ಗಾಂಜಾ ಮಾರಾಟ, ನಾಲ್ವರು ಬಂಧನ-Four arrested for selling Ganja

SUDDILIVE || SHIVAMOGGA

ಗಾಂಜಾ ಮಾರಾಟ, ನಾಲ್ವರು ಬಂಧನ-Four arrested for selling Ganja

Selling, ganja

ಗಾಂಜಾ ಮಾರಾಟ ಮಾಡುತ್ತಿದ್ದ ಮಚ್ಚೆ, ದರ್ಶನ್, ಕೇಶವ, ನಾಗರಾಜರನ್ನ ಬಂಧಿಸಲಾಗಿದೆ. ಬಂಧಿತರಿಂದ 1 ಕೆಜಿ 225 ಗ್ರಾಂ ಒಣ ಗಾಂಜಾವನ್ನ ಸಿಇಎನ್ ಪೊಲಿಸರು ವಶಕ್ಕೆ ಪಡೆದಿದ್ದಾರೆ. 

ಮೇ.05 ರಂದು  ಶಿವಮೊಗ್ಗ ತಾಲ್ಲೂಕು ಬೊಮ್ಮನಕಟ್ಟೆ ಯಿಂದ ಬಸವಗಂಗೂರು ಕಡೆ ಹೋಗುವ ರಸ್ತೆಯ ಮಧ್ಯದಲ್ಲಿ  ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ  ಮಾಹಿತಿಯ ಮೇರೆಗೆ ಸಿಇಎನ್ ಡಿವೈಎಸ್ಪಿ ಕೃಷ್ಣಮೂರ್ತಿ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ದಾಳಿ ನಡೆದಿದೆ. 

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿರಾದ  1.ಆಕಾಶ ಸಿ @ ಮಚ್ಚೆ, 20 ವರ್ಷ, ವಾಸ ಶಾಂತಿನಗರ ರಾಗಿಗುಡ್ಡ, ಶಿವಮೊಗ್ಗ ಹಾಲಿ ವಾಸ ಆಶ್ರಯ ಬಡಾವಣೆ “ಇ” ಬ್ಲಾಕ್ ಬೊಮ್ಮನಕಟ್ಟೆ, ಶಿವಮೊಗ್ಗ ಟೌನ್,  2. ವಿ ದರ್ಶನ್ 22 ವರ್ಷ, ವಾಸ ವಿನೋಬನಗರ, ನ್ಯಾಮತಿ ಟೌನ್, ದಾವಣಗೆರೆ ಜಿಲ್ಲೆ, 3. ಕೇಶವ ವಿ, 21 ವರ್ಷ, ವಾಸ ಆಶ್ರಯ ಬಡಾವಣೆ ಬೊಮ್ಮನಕಟ್ಟೆ, ಶಿವಮೊಗ್ಗ ಟೌನ್, 

4. ನಾಗರಾಜ ಎಂ 21 ವರ್ಷ, ಆಶ್ರಯ ಬಡಾವಣೆ ಬೊಮ್ಮನಕಟ್ಟೆ, ಶಿವಮೊಗ್ಗ ಟೌನ್ ಇವರನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಅಂದಾಜು ಮೌಲ್ಯ 20,000/-  ರೂಗಳ 1 ಕೆಜಿ 225 ಗ್ರಾಂ ತೂಕದ ಒಣ ಗಾಂಜಾ ವನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.

Four arrested for selling Ganja

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close