ಬೈರನಬೆಟ್ಟಕ್ಕೆ ತಹಶೀಲ್ದಾರ್ ತಂಡ ಭೇಟಿ-ಗ್ರಾಮಸ್ಥರೊಂದಿಗೆ ಸಭೆ-Tahsildar team visits Bairanbetta

Suddilive || Holehonnuru

ಬೈರನಬೆಟ್ಟಕ್ಕೆ ತಹಶೀಲ್ದಾರ್ ತಂಡ ಭೇಟಿ-ಗ್ರಾಮಸ್ಥರೊಂದಿಗೆ ಸಭೆ-Tahsildar team visits Bairanbetta-meets with villagers

Visit, Bairanabetta

ಗ್ರಾಮಸ್ಥರ ತೀರ್ವ ವಿರೋದದ ನಡುವೆ ಇಲ್ಲಿನ ಸಮೀಪದ ಡಾಣಾಯಕಪುರದ ಬೈರನಬೆಟ್ಟಕ್ಕೆ ಭದ್ರಾವತಿ ತಹಸಿಲ್ದಾರ್ ಪರುಶುರಾಮ್ ನೇತೃತ್ವದಲ್ಲಿ ಜಲ ಮಂಡಳಿ ಇಂಜಿನಿಯರ್‌ಗಳ ತಂಡ ಬೇಟಿ ನೀಡಿದರು. ಈ ಭೇಟಿ ಗ್ರಾಮಸ್ಥರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. 

ಬೈರನಬೆಟ್ಟದಲ್ಲಿ ಯಾವುದೇ ಯೋಜನೆಗಳನ್ನು ನಡೆಸಲು ಬಿಡುವುದಿಲ್ಲ ಎಂದು ಡಾಣಾಯಕಪುರದ ಗ್ರಾಮಸ್ಥರು ಜೆಸಿಬಿ ಯಂತ್ರಗಳನ್ನು ತಡೆದು ವಾಪ್ಪಸ್ ಕಳಿಸಿದ ಪ್ರಕರಣಕ್ಕೆ ಸಂಬಂದಿಸಿದಂತೆ ಮಂಗಳವಾರ ಭದ್ರಾವತಿ ತಹಸಿಲ್ದಾರ್ ಪರುಶುರಾಮ್ ನೇತೃತ್ವದಲ್ಲಿ ಜಲ ಮಂಡಳಿ ಇಂಜಿನಿಯರ್‌ಗಳ ತಂಡ ಬೈರನಬೆಟ್ಟಕ್ಕೆ ಬೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕಥೆ ನಡೆಸಿದೆ. 

ಜಲ ಮಂಡಳಿ ಇಂಜಿನೀಯರ್ ರವಿಕುಮಾರ್ ಮಾತನಾಡಿ ಗ್ರಾಮಸ್ಥರು ಸೂಚಿಸಿದ ಹಿಂಭಾಗದ ಬೆಟ್ಟ ಬೈರನಬೆಟ್ಟಕ್ಕಿಂತ ೬-೮ ಮೀಟರ್ ಎತ್ತರ ಕಡಿಮೆ ಇದೆ. ಆದರಿಂದ ಹಿಂಭಾಗದ ಬೆಟ್ಟದಲ್ಲಿ ಕಾಮಾಗಾರಿ ನಡೆಸಿದರೆ ಯಶಸ್ವಿಯಾಗುವುದು ಸುಲಭವಲ್ಲ ಎಂದರು. ಭದ್ರಾವತಿ ತಹಸಿಲ್ದಾರ್ ಪರುಶುರಾಮ್ ಮಾತನಾಡಿ ವ್ಶೆಜ್ಞಾನಿಕವಾಗಿ ಹಿಂಭಾಗದ ಗುಡ್ಡ ಎತ್ತರ ಪರೀಕ್ಷಿಸಿದೆ ಎತ್ತರ ಸಾಲುವುದಿಲ್ಲ ಎನ್ನುವುದು ತಪ್ಪಾಗುತ್ತದೆ. ಆದಷ್ಟು ಬೇಗಾ ಗ್ರಾಮಸ್ಥರು ತಿಳಿಸಿದ ಗುಡ್ಡದಲ್ಲಿ ಪರೀಕ್ಷೆ ನಡೆಸಿ ವರದಿ ನೀಡುವಂತೆ ಇಂಜಿನಿಯರ್‌ಗೆ ತಿಳಿಸಿದರು. ಡಾಣಾಯಕಪುರದ ಬಳಿ ಬೈರನಬೆಟ್ಟ ಬಿಟ್ಟರೆ ಮತ್ಯಾವ ಗುಡ್ಡಗಳು ಕಾಮಾಗಾರಿಗೆ ಸೂಕ್ತವಿಲ್ಲ ಎಂದು ಇಂಜಿನಿಯರ್‌ಗಳ ತಂಡ ತಹಸೀಲ್ದಾರ್‌ಗೆ ನಕ್ಷೆ ಸೇರಿದಂತೆ ಕೆಲ ದಾಖಲೆಗಳನ್ನು ತೊರಿಸಿದರು.

