ಡಿಸಿ, ಎಸ್ಪಿ ಆಟದ ಮೈದಾನದ ಮಾಲಿಕತ್ವವನ್ನ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲು ತಿಳಿಸುವುದಾದರೆ ಇಬ್ವರೂ ರಾಜೀನಾಮೆ ನೀಡಿ ಮನೆಗೆ ಹೋಗಲಿ, ಹೋರಾಟ ನಿಲ್ಲದು-ಈಶ್ವರಪ್ಪ-the fight over the playground will not stop

 Suddilive || Shivamogga

ಡಿಸಿ, ಎಸ್ಪಿ ಆಟದ ಮೈದಾನದ ಮಾಲಿಕತ್ವವನ್ನ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲು ತಿಳಿಸುವುದಾದರೆ ಇಬ್ವರೂ ರಾಜೀನಾಮೆ ನೀಡಿ ಮನೆಗೆ ಹೋಗಲಿ, ಮೈದಾನದ ಹೋರಾಟ ನಿಲ್ಲದು-ಈಶ್ವರಪ್ಪ - If the DC and SP are asked to resolve the playground's legality in court, both should resign and go home, the fight over the playground will not stop - Eshwarappa



Fight, playground

ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಆಟದ ಮೈದಾನವನ್ನ ಎಸ್ಪಿ ಮತ್ತು ಡಿಸಿ ಮೈದಾನ ವಿವಾದ ಸುಖಾಂತ್ಯವಾಗಿದೆ ಎಂದು ಹೇಳಿರುವುದಕ್ಕೆ ರಾಷ್ಟ್ರಭಕ್ತರ ಬಳಗದ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ. ಇಬ್ವರೂ ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದು ಗುಡುಗಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೈದಾನಕ್ಕೆ ಭೂಪಾಕರ ಸಹಿಯಿಲ್ಲ. ಗೆಜೆಟ್ ನೋಟೀಫಿಕೇಷನ್ ನಲ್ಲೂ ವಿಳಾಸವೇ ಇಲ್ಲ.‌ ನಗರಾಭಿವೃದ್ಧಿ ಪ್ರಾಧಿಕಾರದ ನಕ್ಷೆಯಲ್ಲಿ ಆಟದ ಮೈದಾನವಿದೆ. ಪಾಲಿಕೆಯಲ್ಲಿ ಫೇಕ್ ದಾಖಲಾತಿ ಮಾಡಿರುವ ಬಗ್ಗೆ ಡಿಸಿಯವರ ಗಮನಕ್ಕೂ ತಂದರೂ ನ್ಯಾಯಾಲಯದಲ್ಲಿ ಮಾಲೀಕತ್ವದ ವಿಚಯ ಬಗೆಹರಿಸಿಕೊಳ್ಳಿ ಎಂಬುದಾದರೆ ನೀವು ಯಾಕೆ ಇರಬೇಕು ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದರು. 

ಈ ಕುರಿತು ರಾಷ್ಟ್ರಭಕ್ತರ ಬಳಗ ಡಿಸಿ ಕಚೇರಿಗದ ಭೇಟಿ ನೀಡಿ ಮನವಿ ಸಲ್ಲಿಸಿದ್ದೇವೆ. ಡಿಸಿಗಳಿಗೆ ನ್ಯಾಯಾಬದ್ಧವಾಗಿ ದಾಖಲಾತಿ ನೀಡಿದರೂ ನ್ಯಾಯಾಲಯಕ್ಕೆ ಹೋಗಿ ಎಂದಿರುವುದು ಅಕ್ಷಮ್ಯ ಅಪರಾಧವಾಗಿದೆ. ರಾಜ್ಯದ ಉಚ್ಚನ್ಯಾಯಾಲಕ್ಕೆ ಮತ್ತು ಲೋಕಾಯುಕ್ತರಿಗೂ ಡಿಸಿ ಮತ್ತು ಎಸ್ಪಿ ವಿರುದ್ಧ ದೂರನ್ನ ನೀಡಲಾಗುವುದು ಎಂದರು.

