ಜಾತಿ ಜನಗಣತಿಯನ್ನ ಬಿಜೆಪಿ ಕಾಪಿ ಮಾಡಿಕೊಂಡಿದೆ-ಎರಡು ಪರೀಕ್ಷೆ ಫಲಿತಾಂಶ ಖುಷಿ ನೀಡಿದೆ-BJP copied caste census

 Suddilive || Shivamogga

 ಜಾತಿ ಜನಗಣತಿಯನ್ನ ಬಿಜೆಪಿ ಕಾಪಿ ಮಾಡಿಕೊಂಡಿದೆ-ಎರಡು ಪರೀಕ್ಷೆ ಫಲಿತಾಂಶ ಖುಷಿ ನೀಡಿದೆ-BJP copied caste census-two test results are encouraging

BJP, census


ಜಾತಿ ಜನಗಣತಿ ಮತ್ತು ಎಸ್ ಎಸ್ ಎಲ್ ಸಿ ಫಲಿತಾಂಶದ ಕುರಿತು ಸುದ್ದಿಗೋಷ್ಠಿ ನಡೆಸಿದ ಸಚಿವ ಮಧು ಬಂಗಾರಪ್ಪ ಜಾತಿ ಜನಗಣತಿ ನಡೆಸುವುದಾಗಿ ಹೇಳಿದ ಕೇಂದ್ರದ ಮೋದಿ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು


ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ನ್ಯಾಯಕೊಡಲು ಜಾತಿಗಣತಿ ಬೇಕು. ಭಾರತ ದೇಶದಲ್ಲಿ ಜಾತಿಜನಗಣತಿ ನಡೆಸಲು ಬಿಜೆಪಿ ಟೀಕಾಟಿಪ್ಪಣಿ ಮಾಡಿದ್ದರು. ಈಗ ಅವರೇ ಜಾತಿಜನಗಣತಿ ಮಾಡಲು ಮುಂದಾಗಿದ್ದಾರೆ. ಇದರಂತೆ ಗ್ಯಾರೆಂಟಿಯನ್ನ ಟೀಕಿಸಲಾಯಿತು. ಈಗ ಅದನ್ನ ಒಪ್ಪಿಕೊಂಡಿದ್ದಾರೆ. ಒಟ್ಟಾರೆ ಬಿಜೆಪಿ ನಮ್ಮನ್ನ ಕಾಪಿ ಮಾಡುತ್ತಿದೆ ಎಂದರು. 


ರಾಜ್ಯ ಸರ್ಕಾರದ 54 ಅಂಶಗಳನ್ನ ಇಟ್ಟುಕೊಂಡು ಸರ್ವೆ ಮಾಡಿರುವ ಜಾತಿಜನಗಣತಿಯನ್ನ ಮನೆಗೆ ಬಂದಿಲ್ಲ ಸರ್ವೆ ಅಗಿಲ್ಲ ಎಂದವರು ಅವರೇ ಸಹಿ ಹಾಕಿದ್ದಾರೆ. ಇದನ್ನ ಮಂಡನೆಯ ನಂತರ ಬೇಕಾದರೆ ಸರಿ ಪಡಿಸಿಕೊಳ್ಳೋಣ. ಇಂತಹ ಸರ್ವೆಗೆ 500 ಕೋಟಿಯಲ್ಲಿ ಕೇಂದ್ರ ನಡೆಸಲು ಹಣತೆಗೆದಿಟ್ಟಿರುವುದು ಸಾಕಾಗೊಲ್ಲ ಎಂದರು. 


ದೇಶದ ಕಾಯುವ ಯೋಧರ ನೇಮಕಾತಿ ಕಖೆದ ಎರಡು ವರ್ಷದಿಂದ ನೇಮಕಾತಿಯಾಗಿಲ್ಲ. 370 ಆರ್ಟಿಕಲ್ ತೆಗೆಯಲಾಯಿತು. ಇಂಟಲಿಜೆನ್ಸಿ ಫೇಲ್ಯೂರ್ ಬಗ್ಗೆ ರಾಷ್ಟ್ರಮಟ್ಟದ ಮಾಧ್ಯಮ ವರದಿ ಮಾಡಿದೆ. ರಫೇಲ್ ಬುಕಿಂಗ್ ಆಗಿರುವ ಬಗ್ಗೆ ಮಾಧ್ಯಮಗಳಲ್ಲಿ ತೋರಿಸಲಾಗಿದೆ. ರಕ್ಷಣೆ ನೀಡಲು ಪ್ರಧಾನಿಯವರು ಶಾಂತಿಯನ್ನ‌ಹುಡುಕಬೇಕು ಇಲ್ಲವಾದಾಗ ಇಂದಿರಾಗಾಂಧಿ ತರ ಮುನ್ನುಗ್ಗಬೇಕು ಎಂದು ತಿಳಿಸಿದರು‌. 


ಮುಸ್ಲೀಂ‌ಬಗ್ಗೆ ಬೇರೆ ಬೇರೆ ರೀತಿ ಪ್ರತಿಬಿಂವಿಸಲಾಗುತ್ತಿದೆ. ನಮ್ಮನ್ನ ಟೀಕೆ ಮಾಡಿ ಕಾಪಿ ಮಾಡಿಕೊಂಡ ಬಿಜೆಪಿಗೆ ಧನ್ಯವಾದಗಳನ್ನ ಹೇಳಿದರು. 


ಪರೀಕ್ಷೆ ಫಲಿತಾಂಶ ಖುಷಿ ನೀಡಿದೆ


ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶಸಮಾಧಾನ ನೀಡಿದೆ ಕಳೆದ ಬಾರಿ ಪರೀಕ್ಷೆ ಟೈಟ್ ಮಾಡಲಾದ ಪರಿಣಾಮ ಸಿಎಂ ಸಹ ಬೆಂಡೆತ್ತಿದ್ದರು. ಗ್ರೇಸ್ ಮಾರ್ಕ್ ಕೊಡದಂತೆ ಸೂಚಿಸಿದ್ದರು. ಕಳೆದ ವಾರಗಿಂತ 8.5% ಹೆಚ್ಚಿಗೆ ಬಂದಿದೆ ಕಳೆದ ಬಾರಿ ಇಬ್ಬರು 625 ಕ್ಕೆ 625 ಅಂಕ ಪಡೆದಿದ್ದರು. ಈ ಬಾರಿ ಉಚಿತ ವಿದ್ಯುತ್, ಸ್ಪೆಷಲ್ ಕ್ಲಾಸ್, ಕಲಿಕೆಯ ಮೇಲೆ ವಿಷೇಶ ಕಾಳಜಿ ಮಾಡಿದ ಕಾರಣ  22 ಜನ 625ಕ್ಕೆ 625 ಅಂಕ ಪಡೆದಿದ್ದಾರೆ ಎಂದರು. 


ಇದು ಟೀಂ ವರ್ಕ್ ಆಗಿದೆ. ಡಿಸೆಂಬರ್ ಕೊನೆಯವರೆಗೆ ಕ್ಲಾಸ್ ನ ಪಠ್ಯ ಮುಗಿಸಲಾಗಿತ್ತು. ದ್ವಿತೀಯ ಮತ್ತು ಎಸ್ ಎಸ್ ಎಲ್ ಸಿ‌ ಪರೀಕ್ಷೆಗೆ ಎರಡು ಮೂರು ಅಟೆಂಪ್ಟ್ ತೆಗೆದುಕೊಳ್ಳುವ ಹಾಗೂ ಪಾಸ್ ಆಗದೆ ಇರುವ ಮಕ್ಕಳಿಗೆ   ಪರೀಕ್ಷಾ ಶುಲ್ಕ ಉಚಿತವಾಗಿ ಇಡಲಾಗಿತ್ತು. ಇದು ಉತ್ತಮ ಫಲಿತಾಂಶ ದೊರೆತಿದೆ. ರಾಜ್ಯದಲ್ಲಿ 79 ಸಾವಿರ ದ್ವಿತೀಯ ಮಕ್ಕಳು ಪರೀಕ್ಷೆ ಬರೆದಿದ್ದಾರೆ ಕಳೆದ ಬಾರಿ 31 ಸಾವಿರ ಮಕ್ಕಳು ಇಂಪ್ರುಮೆಂಟ್ ಗೆ ಬರೆದಿದ್ದಾರೆ ಎಂದರು.


ನೇಮಕಾತಿಗೆ ಸಿದ್ದತೆಯಿದೆ


55% ಜನ ವಿದ್ಯಾರ್ಥಿಗಳು 60% ಅಂಕ ಪಡೆದಿದ್ದರು. 75% ವಿದ್ಯಾರ್ಥಿಗಳು ಈ ಬಾರಿ 60% ಬಂದಿದೆ. ಶೇ.93 ರಷ್ಟು ಜನ ದ್ವಿತೀಯ ಪಿಯುಸಿ ಎರಡನೇ ಅಟೆಂಪ್ಟ್ ಎಕ್ಸಮ್  ಬರೆಯುವರು ಪರೀಕ್ಷೆ ತೆಗೆದುಕೊಂಡಿದ್ದರು. ಈ ಬಾರಿಕಲಿಕೆಗೆ ಯೂಟ್ಯೂಬ್ ಚಾನೆಲ್ ಆರಂಭಿಸಲಾಗುತ್ತಿದೆ. 

SSLCಯಲ್ಲಿ ಆರ್ ಟಿಇಯಲ್ಲಿ ಪ್ರವೇಶ ಪಡೆದವರು ಶೇ.75% ಪಾಸ್ ಆಗಿದ್ದಾರೆ. 35 ರಿಂದ 33 ಅಂಕಕ್ಕೆ ಇಳಿಸುವಬಗ್ಗೆ ಸರ್ಕಾರದಲ್ಲಿ ಸಧ್ಯಕ್ಕೆ ಚಿಂತೆಯಿಲ್ಲ. ಅನುದಾನಿತ ಮತ್ತು ಸರ್ಕಾರಿ ಶಾಲೆಗಳಿಗೆ 11 ಸಾವಿರ ನೇಮಕಾತಿಗೆ ಸಿದ್ದವಾಗಿದೆ ಎಂದರು.

ಜನಿವಾರಕ್ಕೆ ಗರಂ

ಜನಿವಾರ ವಿಷಯದಲ್ಲಿ ಗರಂ ಆದ ಸಚಿವರು ನಾವು ಸಂಪ್ರದಾಯದವರಲ್ಲ. ಬಿಜೆಪಿ ಈ ವಿಷಯವನ್ನ ಊರಿಡಿ ಹಬ್ಬಿಸಲು ನೋಡಿದ್ರು ಎಂದು ಗರಂ ಆದರು. ಸಿಲಿಬಸ್ ಪರಿಷ್ಕರಿಸುವ ಬಗ್ಗೆ ಸರ್ಕಾರದ ಮುಂದೆ ಸಧ್ಯಕ್ಕಿಲ್ಲ ಎಂದರು.

 BJP copied caste census

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close