ಏ.15 ರಂದು ರೈತ ಸಂಘದಿಂದ ಪ್ರತಿಭಟನೆ-Protest by farmers' association on April 15

 Suddilive || Shivamogga

 ಏ.15 ರಂದು ರೈತ ಸಂಘದಿಂದ ಪ್ರತಿಭಟನೆ-Protest by farmers' association on April 15

Association, protest

ರೈತರ ಜಮೀನುಗಳ ದಾಖಲೆಗಳನ್ನ ರದ್ದುಮಾಡಲು ನೋಟೀಸ್ ಕೊಟ್ಟಿರುವ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಏ.15 ರಂದು ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸು ತೀರ್ಮಾನಿಸಿದೆ. 

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ರೈತ ಸಂಘದ ಅಧ್ಯಕ್ಷ ಹೆಚ್ ಆರ್ ಬಸವರಾಜಪ್ಪ, 60-70 ವರ್ಷಗಳಿಂದಲೂ ಸರ್ಕಾರದಿಂದ ಹಕ್ಕುಪತ್ರ ಪಡೆದು ಖಾತೆ, ಪಹಣಿ, ದಾಖಲಾಗಿ ಪೋಡು ಮಾಡಿಸಿಕೊಂಡು ನೆಮ್ಮದಿಯಿಂದ ತೋಟಗಳನ್ನ ಇತರೆ ಬೆಳೆಗಳನ್ನ ಬೆಳೆದು ಅಲ್ಲಿಯೇ ಮನೆ ಕಟ್ಟಿಕೊಂಡು ಬ್ಯಾಂಕ್ ವಗೆರೆಗಳಲ್ಲಿ ಸಾಲ ಪಡೆದು ವ್ಯವಸಾಯ ವೃತ್ತಿ ಮಾಡಿಕೊಂಡು ಬತಿತ್ತಿದ್ದು ಅವರನ್ನ‌ಒಕ್ಕಲೆಬ್ಬಿಸಲು ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ. 

ರೈತರು ವಿಷ ಕುಡಿಯುವ ಸ್ಥಿತಿ ನಿರ್ಮಾಣವಾಗಿದೆ. ಎರಡೂ ಸರ್ಕಾರಗಳು ರೈತರ ಜೊತೆ ಕುಳಿತು ಮಾತುಕತೆ ಮಾಡಿ ಒಕ್ಕಲೆಬ್ಬಿಸದಂತೆ ಕ್ರಮ ತೆಗೆದುಕೊಳ್ಳಬೇಕು. ಈ ಹಿನ್ನಲೆಯಲ್ಲಿ ಏ.15 ರಂದು ಪಕ್ಷಾತೀತವಾಗಿ ಪ್ರತಿಭಟನೆ ನಡೆಯಲಿದೆ. 

ಸೈನ್ಸ್ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆ ತಲುಪಲಿದೆ ಎಂದರು.  

Protest by farmers' association on April 15

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close