ಶಿವಮೊಗ್ಗ ಖಸಗಿ ಬಸ್ ಮಾಲೀಕರ ಸಂಘ ಮುಷ್ಕರಕ್ಕೆ ಇಳಿಯಲಿದೆಯಾ?Private Bus Owners strike

 Suddilive|| Shivamogga

ಶಿವಮೊಗ್ಗ ಖಸಗಿ ಬಸ್ ಮಾಲೀಕರ ಸಂಘ ಮುಷ್ಕರಕ್ಕೆ ಇಳಿಯಲಿದೆಯಾ? -Will the Shimoga Private Bus Owners Association go on strike?

Bus, strike

ಏ.15 ರಿಂದ ರಾಜ್ಯಾದ್ಯಂತ ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಲಾರಿ ಮಾಲೀಕರ ಸಂಘ ಕರೆ ನೀಡಿರುವ  ಮುಷ್ಕರಕ್ಕೆ ಶಿವಮೊಗ್ಗದ ಖಾಸಗಿ ಬಸ್ ಮಾಲೀಕರ ಸಂಘ ಸಹ ಕೈಜೋಡಿಸುವ ಎಲ್ಲಾ ಲಕ್ಷಣಗಳು ಹೊರಬೀಳುತ್ತಿವೆ.

ಈ ಕುರಿತು ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಂಗಪ್ಪ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರಿಗೆ ಪತ್ರ ಬರೆದಿದ್ದು 2024 ರ ಜೂನ್ ನಲ್ಲಿ ವಿದ್ಯುತ್, ಹಾಲು ಮತ್ತು ಡಿಸೇಲಿನ ಮೇಲಿನ ತೆರಿಗೆಯನ್ನ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು.‌ ಅದರಂತೆ ಡಿಸೇಲ್ ದರ 3 ರೂ. ಹೆಚ್ಚಿಸಲಾಗಿತ್ತು. 

ಅದರಂತೆ ಈಗ ಮತ್ತೆ ಡಿಸೇಲ್ ದರವನ್ನ ರಾಜ್ಯ ಸರ್ಕಾರ 2.50 ರೂ. ನಿಂದ 3 ರೂ.ಗೆ ಹೆಚ್ಚಿಸಿ ಆದೇಶಿಸಿರುವುದು ಖಾಸಗಿ ಬಸ್ ನ ಲಕ್ಷಾಂತರ ಕುಟುಂಬಕ್ಕೆ ಅಡ್ಡಿಉಂಟಾಗಿದೆ. ಶಿವಮೊಗ್ಗದ ಎಲ್ಲಾ ರೂಟ್ ಗೆ ಕೆ.ಎಸ್.ಆರ್ ಟಿ ಸಿ ಬಸ್ ಗಳ ಸಂಚಾರ ಹೆಚ್ಚಿಸಲಾಗಿದೆ. 

ಶಕ್ತಿ ಯೋಜನೆಯಿಂದ ಸಾರ್ವಜನಿಕ ಪ್ರಯಾಣಿಕರು KSRTC ಬಸ್ ನಲ್ಲೇ ಸಂಚರಿಸುತ್ತಿದ್ದಾರೆ. ಸರ್ಕಾರದ ಈ ಗ್ಯಾರೆಂಟಿ ಯೋಜಬೆಯಿಂದ ಖಾಸಗಿ ಬಸ್ ಕ್ಷೇತ್ರ ಧೂಳಿಪಟವಾಗಿದೆ. ಇದರ ನಡುವೆ ಬಸ್ ನ ಡೀಸೇಲ್ ದರ ಹೆಚ್ಚಳವನ್ನ ಅನಿವಾರ್ಯವಾಗಿ ಸಾರ್ಜನಿಕರ ಮೇಲೆ ಹಾಕುವುದರಿಂದ ಸಾರ್ವಜನಿಕರು ಮತ್ತಷ್ಟು ಖಾಸಗಿ ಬಸ್ ನಿಂದ ದೂರ ಉಳಿಯಲಿದ್ದಾರೆ. 

ಹಾಗಾಗಿ ಡೀಸೆಲ್ ದರ ಹೆಚ್ಚಳದ ಬಗ್ಗೆ ಮರುಪರಶೀಲಿಸಬೇಕು, ಇಲ್ಲವಾದಲ್ಲಿ ಲಾರಿ ಮಾಲೀಕರ ಸಂಘ ಏ.15 ರಿಂದ ನಡೆಸಲಿರುವ ಮುಷ್ಕರಕ್ಕೆ ಖಾಸಗಿ ಬಸ್ ಮಾಲೀಕರ ಸಂಘ ಶಿವಮೊಗ್ಗ ಘಟಕ ಅನಿವಾರ್ಯವಾಗಿ ಕೈಜೋಡಿಸಬೇಕಿದೆ ಎಂದು ಪತ್ರ ಬರೆದಿದ್ದಾರೆ. 

ಈ ಪತ್ರ ಬರವಣಿಗೆಯ ಹಿನ್ನಲೆಯಲ್ಲಿ ಖಾಸಗಿ ಬಸ್ ಗಳು ಮುಷ್ಕರಕ್ಕೆ ಧುಮುಕುವ ಎಲ್ಲಾ ಲಕ್ಷಣಗಳು ಹೆಚ್ಚಿವೆ.  

Private Bus Owners strike   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close