Suddilive || Shivamogga
Deport Pakistani nationals residing in Karnataka - MP's appeal
ಇತ್ತೀಚೆಗೆ ಪಹಲ್ಗಾಮ್ ನಲ್ಲಿ ನಡೆದ ದಾಳಿಯಿಂದ 26 ಜನ ಅಮಾಯಕ ಪ್ರವಾಸಿಗರು ಮೃತಪಟ್ಟಿದ್ದಾರೆ. ಇದನ್ನು ಇಡೀ ಪ್ರಪಂಚದ ನಾಯಕರು ಖಂಡಿಸಿದ್ದಾರೆ. ಈ ಸಂದರ್ಭದಲ್ಲಿ ನರೇಂದ್ರ ಮೋದಿಯಾವರು ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ಗೆ ಉತ್ತರ ಕೊಡಲು ರೆಡಿ ಆಗಿದ್ದಾರೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಾಜತಾಂತ್ರಿಕ ಕ್ರಮಗಳ ಬಗ್ಗೆ ಎಲ್ಲರೂ ಕೂಡಾ ಇದಕ್ಕೆ ಶಕ್ತಿ ತುಂಬಿದ್ದಾರೆ. ಪಾಕಿಸ್ತಾನದ ವಿಚಾರದಲ್ಲಿ ಮೋದಿಯಾವರು ವಿಶೇಷವಾಗಿ 5 ಪ್ರಮುಖ ನಿಲುವುಗಳನ್ನು ತೆಗೆದುಕೊಂಡಿದ್ದಾರೆ. ಅದರಲ್ಲಿ ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳು 48 ಗಂಟೆಗಳ ಒಳಗೆ ಭಾರತ ರತ ಬಿಟ್ಟು ತೊಲಗಿ ಬೇಕೆಂಡಿದ್ದು ಅತ್ಯಂತ ಗಮನಾರ್ಹ ವಿಚಾರ ಎಂದರು.
ಪಾಕಿಸ್ತಾನ ಪ್ರಜೆಗಳು ನಮ್ಮ ಭಾರತದಲ್ಲಿ ಅನಾದೀಕೃತವಾಗಿ ಇಲ್ಲಿ ನೆಲೆಸಿದ್ದಾರೆ. ಬೇರೆ ರಾಜ್ಯದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಗೌರವ ಪೂರ್ವಕವಾಗಿ ಅವರ ದೇಶಕ್ಕೆ ಕಳುಹಿಸಿ ಕೊಡಲಾಗಿದೆ. ಈ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳು ಯಶಸ್ವಿಯಾಗಿ ಪಾಕಿಸ್ತಾನ ಪ್ರಜೆಗಳನ್ನು ವಾಪಸ್ ಕಳುಹಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು
ಆದರೆ ಬಿಜೆಪಿಯೇತರ ಆಡಳಿತವಿರುವ ಕರ್ನಾಟಕದಲ್ಲಿ ಪಾಕಿಸ್ತಾನ ಪ್ರಜೆಗಳನ್ನು ವಾಪಸ್ ಕಳುಹಿಸುವಲ್ಲಿ ಉದಾಸೀನ ತೋರಿದಂತಿದೆ. ಇನ್ನೂ ಕೂಡಾ ಕರ್ನಾಟಕದಲ್ಲಿ ಕೆಲವು ಪಾಕಿಸ್ತಾನಿಗಳು ಪ್ರಜೆಗಳು ಇದ್ದಾರೆ. ಇದರ ಮಾಹಿತಿ ರಾಜ್ಯ ಸರ್ಕಾರಕ್ಕೆ ಈಗಾಗಲೇ ಇದೆ. ವಿಶೇಷವಾಗಿ ಜಿಲ್ಲಾಡಳಿತ ಪಾಕಿಸ್ತಾನಿ ನಿವಾಸಿಗಳನ್ನು ಗುರುತಿಸಿ ಅವರ ದೇಶಕ್ಕೆ ಕಳುಹಿಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯಪಾಲರು ಕೂಡಾ ಇದರ ಬಗ್ಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನವನ್ನು ನೀಡಬೇಕು. 24 ಗಂಟೆಗಳ ಒಳಗೆ ಪಾಕಿಸ್ತಾನ ಪ್ರಜೆಗಳನ್ನು ಹೊರ ಕಳುಹಿಸಲು ರಾಜ್ಯ ಸರ್ಕಾರಕ್ಕೆ ರಾಜ್ಯ ಪಾಲರು ನಿರ್ದೇಶನ ನೀಡಬೇಕು. ಈ ಕುರಿತು ಎಲ್ಲಾ ಬಿಜೆಪಿಯ ಪ್ರಕೋಷ್ಟಕದ ಪದಾಧಿಕಾರಿಗಳು ಸಹಿ ಸಂಗ್ರಹ ಮಾಡಿ ನಾಳೆ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸುತ್ತೇವೆ ಎಂದರು.
ಜಿಲ್ಲಾ ಬಿಜೆಪಿಯ ವತಿಯಿಂದ ಈ ನಿಲುವು ತೆಗೆದುಕೊಂಡ ಪ್ರಧಾನಿಗಳಿಗೆ ಧನ್ಯವಾದಗಳು. ಇದರ ಮೂಲಕ ಪ್ರಧಾನಿ ಮೋದಿ ಯಶಸ್ವಿ ದಿಕ್ಕಿನಲ್ಲಿ ದೇಶವನ್ನು ತೆಗೆದುಕೊಂಡು ಹೋಗುವಂತಾಗಲಿ ಎಂದರು.
ಜೂನ್ ಅಂತ್ಯಕ್ಕೆ ಸಿಗಂದೂರು ಸೇತುವೆ ಉದ್ಘಾಟನೆ
ಸಿಗಂದೂರು ಸೇತುವೆ ವಿಚಾರಕಂಟ್ರಾಕ್ಟರ್ ಆಗಸ್ಟ್ ತಿಂಗಳಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಸಿಗಂದೂರು ಸೇತುವೆ ಉದ್ಘಾಟನೆಗೆ ಪ್ರಧಾನಿ ಮೋದಿ ಬರುವಂತೆ ಮನವಿ ಮಾಡಿದ್ದೇವೆ. ಅದರೆ ಜೂನ್ ತಿಂಗಳ ಅಂತ್ಯದಲ್ಲಿ ಸೇತುವೆಯ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸಾಧ್ಯವಾದರೆ ಜೂನ್ ತಿಂಗಳ ಅಂತ್ಯದಲ್ಲಿ ಸೇತುವೆ ಉದ್ಘಾಟನೆ ಆಗಬಹುದು ಎಂದರು
ಜಾತಿ ಗಣತಿ ವಿಚಾರ
ಪ್ರದಾನ ಮಂತ್ರಿಗಳು ಜಾತಿ ಗಣತಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಜಾತಿಯನ್ನೇ ಎತ್ತಿ ಕಟ್ಟಿ ರಾಜಕೀಯ ಮಾಡುವ ಉದ್ದೇಶ ಭಾರತೀಯ ಜನತಾ ಪಾರ್ಟಿಗೆ ಇಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿಯು ಇಂಥಹ ಪ್ರಯತ್ನಗಳು ನಡೆದಿತ್ತು ಎಂದರು.
Deport Pakistani nationals