Suddilive || Shivamogga
ಶಿವಮೊಗ್ಗದಲ್ಲಿ ಮಳೆ-Rain in shivamogga
ಶಿವಮೊಗ್ಗ ಜಿಲ್ಲೆಯಾದ್ಯಂತ ಅರ್ಧಗಂಟೆ ಉತ್ತಮ ಮಳೆಯಾಗಿದೆ. ಇದರಿಂದಾಗಿ ಬೇಸಿಗೆ ಮಳೆ ಕೊಂಚಮಟ್ಟಿಗೆ ತಂಪೆರೆದಿದೆ.
ಕಳೆದ 15 ದಿನಗಳಿಂದ ಮಳೆ ಮೋಡವಾಗುತ್ತಿದ್ದು ಆವಾಗಾವಗ ಮಳೆ ಬಿದ್ದಿದೆ. ಆದರೆ ಇಂದು ಸಂಜೆಯ ಮಳೆ ಚೂರು ಜೋರಾಗಿ ಹೊಡೆದಿದೆ.
ಸಾಗರ, ಹೊಸನಗರದಲ್ಲಿ ಮಳೆ ಜೋರಾಗಿ ಬಿದ್ದರೆ ತೀರ್ಥಹಳ್ಳಿ ಸೊರಬ, ಶಿಕಾರಿಪುರ ಮತ್ತು ಭದ್ರಾವತಿಯಲ್ಲಿ ಸಾಧಾರಣ ಮಳೆಯಾಗಿದೆ. ಶಿವಮೊಗ್ಗ ಮತ್ತು ಗ್ರಾಮಾಂತರ ಭಾಗದಲ್ಲಿ ಉತ್ತಮ ಮಳೆಯಾಗಿರುವ ವರದಿ ತಿಳಿದು ಬಂದಿದೆ.
Rain in shivamogga