ಜಾತಿ ಜನಗಣತಿ ಮಂಡನೆ ಸ್ವಾಗತಾರ್ಹ- ಕಾಂತರಾಜ್-Presentation of caste census is welcome

 suddilive || Shivamogga

ಜಾತಿ ಜನಗಣತಿ ಮಂಡನೆ ಸ್ವಾಗತಾರ್ಹ- ಕಾಂತರಾಜ್-      Presentation of caste census is welcome - Kantaraj

Caste, census



ಎಲ್ಲಿಯ ವರೆಗೆ ಮೀಸಲಾತಿ ಇರಬೇಕು ಎಂಬ ಪ್ರಶ್ನೆಗೆ ಹಿಂದುಳಿದ ವರ್ಗಗಳ ಆಯೋಗಗಳ ಅಧ್ಯಕ್ಷ ಹೆಚ್ ಕಾಂತರಾಜು ಸಮಂಜಸ ಉತ್ತರ ನೀಡಲಿಲ್ಲ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1931 ರಲ್ಲಿ ಶೈಕ್ಷಣಿಕ ಮತ್ತು ಆರ್ಥಿಕ ಸಮಸ್ಯೆಯ ಬಗ್ಗೆ ಸಮೀಕ್ಷೆ ನಡೆಸಿತ್ತು. ಅದಾದ ನಂತರ ಇದುವರೆಗೂ ಯಾವ ಸಮೀಕ್ಷೆ ನಡೆದಿಲ್ಲ. ಈಗ ಅದರ ಬಗ್ಗೆ ವಿಧಾನ ಸಭೆಯಲ್ಲಿ ಚರ್ಚೆಗೆ ಬರಲಿದೆ.  ಜಾತಿ ಹೋಗಬೇಕು. ಅದು ಹೋಗಲು ಏನೇನು ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಲಾಯಿತು. ಸಂವಿಧಾನದಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತುಕೊಡಲಾಗಿದೆ. ಆ ಹಿನ್ನಲೆಯಲ್ಲಿ ಸಮೀಕ್ಷೆ ನಡೆದಿದೆ ಎಂದರು. 

ಜಾತಿ ಕೃತಕ, ನಾನು ಸಮೀಕ್ಷೆ ಆರಂಭಿಸಿದ್ದಾಗ 54 ಅಂಶಗಳನ್ನ ಕೈಗೆತ್ತುಕೊಂಡಿದ್ದೇವೆ ಅದರಲ್ಲಿ ಜಾತಿ ಇದೆ. ಜಾತಿ ಆಧಾರದ ಮೇರೆಗೆ ವರ್ಗೀಕರಿಸಲಾಗಿದೆ. ಪ್ರಶ್ನಾವಳಿಗಳನ್ನ ಮಾಡಿ ಸಮೀಕ್ಷೆ ಮಾಡಿದ್ದೇವೆ. ಜಾತಿ ನಮ್ಮ ಶತೃಯಾಗಿದ್ದು, ಅದು ಯಾವ ರೀತಿ ಬೇರುಬಿಟ್ಟಿದೆ ಎಂದು ಪರಿಗಣಿಸಿ ಸಮೀಕ್ಷೆ ನಡೆಸಲಾಗಿದೆ. 

ಸಮಾಜದಲ್ಲಿ ರುವ ಕಾಯಿಲೆಗಳನ್ನ ಕಂಡು ಹಿಡಿದು ಅದಕ್ಕೆ ಔಷಧಿ ನೀಡುವುದೇ ಜಾತಿ ಗಣತಿ ಆಗಿದೆ. ಕಾಲಕ್ಕರ್ ವರದಿ ಮತ್ತು ಮಂಡಲ್ ವರದಿ ಜಾರಿ ಬಂದಿತ್ತು‌ ಕಾಲಕ್ಕರ್ ವರದಿಗೆ ವರದಿ ಸಲ್ಲಿಸಿದವರೇ ಮನವಿ ಮಾಡಿಕೊಂಡ ಪರಿಣಾಮ ಜಾರಿಗೆ ಬರಲಿಲ್ಲ. ಮಂಡಲ್ ವರದಿ ಮಾತ್ರ ಜಾರಿ ಬಂದಿದೆ. ಇದು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಬಗ್ಗೆಯಿರುವ ವರದಿಯಾಗಿದೆ.

ಸಂವಿಧಾನದಲ್ಲಿ ಇಷ್ಟು ಪರ್ಸೆಂಟ್ ಮೀಸಲಾತಿ ಕೊಡಿ ಎಂದಿಲ್ಲ. ರಾಜಕೀಯ, ಶಿಕ್ಷಣ, ಸಾಮಾಜಿಕ ಕ್ಷೇತ್ರದಲ್ಲಿ ಎಷ್ಟೆಷ್ಟು ಪರ್ಸೆಂಟ್ ಕೊಡಬೇಕು ಎಂಬುದು ನೋಡಿ ಕೊಡಬೇಕಿದೆ. ಜಿಪಂ ತಾಪಂ ಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಿಕ್ತುಆದರೆ ಎಂಪಿ ಎಂಎಲ್ ಎ ಸ್ಥಾನಕ್ಕೆ ಹಿಙದುಳಿದವರಿಗೆ ಸ್ಥಾನ ಸಿಗಲಿಲ್ಲ ಎಂದರು. 

