SUDDILIVE || SHIVAMOGGA
ವಕೀಲರಿಗೆ ಬೆದರಿಕೆ, ಆರೋಪಿ ಬಂಧನ-Lawyer was threatened, accused arrested
ವಕೀಲರಿಗೆ ಬೆದರಿಕೆ ಆರೋಪಿ ಬಂದನವಾಗಿದೆ.
ಸಾಗರದಲ್ಲಿ ಸಿವಿಲ್ ನ್ಯಾಯಾಲಯದ ಮಧ್ಯಂತರ ಇಂಜೆಕ್ಷನ್ ಆದೇಶದ ಪ್ರಕಾರ ನ್ಯಾಯಾಲಯದ ಆದೇಶದಂತೆ ವಾದಿಪರ ವಕೀಲರು ಪ್ರತಿವಾದಿಯರಿಗೆ ನೊಂದಾಯಿತ ಅಂಚೆ ಮೂಲಕ ನೋಟಿಸ್ ನೀಡಿದ್ದು ಅದು ಜಾರಿಯಾದಾಗ ಗಣೇಶ ಎಂಬ ಪ್ರತಿವಾದಿಯು ವಾದಿಯ ವಕೀಲರಾದ ಕೆ.ವಿ ಪ್ರವೀಣ್ ಇವರಿಗೆ ಪೋನ್ ಮಾಡಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿ ನೋಟೀಸ್ ನೀಡಿದ್ದನ್ನು ಪ್ರಶ್ನಿಸಿದ್ದನು.
ಇದರಿಂದಾಗಿ ಪ್ರವೀಣ್ ವಕೀಲರು ಆನಂದಪುರ ಪೋಲಿಸ್ ಠಾಣೆಗೆ ದೂರನ್ನು ನೀಡಿದ್ದು ದೂರಿನ ಆದಾರದ ಮೇರೆಗೆ ಪೋಲಿಸರು BNS ಸೆಕ್ಷನ್ 351(1),352,ವಕೀಲರ ಮೇಲಿನ ಹಿಂಸ ತಡೆಕಾಯ್ದೆ ಸೆಕ್ಷನ್ 4 ರ ಅಡಿಯಲ್ಲಿ ಬಂದಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದು ವಕೀಲರ ವೃತ್ತಿ ಮೇಲಿನ ಬೆದರಿಕೆ ಆಗಿದ್ದು ಮಾನ್ಯ ಹೆಚ್ಚುವರಿ ಹಿರಿಯ ವ್ಯವಹಾರ ಮತ್ತು ಜೆ.ಎಂ.ಎಫ್.ಸಿ ಸಾಗರ ನ್ಯಾಯಾಧೀಶರಾದ ಶ್ರೀಮತಿ ದೀಪಾ ಇವರು ನ್ಯಾಯಾಂಗ ಬಂದನಕ್ಕೆ ಕಳುಹಿಸಿದ್ದು,ಈ ಮೂಲಕ ವಕೀಲರ ಹಿಂಸೆ ತಡೆ ಕಾಯ್ದೆಯಡಿ ಜಿಲ್ಲೆಯ ಮೊದಲ ಪ್ರಕರಣ ಇದಾಗಿದೆ.
accused arrested