ಎಸ್ಪಿಯವರಿಗೆ ರೈಲ್ವೆ ಕಂಬಿಗಳನ್ನ‌ಬಳಸಿಕೊಂಡು ಬೇಲಿಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದೆವು. ನೀವು ರಾಜೀನಾಮೆ ನೀಡಿ ಎಂದಿದ್ದೆ. ನಮಗೆ ಮಾಹಿತಿ ನೀಡಿಲ್ಲ ಎಂದು ಎಸ್ಪಿ ಹೇಳಿದ್ದರು.  ನನ್ನ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ್ದ ಪೊಲೀಸ್ ಇಲಾಖೆ ರೈಲ್ವೆ ಇಲಾಖೆಯ ವಸ್ತುಗಳ ಬಳಸಿಕೊಂಡರೂ ಯಾವ ಕ್ರಮ ಕೈಗೊಳ್ಳಲಿಲ್ಲ  ಎಂದಿರುವುದು ನಗೆಪಾಟಲಿಗೆ ಕಾರಣವಾಗಿದೆ ಎಂದರು. 

ರೈಲ್ವೆ ಇಲಾಖೆಯನ್ನ‌ಬಳಸಿಕೊಂಡು ಈ ವಿಷಯವನ್ನ ಪ್ರಕರಣ ದಾಖಲಿಸಿದ್ದರು. ನಾವು ನೀಡಿರುವ ದಾಖಲಾತಿಯನ್ನ ಡಿಸಿ ಮತ್ತು ಎಸ್ಪಿ ಶಾಸಕರಿಗೆ ತೋರಿಸದೆ ಸುಖಾಂತ್ಯಗೊಂಡಿದೆ ಎಂದು ದಾರಿ ತಪ್ಪಿಸಿದ್ದಾರೆ. ಕಾನೂನು ಹೋರಾಟ ನಡೆಸಿ ನಂತರ ರಾಷ್ಟ್ರಭಕ್ತರ ಬಳಗ ಜನಜಾಗೃತಿ ಮಾಡಲಿದ್ದೇವೆ ಎಂದರು. 

ಜಾತಿ ಜನಗಣತಿ ವರದಿ ಮಂಡನೆಗೆ ಸ್ವಾಗತ ಆದರೆ ಮುಂದು ಹಾಕದಂತೆ ನೋಡಿಕೊಳ್ಳಲಿ. ಚರ್ಚೆ ನಡೆಯಲಿ, ಅದೇ ರೀತಿ ಅನ್ವರ್ ಮಾಪ್ಪಾಡಿ ಅವರ ವರದಿಯನ್ನ ಚರ್ಚೆಗೆ ತನ್ನಿ. ಯಾವ ಯಾವ ನಾಯಕರು ಸಾರ್ವಜನಿಕರ ಆಸ್ತಿಯನ್ನ‌ಲೂಟಿ ಮಾಡಿದ್ದಾರೆ ಚರ್ಚೆಯಾಗಲಿ. 

ಶಿವಮೊಗ್ಗದ ಆಟದ ಮೈದಾನದ ಬಗ್ಗೆ ಇನ್ನೂ ಎರಡು ವಿಷಯ ಕೈಗೆತ್ತಿಕೊಳ್ಳಲಿದ್ದೇವೆ. ಪಾಲಿಕೆ ಆಸ್ತಿಯನ್ನಾಗಿ ಮಾಡಲಿದ್ದೇವೆವೆಂದರು. ಹಿಂದುತ್ವ ವಿಚಾರದಲ್ಲಿ ಅನಂತಕುಮಾರ್ ಹೆಗ್ಡೆ, ಸಿಟಿ ರವಿ, ಯತ್ನಾಳ್ ನಾನು ಎಲ್ಕರೂ ಒಂದೇ. ಆದರೆ ಇವರೆಲ್ಲಾ ಮೂಲೆಗುಂಪಾಗಿಲ್ಲ. ಆದರೆ ಸೈಕಲ್ ಚಕ್ರವಿದ್ದಂತೆ ನಿಧಾನವಾಗಬಹುದು ಕೊನೆಗೆ ಜಯ ನಮ್ಮದೆ ಎಂದರು. 

the fight over the playground will not stop

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close