ಸುಪ್ರೀಂ ಮುಂದಿರುವ ಪ್ರಶ್ನೆಗಳಿಗೆ, ಜಾತಿಗಳು ಎಷ್ಟು ಇದೆ ಅವರಿಗೆ ಮೀಸಲು ಎಷ್ಟಿರಬೇಕು ಎಂಬುದರ ಬಗ್ಗೆ ಚರ್ಚಿಸಲಾಯಿತು. 2015 ರಲ್ಲಿಸಮೀಕ್ಷೆ ನಡೆಸಲಾಯಿತು. ಈಗ ಅದು ಮಂಡನೆ ಮತ್ತು ಚರ್ಚೆ ಸ್ವಾಗತವಾಗಿದೆ ಸಮೀಕ್ಷೆಗೆ ಸಾಕಷ್ಟು ಹಣ ವ್ಯಯಮಾಡಲಾಗಿದೆ. ಇದೇ ರೀತಿ ಬಿಹಾರ್, ಅಸ್ಸಾಂ ಮಹರಾಷ್ಟ್ರದಲ್ಲಿ ನಮ್ಮನ್ನ ನೋಡಿ, ಸಮೀಕ್ಷೆಗೆ ಮುಂದಾಗಿದ್ದಾರೆ ಎಂದು ತಿಳಿಸಿದರು. 

ಒಳಮೀಸಲಾತಿಯನ್ನ ಜಾರಿ ಮಾಡಲಾಯಿತು. ಎಲ್ಲಿಯ ವರೆಗೂ ಮೀಸಲಾತಿ ಕೊಡಬೇಕು ಎಂಬ ಪ್ರಶ್ನೆ ಉದ್ಭವಿಸಿತ್ತು. ಉದ್ಯೋಗಕ್ಕೆ 1993 ರಲ್ಲಿ ಮಂಡಲ್ ಜಾರಿ ಮಾಡಿತ್ತು. ಸುಪ್ರೀಂ ಆದೇಶದ ಮೇಲೆ ಜಾರಿ ಮಾಡಲಾಯಿತು. 2008 ರಲ್ಲಿ ಶಿಕ್ಷಣದಲ್ಲಿ ಮೀಸಲಾತಿ ನೀಡಾಯಿತು. 

ಮಂಡಲ್ ನಲ್ಲಿ 27 % ಮೀಸಲಾತಿ ಇದ್ದರೂ ಇದುವರೆಗೂ ಆ ಬ್ಯಾಕ್ ಲಾಗ್ ಹುದ್ದೆಗಳ ಮೀಸಲು ಜಾರಿಯಾಗಿಲ್ಲ. ಸಮಾನವಾಗಿ ಹಂಚಿಕೆಯಾದರೆ ಮಾತ್ರ ಈ ಮೀಸಲಾತಿಯಿಂದ ಜನಾಂಗಗಳು ಉದ್ದಾರವಾಗಲಿದೆ. ಅಲ್ಲಿಯ ವರೆಗೂ ಈ ಮೀಸಲಾತಿ ಇರಲುದೆ ಎಂದು ಪರೋಕ್ಷವಾಗಿ ಹೇಳಿದರು.  ಸಮಾನತೆ ಎಂಬುದಕ್ಕೆ ಮೀಸಲಾತಿ ಒಂದೆ ಅಸ್ತ್ರ ಅಲ್ಲ,  54 ಅಂಶದಲ್ಲಿ ಅದೊಂದಾಗಿದೆ ಅಷ್ಟೆ ಎಂದರು. 

ಸಮೀಕ್ಷೆ ವೈಜ್ಞಾನಿಕವಾಗಿದೆ, ಮತ್ತು ಮನೆ ಮನೆಗೆ ತೆರಳಿ ಗಣತಿ ಮಾಡಲಾಗಿದೆ. ಸುಪ್ರೀಂ ನಿರ್ದೇಶನದ ಅಂಶದ ಮೇಲೆ ಗಣತಿ ನಡೆದಿದೆ. ನಾವು ನಡೆಸಿದ ಗಣತಿಗೆ ಪರ್ಯಾಯವಾದ ಸರ್ವೆಗಳಿಲ್ಲ. ವರದಿ ಸೋರಿಕೆಯಾಗಿಲ್ಲ. ಆದರೆ ಮಾಧ್ಯಮಗಳಲ್ಲಿ ಬರುವ ಅಂಕಿ ಅಂಶ ಸರಿಯಿದೆ. ಎಸ್ ಸಿ ಎಸ್ಟಿ ಹೆಚ್ಚಿದೆ. ಮುಸ್ಲೀಂ ರ ಜನ ಸಂಖ್ಯೆ ಎರಡನೇ ಸ್ಥಾನದಲ್ಲಿದೆ ಸರಿಯಿದೆ ಎಂದರು. 

Presentation of caste census is welcome

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close