ಸರ್ಜಿ ಫೌಂಡೇಷನ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗೆ ಉಚಿತ ತರಬೇತಿ ಮತ್ತು ಸ್ಕಾಲರ್ ಶಿಪ್!Sarji Foundation

 Suddilive || Shivamogga

ಸರ್ಜಿ ಫೌಂಡೇಷನ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗೆ ಉಚಿತ ತರಬೇತಿ ಮತ್ತು ಸ್ಕಾಲರ್ ಶಿಪ್-Free training and scholarship for candidates appearing for competitive exams from the Sarji Foundation!

Sarji, foundation

ಸ್ಪರ್ಧಾ ಲೈನ್ಸ್ ಅಕಾಡೆಮಿ ಮತ್ತು ಸರ್ಜಿ ಫೌಂಡೇಷನ್ ಸಹಭಾಗಿತ್ವದಲ್ಲಿ ನೈರುತ್ಯ ಪದವೀಧರ ಕ್ಷೇತ್ರದ 100 ಜನ ಪದವೀಧರರಿಗೆ ಉಚಿತ ಸ್ಪರ್ಧಾತ್ಪಕ ಪರೀಕ್ಷೆ ಎದುರಿಸಲು ಉಚಿತ ತರಬೇತಿ ಮತ್ತು ಸ್ಕಾಲರ್ ಶಿಪ್ ನೀಡಲಾಗುತ್ತಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ನೈರುತ್ಯ ಪದವೀದರ ಕ್ಷೇತ್ರದ ಎಂಎಲ್ ಸಿ ಡಾ.ಧನಂಜಯ ಸರ್ಜಿ ಮಾತನಾಡಿ,  ಶಿವಮೊಗ್ಗ, ಚಿಕ್ಕಮಗಳರು ಉಡುಪಿ, ಕೊಡಗು, ದಾವಣಗೆರೆಯ ಎರಡು ತಾಲೂಕಿನ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗುತ್ತಿದೆ. ಎರಡು ರೀತಿ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರಿಲಿಮ್ಸ್ ಮತ್ತು ಮೈನ್ಸ್ ಹೇಳಿಕೊಡಲಾಗುತ್ತಿದೆ. ಆಫ್ ಲೈನ್ ಮತ್ತು ಆನ್ ಲೈನ್ ತರಬೇತಿ ನೀಡಲಾಗುತ್ತಿದೆ. 

ಐಎಎಸ್, ಕೆಎಎಸ್, ಬ್ಯಾಂಕಿಂಗ್ ಸೇರಿದಂಯೆ ಹಲವು ಸ್ಪರ್ಧಾತ್ಮಕ  ಪರೀಕ್ಷೆ ಬಗ್ಗೆ ದಕ್ಷಿಣ ಭಾರತದ ಆಸಕ್ತಿ ಕಡಿಮೆಯಿದೆ. ಎಲ್ಲಾ ಉತ್ತರ ಭಾರತೀಯರಾಗಿದ್ದಾರೆ. 350 ಸ್ಥಾನ ಭರ್ತಿಗೆ 1 ಈಸ್ಟು 15 ಸ್ಪರ್ಧೆಗಳು ನಡೆಯುತ್ತದೆ. 

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು 1.5 ಲಕ್ಷದಿಂದ 2 ಲಕ್ಷ ರೂ. ಖರ್ಚಾಗಲಿದೆ. ಸುಮಾರಷ್ಟು ವಿದ್ಯಾರ್ಥಿಗಳು ಆನ್ ಲೈನ ಮೂಲಕ ಪರೀಕ್ಷೆ ಮಾಡಬಹುದು, ಬಿಪಿಎಲ್, ಮೆರಿಟ್ ಬೇಸ್ ಮೇಲೆ ಪರೀಕ್ಷೆ ನಡೆಸಿ 100 ಜನರನ್ನ ಆಯ್ಕೆ ಮಾಡಲಾಗುತ್ತದೆ. 

ಮೇ.9 ರ ತನಕ ನೋಂದಣಿಗೆ ಅವಕಾಶವಿದೆ. 100 ಜನರಿಗೆ ಫ್ರೀ ಸ್ಕಲರ್ ಶಿಪ್ ಆರಂಭಿಸಲಾಗುತ್ತಿದೆ. ಜೂನ್ ನಿಂದ ಒಂದು ವರ್ಷ ತರಬೇತಿ ಇರುತ್ತದೆ. ಬೆಂಗಳೂರಿನಲಗಲಿ ಇರಲು ಆಗದವರಿಗೆ ಇಲ್ಲಿ ಅವಕಾಶವಿದೆ. ಆಪ್ ಲೈನ್ ನಲ್ಲಿ ಪರೀಕ್ಷೆ ತೆಗೆದುಕೊಳ್ಳುವರು  ವಸತಿ ಸೌಲಭ್ಯ ಹೊರತು ಪಡಿಸಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಹೆಚ್ಚಿನ‌ ಮಾಹಿತಿಗಾಗಿ ಆಸಕ್ತರು 7204747789 ಸಂಖ್ಯೆಯನ್ನ ಸಂಪರ್ಕಿಸಬಹುದಾಗಿದೆ. 

ಸುದ್ದಿಗೋಷ್ಠಿಯಲ್ಲಿ ರೀಜಿನಲ್ ಔಟ್ರೀಜ್ ಹೆಡ್ ನ ಗೌರಿಶಂಕರ್, ಡಾ.ಅಮಿತಾ, ಅಸಿಸ್ಟೆಂಡ್ ಅಡ್ಮಿನ್ ಮರು ಳೀಧರ್, ಅನಿಲ್ ಉಪಸ್ಥಿತರಿದ್ದರು. 

Sarji Foundation

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close