SUDDILIVE || BHADRAVATHI
ಆತ್ಮಹತ್ಯೆಯಿಂದ ಬಜಾವ್ ಮಾಡಿದ 112 ಪೊಲೀಸರು-112 policemen saved person who was attempt to suicide
ಭದ್ರಾವತಿಯ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಚಾಲಕ ಹುದ್ದೆಗೆ ಕುತ್ತುಬಂದ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ಇಳಿದಿದ್ದ ಯುವಕನನ್ನ 112 ಪೊಲೀಸರು ಬಜಾವ್ ಮಾಡಿರುವ ಘಟನೆ ನಡೆದಿದೆ.
ಮೇ.7ರಂದು ಭದ್ರಾವತಿ ವೀರಾಪುರ ಗ್ರಾಮದ ಮಹಿಳೆಯೊಬ್ಬರು ಇ.ಆರ್.ಎಸ್.ಎಸ್ – 112 ತುರ್ತು ಸಹಾಯವಾಣಿಗೆ ಕರೆ ಮಾಡಿ, ತನ್ನ ಮಗ ಮನೆಯ ಬಾಗಿಲು ಹಾಕಿಕೊಂಡು ನೇಣು ಬಿಗುದು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾನೆಂದು ದೂರು ಬಂದಿತ್ತು.
ದೂರಿನ ಆಧಾರದ ಮೇರೆಗೆ ಇ.ಆರ್.ಎಸ್.ಎಸ್ ವಾಹನದ ಅಧಿಕಾರಿಗಳಾದ ವಿನಯ್ ಕುಮಾರ್ ಸಿಪಿಸಿ – 1618, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ವಾಹನದ ಚಾಲಕರಾದ ಸಂತೋಷ್ ಕುಮಾರ್ ಎಪಿಸಿ ರವರುಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಯುವಕನನ್ನ ರಕ್ಷಿಸಿದ್ದಾರೆ. ಮನೆಯ ಬಾಗಿಲು ತೆಗೆಸಿ ನೇಣು ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದ ಯುವಕನನ್ನ ತಡೆದು ರಕ್ಷಿಸಿದ್ದಾರೆ.
ನಂತರ ವಿಚಾರ ಮಾಡಿದಾಗ ಯುವಕ ಈ ಹಿಂದೆ ಚಾಲಕ ವೃತ್ತಿ ಮಾಡುತ್ತಿದ್ದ, ಆದರೆ ಸ್ವಲ್ಪ ದಿನಗಳಿಂದ ಯಾವುದೇ ಕೆಲಸ ಇಲ್ಲದ ಕಾರಣ, ಮದ್ಯಪಾನ ಚಟ ಶುರು ಮಾಡಿ ಹಣಕ್ಕಾಗಿ ತನ್ನ ತಾಯಿಯೊಂದಿಗೆ ಜಗಳ ಮಾಡಿಕೊಂಡು, ಮನೆಯ ಒಳಗೆ ಹೋಗಿ ಬಾಗಿಲು ಹಾಕಿಕೊಂಡು ನೇಣು ಹಾಕಿಕೊಳ್ಳಲು ಪ್ರಯತ್ನಿಸಿದ್ದಾನೆಂದು ತಿಳಿದು ಬಂದಿದೆ. ಯುವಕನಿಗೆ ಪೊಲೀಸರು ಆತ್ಮಹತ್ಯೆ ಪರಿಹಾರವಲ್ಲ ಎಂದು ಬುದ್ದಿವಾದ ಹೇಳಿ ಬಂದಿದ್ದಾರೆ.
ಕೂಡಲೇ ಕಾರ್ಯಪ್ರೌವೃತ್ತರಾಗಿ ಕರ್ತವ್ಯ ನಿಷ್ಠೆ ಮೆರೆದ ಇ.ಆರ್.ಎಸ್.ಎಸ್ – 112 ನ ಪೊಲೀಸ್ ಅಧಿಕಾರಿಗಳಿಗೆ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
112 policemen saved person