೇಹಿತ ಸಂತೋಷ್ ನನ್ನ ಮಾತಾಡಿಸಿಕೊಂಡು ಬರಲು ಹೊರಟಿದ್ದ 32 ವರ್ಷದ ಯುವಕನ‌ಮೇಲೆ ಹಲ್ಲೆ ಯಾಗಿದೆ. ಈ ಪ್ರಕರಣದಲ್ಲಿ ದೂರು ಪ್ರತಿದೂರು ದಾಖಲಾಗಿದೆ. 

ಚೇತನ್ ಎಂಬ 32 ವರ್ಷದ ಯುವಕ ಬೆಣ್ಣೆಕೃಷ್ಣ ಸರ್ಕಲ್ ನಿಂದ ಹುತ್ತಾಕಾಲೋನಿಯಲ್ಲಿರುವ ಸ್ನೇಹಿತ ಸಂತೋಷ್ ಎಂಬಾತನನ್ನ ಮಾತನಾಡಿಸಿಕೊಂಡು ಬರಲು ತೆರಳುವಾಗ ಬಾಲ ಭಾರತಿಯ ಬಳಿಯ ಗೂಡಂಗಡಿಯ ಬಳಿ ನೀರು ಕುಡಿದುಕೊಂಡು ನಡೆದುಕೊಂಡು ಹೋಗುವಾಗ ಇಬ್ವರು ಯುವಕರು ಅಡ್ಡಕಟ್ಟಿ ಫೊನ್ ಕೊಡು ಮಾತನಾಡಬೇಕು ಎಂದಿದ್ದಾರೆ.

ಫೊನ್ ಕೊಡಲ್ಲ ಎಂದಿದ್ದಕ್ಕೆ ಚೇತನ್ ನನ್ನ ಥಳಿಸಲಾಗಿದೆ. ಆತನನ್ನ‌ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ. ರೋಷನ್ ಯಾನೆ ತನ್ನು ಎಂಬುವನ ವಿರುದ್ಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಲಾಗಿದೆ. 

ಇದೇ ವಿಚಾರವಾಗಿ ರೋಷನ್ ಯಾನೆ ತನ್ನು ಎಂಬಾತನು ಚೇತನ್ ವಿರುದ್ಧ ದೂರು ದಾಖಲಿಸಿದ್ದಾನೆ. ಮೊಬೈಲ್ ಕೊಡು ಸ್ನೇಹಿತನಿಗೆ ಕರೆ ಮಾಡಿಕೊಡುವುದಾಗಿ ಹೇಳಿದ್ದಕ್ಕೆ ನಿರಾಕರಿಸಿದ ಚೇತನ್ ನಿನ್ನಂತಹ ಬಿಕಾರಿಗೆ ಮೊಬೈಲ್ ಕೊಡೊಲ್ಲ ಎಂದಿದ್ದಾನೆ. ನಂತರ ಹಲ್ಲೆ ನಡೆಸಿರುವುದಾಗಿ ಪ್ರತಿದೂರು ದಾಖಲಾಗಿದೆ. 

What happened at Benne Krishna Circle?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close