Suddilive || Shivamogga
ಡಿ.ಕೆ.ಸದಾಶಿವ ಇನ್ನಿಲ್ಲ-Sadashiv is no more
ಕರ್ನಾಟಕದ ಕಾರ್ಮಿಕ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದವರು ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಡಿ.ಕೆ. ಸದಾಶಿವ (83) ಅವರು ನಿಧನರಾಗಿದ್ದಾರೆ.
ಶಿವಮೊಗ್ಗ ಮೂಲದ ಶ್ರೀ ಸದಾಶಿವ ಅವರು ಬಾಲ್ಯದಿಂದಲೇ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿ, ಕರ್ನಾಟಕದಲ್ಲಿ ಬಿಎಂಎಸ್ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಅವರ ಅಗಲಿಕೆಯೊಂದಿಗೆ ಕಾರ್ಮಿಕ ಚಳವಳಿ ಮೌಲ್ಯಾಧಾರಿತ ನಾಯಕತ್ವವನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ನಗರದ ಅನೇಕ ಗಣ್ಯವ್ಯಕ್ತಿಗಳು ಪ್ರಾರ್ಥಿಸಿದ್ದಾರೆ.
ಬಿಬಿ ಸ್ಟ್ರೀಟ್ ನ ನಿವಾಸಿಯಾಗಿದ್ದ ಇವರು ಸಹೋದರನ ಜೊತೆ ವಾಸವಾಗಿದ್ದರು. ತುಂಗ ಭದ್ರ ಕಾರ್ಖಾನೆಯಲ್ಲಿ ನೌಕರರಾಗಿ ವೃತ್ತಿ ಜೀವನ ಆರಂಭಿಸಿದ್ದ ಇವರು ಶೇಷಾದ್ರಿಯವರೊಂದಿಗೆ ಸೇರಿ ಬಿಎಂಎಸ್ ಸ್ಥಾಪಿಸಿದ್ದರು. ಆನಂದಪಲ್ಲಿ ವೆಂಕಟರಾವ್ ನಿಧನರಾದ ನಂತರ ಡಿಕೆ ಸದಾಶಿವ್ ಪೂರ್ಣವಧಿ ಕೆಲಸಕ್ಕೆ ನಿಯೋಜಿತಗೊಂಡಿದ್ದರು.
ಇತ್ತೀಚೆಗೆ ಅನಾರೋಗ್ಯದ ಹಿನ್ನಲಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸದಾಶಿವ್ ಇಂದು ಕೊನೆ ಉಸಿರೆಳೆದಿದ್ದಾರೆ. ಸಂಜೆ 4 ಗಂಟೆಗೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದೆ.
Sadashiv is no more