Suddilive || Shivamogga
ಡಾ.ಸರ್ಜಿಯಿಂದ ರ್ಯಾಂಕ್ ವಿಜೇತಳಿಗೆ ಸನ್ಮಾನ-Dr. Sarji felicitates the rank winner
ಎಂಎಲ್ ಸಿ ಡಾ.ಧನಂಜಯ ಸರ್ಜಿಯಿಂದ ಯುಪಿಎಸ್ ಸಿಯಲ್ಲಿ 421 ನೇ ರ‌್ಯಾಂಕ್ ಪಡೆದ ಮೇಘಳಿಗೆ ಸನ್ಮಾನಿಸಲಾಗಿದೆ. ರ‌್ಯಾಂಕ್ ವಿಜೇತಳ ಮನೆಗೆ ತೆರಳಿ ಶಾಸಕರು ಸನ್ಮಾನಿಸಿದ್ದಾರೆ.
ಶಿವಮೊಗ್ಗದ ಬಸವೇಶ್ವರ ನಗರ ನಿವಾಸಿ ಹಿರಿಯ ವಕೀಲರಾದ ಶ್ರೀ ಮೋಹನ್ ಕುಮಾರ್ ಬಿ.ಜಿ ಅವರ ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಶ್ರೀಮತಿ ವತ್ಸಲಾ ಅವರ ಸುಪುತ್ರಿ ಕು. ಮೇಘನಾ ಅವರು 2024ರ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು 421 ನೇ ರ್ಯಾಂಕ್ ಪಡೆದು ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿರುವ ಸಂದರ್ಭದಲ್ಲಿ, ಇಂದು ಅವರ ಸ್ವಗೃಹಕ್ಕೆ ಭೇಟಿ ನೀಡಿ ಅಭಿನಂದಿಸಿ ಶುಭಹಾರೈಸಲಾಯಿತು.
ಈ ವೇಳೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಜಗದೀಶ್ ಅವರು, ಪ್ರಮುಖರಾದ ಪ್ರಶಾಂತ್ ಅವರು, ಸುಬ್ಬಣ್ಣ ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
rank winner