SUDDILIVE || SORABA
Nagar Bana removed and build toilet, officials who went to listen were abused with indecent words
ಸೊರಬದ ಆನೆಮುಡುಕೆಯಲ್ಲಿ ನಾಗರ ಬನ ವನ್ನ ನಾಶ ಪಡಿಸಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ಕುರಿತು ಪುರಸಭೆಯ ಮುಖ್ಯ ಅಧಿಕಾರಿಗಳು ಕೇಳಲು ಹೋದರೆ ಸ್ಥಳೀಯರು ಅವ್ಯಾಚ್ಯಶಬ್ದಗಳಿಂದ ಬೈದಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಸೊರಬ ಪುರಸಭೆ ವ್ಯಾಪ್ತಿಗೆ ಬರುವ ಆನೆ ಮುಡುಕ್ಕೆ ರಸ್ತೆಯಲ್ಲಿರುವ ಸರ್ಕಾರಿ ಜಾಗದಲ್ಲಿ ಅಶ್ವತ ವೃತ್ತ ಅರಳಿ ಮರವನ್ನು ಕಡಿತಲೆ ಮಾಡಿ ನಾಗದೇವತೆ ಕಲ್ಲು ಹಾಗೂ ಇನ್ನಿತರ ಪೂಜೆ ಮಾಡುವ ಕಲ್ಲುಗಳನ್ನು ಸ್ಥಳಾಂತರಿಸಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿರುವ ಹಿಂದುಗಳು ಪೂಜೆ ಪುನಸ್ಕಾರ ಮಾಡಿಕೊಂಡು ಬರುತ್ತಿರುವ ಅರಳಿ ಮರವನ್ನು ಕಡೆದಿರುವುದು ಜನತೆಯ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಅಶ್ವತ ಮರವನ್ನು ಅದೇ ಜಾಗದಲ್ಲಿ ಅನಧಿಕೃತವಾಗಿ ತಾತ್ಕಾಲಿಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಅಲ್ಲದೆ ಕನಸರ್ವ್ನ್ಸಿ ರಸ್ತೆಯಲ್ಲಿರುವ ಹಿಂದಿನ ಮನೆಯವರಿಗೆ ಓಡಾಡಲು ಈ ಜಾಗವೇ ದಾರಿಯಾಗಿದ್ದು, ದಾರಿಗೆ ಅಡ್ಡಲಾಗಿ ಶೌಚಾಲಯ ನಿರ್ಮಿಸಲಾಗಿದೆ. ಹಿಂದಿನ ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ.
ಪುರಸಭೆಯ ಅಧಿಕಾರಿಗಳು ವಾರ್ಡ್ ಬೇಟಿಗೆ ಹೋದಾಗ, ಸರ್ಕಾರಿ ಜಾಗದಲ್ಲಿದ್ದ ನಾಗರ ಬನದ ಬದಲು ಶೌಚಾಲಯ ನಿರ್ಮಿಸಕಾಗಿಧದು ಇದನ್ನ ಅಕ್ಕ ಪಕ್ಕದ ಮನೆಯವರನ್ನ ವಿಚಾರಿಸಿದ ಅಧಿಕರಿಗಳಿಗೆ ಆಘಾತವಾಗಿದೆ. ನಾವೇ ಅನಧಿಕೃತವಾಗಿ ಶೌಚಾಲಯ ನಿರ್ಮಿಸಿದ್ದೇವೆ. ಯಾವುದೇ ಕಾರಣಕ್ಕೂ ಶೌಚಾಲಯವನ್ನ ತೆಗೆಯಲು ಬಿಡುವುದಿಲ್ಲ ಅಲ್ಲಿನ ಸ್ಥಳೀಯರಾದ ಶೃತಿ, ಸೌಂದರ್ಯ ಮತ್ತು ಪರಶುರಾಮ್ ಅಧಿಕಾರಿಗಳಿಗೆ ಉದ್ಧಟತನ ತೋರಿದ್ದಾರೆ.
ಈ ಕುರಿತು ಸೊರಬ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿ 24 ಗಂಟೆ ಕಳೆದಿದೆ. ಯಾವುದೇ ದೂರು ದಾಖಲಾಗಿಲ್ಲ.
Nagar Bana removed