Suddilive || Shivamogga
ರಘುನಾಥ್, ರಘುರಾಮ್ ಗೆ ಮತಹಾಕಿ-Vote for Raghunath, Raghuram
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚುನಾವಣೆಗೆ ಭಾನುಪ್ರಕಾಶ್ ಶರ್ಮ ಅವರ ವಿರುದ್ಧ ವಾಗಿ ರಘುನಾಥ್ ಅವರು ಕಣಕ್ಕೆ ಇಳಿಯುತ್ತಿದ್ದು, ಜಿಲ್ಲೆಯಲ್ಲಿ ರಘುರಾಮ್ ಕಣಕ್ಕೆ ಇಳಿದಿದ್ದಾರೆ. ಏ.13 ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚುನಾವಣೆಗೆ ಎರಡು ಮದಗಜಗಳು ಕಣಕ್ಕಿಳಿಯುತ್ತಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ರಘುನಾಥ್ ಪರವಾಗಿ ಮಾತನಾಡಿದ ಸುರೇಶ್ ರಾವ್ ನಾಡಿಗ್ ರಾಜ್ಯಕ್ಕೆ ರಾಘುನಾಥ್ ಜಿಲ್ಲೆಗೆ ರಘುರಾಮ್ ಇಬ್ಬರೂ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅಲ್ಪಮತಗಳಿಂದ ರಘುನಾಥ್ ಪರಾಭವಗೊಂಡಿದ್ದರು. ಈ ಬಾರಿ ಗೆಲ್ಲುವ ವಿಶ್ವಾಸವನ್ನ ಹೊರಹಾಕಿದರು.
ಸದಸ್ಯತ್ವ ಅಭಿಯಾನ ತೃಪ್ತಿ ತಂದಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಜಿಲ್ಲೆಯಲ್ಲಿ 3440 ಜನ ಮತಹಾಕಬಹುದಾಗಿದೆ. ನಗರದಲ್ಲಿ 1500 ಸಾವಿರ ಜನ ಮತದಾರರಿದ್ದಾರೆ. ಈ ಸಂಖ್ಯೆ ಕಳೆದಬಾರಿಯೂ ಇತ್ತು ಅದೇ ಮುಂದುವರೆದಿದೆ. ಜಿಲ್ಲೆಯಲ್ಲಿ 25 ಸಾವಿರ ಮತ ವಿಧಾನ ಸಭೆ ಚುನಾವಣೆಯಲ್ಲಿದೆ. ಅದು ಆಗಬೇಕಿತ್ತು.
ಈಗಿನ ಅಧ್ಯಕ್ಷರಿಗೆ ನೋಂದಣಿ ಅರ್ಜಿಯನ್ನಟೇಬಲ್ ಮೇಲೆ ಇಟ್ಟು ಅಭಿಯಾನ ನಡೆಸಿ ಎಂದರೆ ನಡೆಸಲು ಮುಂದಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
Vote for Raghunath, Raghuram