Suddilive || Shivamogga
ಸಕ್ರೆಬೈಲು ಬಳಿ ಅಪಘಾತ - ಓರ್ವ ವ್ಯಕ್ತಿ ಸಾವು-Accident near Sakrebailu-One person dead
ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕು ಸಕ್ರೆಬೈಲು ಬಳಿ ಘಟನೆ ಸಂಭವಿಸಿದೆ.
ಶ್ರೀಧರ್ (55 ವರ್ಷ) ಮೃತಪಟ್ಟ ದುರ್ದೈವಿ. ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಅಲ್ಲದೆ ರಸ್ತೆಯಿಂದ ಬದಿಗೆ ಇಳಿದಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಶ್ರೀಧರ್ ಅವರನ್ನು ಕೂಡಲೆ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ವೈದ್ಯರು ಶ್ರೀಧರ್ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಸೀಬಿನಕೆರೆ ನಿವಾಸಿ ಶ್ರೀಧರ್ ಮೈಸೂರಿನಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಹಾಗೂ ಮಕ್ಕಳ ಮನೆಗೆ ಹೋಗಿ ಬಂದಿದ್ದಾರೆ. ರೈಲಿನಲ್ಲಿ ಬಂದಿದ್ದ ಶ್ರೀಧರ್ ಶಿವಮೊಗ್ಗದಲ್ಲಿ ತಮ್ಮ ಓಮಿನಿ ಕಾರಿನಲ್ಲಿ ತೀರ್ಥಹಳ್ಳಿಗೆ ವಾಪಾಸ್ ಬರುವಾಗ ಈ ಘಟನೆ ನಡೆದಿದೆ. ಬಸ್ ನಲ್ಲಿ ಹೋಗುವ ಪ್ರಯಾಣಿಕರು ಹಳ್ಳಕ್ಕೆ ಬಿದ್ದ ವಾಹನವನ್ನ ಗಮನಿಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಶ್ರೀಧರ್ ಅವರು ಈ ಹಿಂದೆ ಅತಿಥಿ ಉಪನ್ಯಾಸಕರಾಗಿದ್ದಾರೆ. ಪತ್ನಿ ಸೀತಾಲಕ್ಷ್ಮಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಪತ್ನಿ ತೀರ್ಥಹಳ್ಳಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Accident near Sakrebailu