SUDDILIVE || SHIVAMOGGA
ಒಂದೇ ವೇದಿಕೆಯಲ್ಲಿ ಮಾಜಿ ಸಿಎಂ ಮತ್ತು ಡಿಸಿಎಂ ಭಾಗಿ, ಪರಸ್ಪರ ಮುಖನೋಡದ ನಾಯಕರು-Former CM and DCM participate in the same forum, leaders who do not see each other's faces
ಶಿವಮೊಗ್ಗದಲ್ಲಿ ಹಿರಿಯೂರು ಕೃಷ್ಣಮೂರ್ತಿ ಸಂಸ್ಮರಣಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಮತ್ತು ಮಾಜಿ ಡಿಸಿಎಂ ಗಳು ಎದುರಾದರೂ ಮಾತನಾಡದೇ ಭಾಗಿಯಾಗಿರುವುದು ಗಮನಸೆಳೆದಿದೆ.
ಕುವೆಂಪು ರಂಗ ಮಂದಿರದಲ್ಲಿ ಹಿರಿಯೂರು ಕೃಷ್ಣಮೂರ್ತಿಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದಿದ್ದು ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯ್ಯೂರಪ್ಪ ಮತ್ತು ಮಾಜಿ ಡಿಸಿಎಂ ಈಶ್ವರಪ್ಪ ಭಾಗಿಯಾಗಿ ಒಂದೇ ವೇದಿಕೆ ಹಂಚಿಕಕೊಂಡ ಒಬ್ಬರನೊಬ್ಬರು ಮಾತನಾಡಿಸಿಲ್ಲ. ಭಾರತ ಮಾಯೆಗೆ ಪುಷ್ಪಾರ್ಚನೆ ವೇಳೆ ಅಕ್ಕಪಕ್ಕನೆ ನಿಂತರೂ ಸಹ ಒಬ್ಬರನೊಬ್ಬರ ಮುಖ ನೋಡದೆ ಪುಷ್ಪಾರ್ಚನೆ ಮಾಡಿದ್ದಾರೆ.
ಬದಲಾದ ರಾಜಕೀಯ ಸನ್ನಿವೇಶದ ನಂತರ ಇದೇ ಮೊದಲ ಬಾರಿಗೆ ನಾಯಕರು ಒಂದೇ ವೇದಿಕೆ ಹಂಚಿಕೊಂಡಿದ್ದರು. ಒಂದೇ ವೇದಿಕೆಯಲ್ಲೂ ಇದ್ದರೂ ಸಹ ಪರಸ್ಪರ ಮಾತನಾಡಿಲ್ಲ. ಅದರಂತೆ ಕಾರ್ಯಕ್ರಮದಲ್ಲಿ ಹಲವು ನಾಯಕರು ಭಾಗಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿ ಆರ್ ಎಸ್ ಎಸ್ ಸರಕಾರ್ಯವಾಹಕ ದತ್ತಾತ್ರೇಯ ಹೊಸಭಾಳೆ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿವೈ ರಾಘವೇಂದ್ರ, ಪರಿಷತ್ ಸದಸ್ಯ ಸಿಟಿ ರವಿ, ಶಾಸಕ ಎಸ್ ಎನ್ ಚನ್ನಬಸಪ್ಪ, ಮಾಜಿ ಶಾಸಕ ಆಯನೂರು ಮಂಜುನಾಥ್, ಮಾಜಿ ಸಭಾಪತಿ ಡಿ ಹೆಚ್ ಶಂಕರಮೂರ್ತಿ, ಉಮಾ ಹಿರಿಯೂರು ಕೃಷ್ಣಮೂರ್ತಿ,ಆರ್ ಎಸ್ ಎಸ್ ನ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ, ಹಾಗೂ ಭಾ.ಮ ಶ್ರೀಕಂಠ ಭಾಗಿಯಾಗಿದ್ದರು.
Former CM and DCM participate in the same forum