ಯೋಧರನ್ನ ಸನ್ಮಾನಿಸಿ ಆರೇಷನ್ ಸಿಂಧೂರವನ್ನ ಸ್ವಾಗತಿಸಿದ ವಿಚಾರ ಮಂಚ್-welcomes Operation Sindhur

SUDDILIVE || SHIVAMOGGA

ಯೋಧರನ್ನ ಸನ್ಮಾನಿಸಿ ಆರೇಷನ್ ಸಿಂಧೂರವನ್ನ ಸ್ವಾಗತಿಸಿದ ವಿಚಾರ ಮಂಚ್ -Vichar Manch honours soldiers and welcomes Operation Sindhur

Operation, sindhur

ನರೇಂದ್ರ ಮೋದಿ ರಾಷ್ಟ್ರೀಯ ವಿಚಾರ ಮಂಚ್ ವತಿಯಿಂದ ಅಪರೇಷನ್ ಸಿಂಧೂರ್ ಮೂಲಕ ಪೆಹಲ್ಗಂ ಉಗ್ರ ದಾಳಿಗೆ ಭಾರತದಿಂದ ತಕ್ಕ ಉತ್ತರ ನೀಡಿದ ಯೋಧರಿಗೆ ಮತ್ತು ದೇಶದ ಪ್ರಧಾನಿಗೆ ಆತ್ಮಸ್ಥೈರ್ಯ ತುಂಬಲು  ನಗರದ ಗೋಪಿ ವೃತ್ತದಲ್ಲಿ ಪಟಾಕಿ ಸಿಡಿಸಿ ನಿವೃತ್ತ ಯೋಧರಾದ ನೇಮೋಜಿ ರಾವ್ ಅವರನ್ನು  ಸನ್ಮಾನಿಸಿ ಅಭಿನಂದಿಸಲಾಯಿತು.

 ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಸವ ಕೇಂದ್ರದ ಬಸವ ಮರುಳ ಸಿದ್ಧ ಶ್ರೀಗಳು ಮಾತನಾಡಿ ಹಿಂದೆ ಮಹಾಭಾರತದಲ್ಲಿ ದುಶ್ಯಾಸ ನ  ದ್ರೌಪದಿಯ ಮೂಡಿಗೆ ಕೈ ಹಾಕಿ ಕೌರವರ ನಾಶಕ್ಕೆ ಕಾರಣನಾದ ಈಗ ಪಾಕಿಸ್ತಾನ ಭಾರತ ಮಾತೆಯ ಮುಕುಟವಾದ ಕಾಶ್ಮೀರಕ್ಕೆ ಕೈ ಹಾಕಿ ನಮ್ಮ ಸಹೋದರಿಯರ ಸಿಂಧೂರ ಅಳಿಸಿ ಪಾಕಿಸ್ತಾನದ ಸರ್ವನಾಶಕ್ಕೆ ಕಾರಣವಾಗಿದೆ. ಹಲವು ಬಾರಿ ಪಾಕಿಸ್ತಾನ ಇದೇ ರೀತಿಯ ಖ್ಯಾತೆ  ತೆಗೆದು ಸೋತು ಸುಣ್ಣ ವಾಗಿದ್ದು ಹತಾಶ ಭಾವನೆಯಿಂದ ಪದೇಪದೇ ಇಂತಹ ಕೃತ್ಯ ಮಾಡುತ್ತಿದೆ. ನಮ್ಮ ಹೆಣ್ಣು ಮಕ್ಕಳು ಕೂಡ ಯುದ್ಧದಲ್ಲಿ ಭಾಗವಹಿಸಿ ಪಾಕಿಸ್ತಾನಕ್ಕೆ ಈಗಾಗಲೇ ಬುದ್ಧಿ ಕಲಿಸಿದ್ದಾರೆ ಭಾರತ ಯಾರ ತಂಟೆಗೂ ಹೋಗುವುದಿಲ್ಲ  ನಮ್ಮ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ . ಇಂತಹ ಸಂದರ್ಭದಲ್ಲಿ ದೇಶದ ಜನತೆ ನಮ್ಮ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಪ್ರತಿಯೊಬ್ಬ ಪ್ರಜೆಯೂ ನಮ್ಮ ವೈಯಕ್ತಿಕ ಬೇಡಿಕೆಯನ್ನು ದೇವರ ಮುಂದೆ ಇಡುವ ಬದಲು ನಮ್ಮ ಸೈನಿಕರಿಗೆ ಆರೋಗ್ಯ ಭಾಗ್ಯ ನೀಡಿ ನೂರುಪಟ್ಟು ಹೆಚ್ಚಿನ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸಬೇಕು ಎಂದರು.

 ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ನೇಮೋಜಿ ರಾವ್ 1971ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ನಾನು ಭಾಗವಹಿಸಿದ್ದೆ ನನ್ನ ಮಗ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದರು ಸೈನಿಕರ ಕಷ್ಟ ಸುಖಗಳನ್ನು ಅರಿತುಕೊಳ್ಳುವ ಅವಶ್ಯಕತೆ ಇದೆ ನಾನು ಕೂಡ ಮೂರು ದಿನ ಆಹಾರ ಇಲ್ಲದೆ ದೇಶಕ್ಕಾಗಿ ಯುದ್ಧದಲ್ಲಿ ಭಾಗವಹಿಸಿದ ಸಂದರ್ಭ ