ಭಾವನೆಂಟನಿಂದಲೆ ಭಾವನ ಹತ್ಯೆ- Murder at Nitturu

Suddilive || Shivamogga

ಭಾವನೆಂಟನಿಂದಲೆ ಭಾವನ ಹತ್ಯೆ- Murder at Nitturu   

Murder, Nitturu


ಪೂಜೆಗೆ ಬಂದಿದ್ದ ಅಕ್ಕನ ಗಂಡನನ್ನ ತಲೆಗೆ ಕಟ್ಟಿಗೆಯಿಂದ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಮಗನೂ ಶಾಮೀಲಾಗಿದ್ದು ಮಗ ಪೊಲೀಸರ ವಶದಲ್ಲಿದ್ದರೆ, ಭಾವನೆಂಟನಿಗಾಗಿ ಪೊಲೀಸರ ತೀವ್ರಶೋಧ ನಡೆದಿದೆ. 

ದೇವಿಚಂದ್ರ ಜೈನ್ (45) ಕೊಲೆಯಾಗಿರುವ ದುರ್ದೇವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾ. ನಿಟ್ಟೂರು ಸಮೀಪದ ಕರ್ಕಮುಡಿಯಲ್ಲಿ ಈ ಘಟನೆ ನಡೆದಿದೆ. ದೇವಿಚಂದ್ರನ ಮಗ ಹಾಗೂ ಬಾವ ಓಂಕಾರ್ ಜೈನ್ ನಿಂದ ಕೃತ್ಯ ನಡೆದಿದೆ. ಮಗನನ್ನ  ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. 


ದೇವಿಚಂದ್ರ, ಓಂಕಾರ್ ಎಂಬಾತನ ಅಕ್ಕನನ್ನ ಎರಡನೇ ಮದುವೆಯಾಗಿದ್ದರು. ಕೊಲೆಯಲ್ಲಿ ಭಾಗಿಯಾಗಿರುವ ಯಶವಂತ್ ಮೊದಲನೇ ಗಂಡನ ಮಗನಾಗಿದ್ದಾನೆ. ಇಂದು ಓಂಕಾರ್ ಮನೆಯಲ್ಲಿ ನಾಗ ಹಾಗೂ ಚೌಡಿ ದೇವಸ್ಥಾನದಲ್ಲಿ ಪೂಜೆ ಇಟ್ಟುಕೊಂಡಿದ್ದರು. 

ಪೂಜೆಗಾಗಿ ನಿನ್ನೆ ಓಂಕಾರನ ಮನೆಗೆ ಬಂದಿದದ್ದ ದೇವಿಚಂದ್ರನ ಜೊತೆ ಜಗಳವಾಗಿದೆ. ಅವ್ಯಾಚ್ಯಶಬ್ದಗಳ ಪ್ರಯೋಗ ನಡೆದಿದೆ. ಕಷ್ಟ ಪಟ್ಟು ಪೂಜೆ ಮಾಡಿಸಿದ್ರೆ ನೀನು ಕಾರ್ಯಕ್ರಮ ಹಾಳು ಮಾಡ್ತೀಯಾ ಎಂದು ಓಂಕಾರ್ ಪಕ್ಕದಲ್ಲಿರುವ ಕಟ್ಟಿಗೆಯಿಂದ ದೇವಿಚಂದ್ರನ ಮೇಲೆ ಹಲ್ಲೆ ನಡೆಸಿರುವುದಾಗಿ ಹೇಳಲಾಗುತ್ತಿದೆ. ಈ ವೇಳೆ ದೇವಿಚಂದ್ರನ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ತಾವ್ರವಾಗಿದೆ.

ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ರಿಂದ ದೇವಿಚಂದ್ರ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಹತ್ಯೆ ಬಳಿಕ ಓಂಕಾರ್ ಜೈನ್ ತಲೆಮರೆಸಿಕೊಂಡಿದ್ದು ಪೊಲೀಸರಿಂದ ಆತನಿಗಾಗಿ ತೀವ್ರ ಶೋಧ ನಡೆದಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Murder at Nitturu 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close