SUDDILIVE || SHIVAMOGGA
ಮನೆ ಕೆಲಸದಾಕೆಯಿಂದಲೇ ಚಿನ್ನಾಭರಣ ಕಳುವಿನ ಶಂಕೆ-Domestic worker suspected of stealing jewellery
ಮನೆಯಲ್ಲಿಟ್ಟಿದ್ದ 7,03 ಲಕ್ಷ ರೂ. ಮೌಲ್ಯದ ಒಟ್ಟು 79 ಗ್ರಾಂ ಚಿನ್ನಾಭರಣಗಳು ಕಳುವಾಗಿದ್ದು, ಇದು ಮನೆ ಕೆಲಸದವರಿಂದಲೇ ನಡೆದಿದೆ ಎಂದು ಆರೋಪಿಸಿ ಶಿವಮೊಗ್ಗದ ಮಹಿಳಾ ವಕೀಲರೊಬ್ವರು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿವಮೊಗ್ಗದ ಕುವೆಂಪು ಇನ್ಫ್ರಾಸಿಟಿ ಬಡಾವಣೆಯಲ್ಲಿದ್ದ ಮನೆಯೊಂದರಲ್ಲಿ ವಕೀಲರು ಪತಿ ಬ್ಯಾಂಕ್ ಉದ್ಯಮಿ, ಅತ್ತೆ ಮತ್ತು ಮಗನೊಂದಿಗೆ ವಾಸವಾಗಿದ್ದರು. ಏಪ್ರಿಲ್ ನಲ್ಲಿ ಜವಳ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ನಾಲ್ಕು ಚಿನ್ಬದ ಬಳೆಗಳನ್ನ ಧರಿಸಿ ನಂತರ ಬೀರುವಿನಲ್ಲಿ ಎತ್ತಿಟ್ಟು ಇಙಟರ್ ಲಾಕ್ ಮಾಡಿದ್ದರು.
ಏ.29 ರಂದು ತನ್ನ ಸಹೋದರನ ಕಾರ್ಯಕ್ರಮಕ್ಕೆ ಹೋಗಲು ವಕೀಲರು ಚಿನ್ನಾಭರಣವನ್ನ ಧರಿಸಲು ಮುಂದಾದಾಗ ಕೆಲ ಚಿನ್ನಾಭರಣಗಳು ಇಲ್ಲದಂತಾಗಿದೆ. ಈ ಬಗ್ಗೆ ಮನೆಯವರೆಲ್ಲಾರನ್ನ ವಿಚಾರಿಸಿದಾಗ ಯಾರೂ ಸಹ ನೋಡಿಪ್ಲವೆಂದಿದ್ದಾರೆ. ಆದರೆ ಮನೆ ಕೆಲಸ ಮಾಡುವರ ಮೇಲೆ ಅನುಮಾನವಿದೆ ಎಂದು ಮನೆಗೆಲಸದಾಕೆಯ ಮೇಲೆ ದೂರು ದಾಖಲಿಸಲಾಗಿದೆ.
ನಾಲ್ಕು ಬಳೆ, ಓಲೆ ಜುಮಕಿ, ಮಕ್ಕಳ ಬಂಗಾರದ ಸರ ಸೇರಿ 79 ಗ್ರಾಂ ಚಿನ್ನಾಭರಣ ಕಳುವಾಗಿದೆ ಎಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
suspected of stealing jewellery