SUDDILIVE || SHIVAMOGGA
ಎಟಿಎಂ ಸುರಕ್ಷಿತವಾಗಿಲ್ಲವೆಂಬುದು ಮತ್ತೊಮ್ನೆ ಸಾಬೀತಾಯಿತು-ATMs are proven to be unsafe once again!
ಎಟಿಎಂಗಳಲ್ಲಿ ಸುರಕ್ಷತೆಯಿಲ್ಲವೆಂಬ ಕೂಗು ಮೊದಲಿನಿಂದಲೂ ಕೇಳಿ ಬರುತ್ತಿದೆ. ಈಗ ಡಿಜಿಟಲ್ ಪೇಮೆಂಟ್ ಬಂದರೂ ಸಹ ಎಟಿಎಂ ಕಾರ್ಡ್ ಗೆ ಬಹಳ ಒತ್ತನ್ನ ನೀಡಲಾಗಿದೆ. ಆದರೆ ಎಟಿಎಂಗಳು ಸುರಕ್ಷಿತವಾಗಿಲ್ಲವೆಂಬುದು ಮತ್ತೊಮ್ಮೆ ಸಾಬೀತಾಗಿದೆ.
ಎಟಿಎಂಗೆ ಜೆಸಿಬಿ ನುಗ್ಗಿಸಿ ಎಟಿಎಂ ಎಗುರಿಸುವ ತಂತ್ರಗಾರಿಕೆ, ಹಣ ತೆಗೆದುಕೊಡುವ ನೆಪದಲ್ಲಿ ಗ್ರಾಹಕರ ಹಣ ಲಫ್ಟಾಯಿಸುವಿಕೆ, ಎಟಿಎಂ ಗಳಲ್ಲಿ ಸೆಕ್ಯೂರಿಟಿಯ ಕೊರತೆ, ಸಿಸಿ ಟಿವಿಗಳು ಸರಿಯಾಗಿ ವರ್ಕ್ ಮಾಡದೆ ಇರುವುದು. ಹೀಗೆ ಸಾಲು ಸಾಲು ಅಭದ್ರತೆಯಿಂದ ಕೂಡಿದ ಹೊತ್ತಲ್ಲೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ.
ವಿನೋಬ ನಗರದ ಕೆನೆರಾ ಬ್ಯಾಂಕ್ ಎಟಿಎಂನಲ್ಲಿ ಅಪರಿಚಿತ ವ್ಯಕ್ತಿ ಬಂದು ಹಣ ಡ್ರಾ ಮಾಡಿಕೊಳ್ಳುವ ಜಾಗದಲ್ಲಿ ಗಮ್ ಟೇಪಿನ ತರಹದ್ದ ವಸ್ತುವನ್ನ ಅಂಟಿಸಿ ಹೋಗಿದ್ದು, ಗ್ರಾಹಕರು ಬಂದು ಹಣ ಡ್ರಾ ಮಾಡಿಕೊಳ್ಳುವಾಗ ಆ ಹಣ ಗಮ್ ಟೇಪಿಗೆ ಅಂಟಿಕೊಂಡು ಗ್ರಾಹಕರಿಗೆ ಸಿಗದಂತೆ ನೋಡಿಕೊಳ್ಳುವ ಚಾಲಾಕಿತನವನ್ನ ತೋರಿದ್ದಾನೆ.
ಇದರಂತೆ ಇಬ್ವರು ಗ್ರಾಹಕರಿಂದ ಸುಮಾರು 16½ ಸಾವಿರ ರೂ. ಹಣ ಗ್ರಾಹಕರಿಗೆ ವಂಚನೆಯಾಗಿದೆ. ಇದನ್ನ ಖುದ್ದು ಬ್ಯಾಂಕಿನ ಮ್ಯಾನೇಜರ್ ಗಳೇ ಸಿಸಿ ಟಿವಿ ಫೂಟೇಜ್ ಪರಿಶೀಲಿಸಿದಾಗ ಈ ದೃಶ್ಯ ಲಭ್ಯವಾಗಿದೆ. ಹಣ ಹೊಡೆಯಲು ಲೂಟಿಕೋರರ ತಂಡ ಸದಾ ಸಜ್ಜಾಗುವೆ. ಅದಕ್ಕೆ ತಕ್ಕಂತ ಸುರಕ್ಷತೆಯ ಲೋಪದೋಷಗಳು ಮಾತ್ರ ಕಡಿಮೆಯಾಗುತ್ತಿಲ್ಲ.
ATMs are proven to be unsafe