ಅಧಿಕಾರಿಗಳೊಂದಿಗೆ ಮಾತನಾಡಿದ ಗ್ರಾಮ ಮುಖಂಡರು ಬೈರನಬೆಟ್ಟದಲ್ಲಿ ಕಾಮಾಗಾರಿ ನಡೆಸುವುದಾದರೆ ನಮ್ಮೂರಿಗೆ ಕುಡಿಯುವ ನೀರಿನ ಯೋಜನೆ ಬೇಡವೆ ಬೇಡ ಎಂದು ಗ್ರಾಮಸ್ಥರು ತಿರ್ಮಾನ ಮಾಡಿದ್ದಾರೆ. ಬೈರವೇಶ್ವರ ದೇವಸ್ಥಾನದ ಮೆಟ್ಟಿಲುಗಳ ಬಳಿ ಕಾಮಗಾರಿ ನಡೆಸಿದರೆ ದೇವಸ್ಥಾನವೆ ಮರೆಯಾಗುತ್ತದೆ. ಅಲ್ಲದೆ ದೇವಸ್ಥಾನದ ಆವರಣದಲ್ಲಿ ದಾರ್ಮಿಕ ಆಚರಣೆಗಳಿಗೆ ಸೂಕ್ತ ಜಾಗವಿಲ್ಲದಂತಾಗುತ್ತದೆ. 

ಆದರಿಂದ ಬೈರನಬೆಟ್ಟದಲ್ಲಿ ಕಾಮಾಗಾರಿ ಬೇಡ ಎನ್ನುವುದು ಗ್ರಾಮಸ್ಥರ ವಾದ. ಪಟ್ಟಣ ಸಮೀಪದ ಜಂಬರಘಟ್ಟೆಯಲ್ಲಿ ಬೈರನಬೆಟ್ಟಕ್ಕಿಂತ ಮೂರು ಪಟ್ಟು ಎತ್ತರದ ಗುಡ್ಡಗಳಿವೆ. ಅಲ್ಲಿ ಬೇಕಾದರೆ ಯೋಜನೆ ಅನುಷ್ಠಾನಗೊಳಿಸಿ ಎಂದರು. 

ಜಂಬರಘಟ್ಟೆ ದೂರವಾಗುತ್ತದೆ ಪಟ್ಟಣದಿಂದ ೪-೫ ಕಿಮಿ ದೂರದ ವರೆಗೆ ತುಂಗಾಭದ್ರ ನದಿ ನೀರು ಕಳಿಸಿ ಮತ್ತೆ ಅದೇ ನೀರನ್ನು ಹೊಳೆಹೊನ್ನೂರಿಗೆ ತರುವುದು ಪ್ರಯಾಸವಾಗುತ್ತದೆ. ಇನ್ನೇರಡು ದಿನದಲ್ಲಿ ಬೈರನಬೆಟ್ಟದ ಹಿಂಭಾಗದ ಗುಡ್ಡದಲ್ಲಿ ಪರೀಕ್ಷೆ ನಡೆಸಿ ಮಾಹಿತಿ ನೀಡುವುದಾಗಿ ಇಂಜಿನಿಯರ್ ರವಿಕುಮಾರ್ ಹೇಳಿದರು. ಡಾಣಾಯಕಪುರ ಗ್ರಾಮ ಮುಖಂಡರು ಸರ್ಕಾರದ ಯಾವುದೇ ಯೋಜನೆಗಳನ್ನು ಬೈರನಬೆಟ್ಟದಲ್ಲಿ ಅನುಷ್ಠಾನ ಮಾಡುವುದಕ್ಕೆ ಆಸ್ಪದ ನೀಡಬಾರದು ಎಂದು ಗ್ರಾಮಾಂತರ ಶಾಸಕಿ ಶಾರದಪರ‍್ಯಾನಾಯ್ಕ್ ಸೇರಿದಂತೆ ಜಿಲ್ಲಾಢಳಿತಕ್ಕೆ ಮನವಿ ಸಲ್ಲಿಸಿ ಬಂದಿದ್ದಾರೆ.  

ಉಪ ತಹಸಿಲ್ದಾರ್ ವಿಜಯ್, ರಾಜಸ್ವ ನಿರೀಕ್ಷ ರವಿಕುಮಾರ್, ಗ್ರಾಮ ಮುಖಂಡ ಪರಮೇಶ್ವರಪ್ಪ, ಪೈಲ್ವಾನ್ ಚಂದ್ರಪ್ಪ, ಚಂದ್ರಶೇಖರ್, ಡಿ.ಪಿ ಹನುಂತಮಪ್ಪ, ಎಸ್.ಕುಮಾರ್, ಹೆಗ್ಡೇಶ, ಆಂಜನಪ್ಪ ಇತರರಿದ್ದರು.

Tahsildar team visits Bairanbetta

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close