Suddilive || Bhadravathi
ಕ್ರಿಕೆಟ್, ಡ್ರಿಂಕ್ಸ್ ಹಾಗೂ ಮರ್ಡರ್, Cricket, Drinks and Murder
ಭದ್ರಾವತಿ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಯುವಕನೋರ್ವನ ಕೊಲೆಯಾಗಿದೆ. ಕ್ರಿಕೆಟ್ ಆಟ ಹಾಗೂ ಹಳೆ ದ್ವೇಷದ ಹಿನ್ನಲೆಯಲ್ಲಿ ಕೊಲೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಭದ್ರಾವತಿಯ ಅಕ್ಮಹಾದೇವಿ ಶಾಲಾ ಮೈದಾನದಲ್ಲಿ ಅರುಣ ಮತ್ತು ಸಂಜಯ್ ನಡುವಿನ ಕ್ರಿಕೆಟ್ ಆಟ ನಡೆದಿದೆ. ಆಟದಲ್ಲಿ ಗಲಾಟೆಯಾಗಿದೆ. ನಂತರ ಈ ವಿಷಯವನ್ನ ಸಂಧಾನ ಮಾಡಿಸುವುದಾಗಿ ಕೇಶವಪುರ ಬಡಾವಣೆಯಲ್ಲಿ ಎಣ್ಣೆ ಪಾರ್ಟಿ ನಡೆದಿದೆ.
ಎಣ್ಣೆ ಪಾರ್ಟಿ ನಡೆಯುತ್ತಿದ್ದ ವೇಳೆ ಮಾತಿಗೆ ಮಾತು ಬೆಳೆದು ಕೊಲೆಯಾಗಿದೆ. ಅರುಣ್ ಎಂಬ 23 ವರ್ಷದ ಯುವಕನನ್ನ ಕೊಲೆ ಮಾಡಲಾಗಿದೆ. ಇದೇ ವಿಚಾರದಲ್ಲಿ ಸಂಜಯ್ ಗೂ ಗಾಯಗಳಾಗಿದ್ದು ಆತನನ್ನ ಆಸ್ಪತ್ರೆಗೆದಾಖಲಿಸಲಾಗಿದೆ. ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದು ವರೆದಿದೆ.
Cricket, Drinks and Murder