ಮೇ.9 ರಂದು ಸಾವಿರದ ವಚನ -A thousand vows

 Suddilive || Shivamogga

ಮೇ.9 ರಂದು ಸಾವಿರದ ವಚನ -A thousand vows on May 9th

Thousand, vows


ಜಾತಿಗೆ ಸೀಮಿತವಾಗದೆ ಬಸವೋತ್ಸವ ಕಾರ್ಯಕ್ರಮ ಜರುಗಲಿದೆ. ಬಸವ ಜಯಂತಿ ಆಚರಣಾ ಸಮಿತಿಯ ವತಿಯಿಂದ ಒಂದು ವೇದಿಕೆ ಸಾವಿರ ಕಂಠಗಳು ಒಂದೇ ಧ್ವನಿಯ ಸಾವಿರದ ವಚನಗಳು ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮಾಜಿ ಎಂಎಲ್ ಸಿ ರುದ್ರೇಗೌಡ, ಮೇ.9 ರಂದು ಅಲ್ಲಮಪ್ರಭು ಮೈದಾನದಲ್ಲಿ ಸಂಜೆ 5-30 ರಂದು ಜರುಗಲಿದೆ. ಬೆಕ್ಕಿನಕಲ್ಮಠದ ಮುರುಘ ಮಠದ ಡಾ.ಮಲ್ಲಿಕರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಲಿದ್ದಾರೆ.

ಶಿವಮೊಗ್ಗದ ಎಲ್ಲಾ ಮಠಾಧೀಶರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಲಿದೆ. ಬೆಳಗಾವಿ ಜೆ.ಎನ್ ಮೆಡಿಕಲ್ ಕಾಲೇಜ್ ನ ಡಾ.ಅವಿನಾಶ್ ಕವಿ ಉಪನ್ಯಾಸ ನೀಡಲಿದ್ದಾರೆ. 1300 ಜನ ತಮ್ಮ ಹೆಸರನ್ನ ನೋಂದಾಯಿಸಿಕೊಂಡಿದ್ದಾರೆ ಎಂದರು.

ಡಾ.ಮಲ್ಲಿಕಾರ್ಜು ಮಹಾಸ್ವಾಮಿಗಳು ಮಾತನಾಡಿ, ವಚನ ಸಾಹಿತ್ಯ ಪ್ರಸ್ತುತ ಕಾಲಘಟಕದ ಸಮಸ್ಯೆಗೆ ಪರಿಹಾರವಾಗಿದೆ. ಹೆಚ್ಚು ಜನ ವಚನ ಪಠಣವಾಗಬೇಕು. ಗದ್ಯ ಮತ್ತು ಪದ್ಯ ಸೇರಿ ಗಪದ್ಯವಾಗಿರುವ ವಚನವಾಗಿದೆ. ಇದನ್ನ ಸಾವಿರ ಕಂಠದಲ್ಲಿ ಪಠಿಸುವುದು ಸಾಮಾನ್ಯ ಸಾಧನೆವಲ್ಲ. ಪ್ರೋತ್ಸಾಹ ಮತ್ತು ಪ್ರತಿಕ್ರಿಯೆ ಉತ್ತಮವಾಗಿದೆ. 38 ವಚನಗಳನ್ನ ಕಾರ್ಯಕ್ರಮದಲ್ಲಿ ಹೇಳಲಾಗುವುದು ಎಂದರು. 

ಸುದ್ದಿಗೋಷ್ಠಿಯಲ್ಲಿ ಬಸವ ಕೇಂದ್ರ ಶ್ರೀಗಳು, ಎಂಎಲ್ ಸಿ ಡಾ.ಧನಂಜಯ ಸರ್ಜಿ, ಎಸ್ ಎಸ್ ಜ್ಯೋತಿ ಪ್ರಕಾಶ್, ಹೆಚ್ ಸಿ ಯೋಗೇಶ್, ಸಂತೋಷ್ ಬಳ್ಳೇಕೆರೆ, ಕಿರಣ್ ಮೊದಲಾದವರು ಉಪಸ್ಥಿತರಿದ್ದರು. 

A thousand vows

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close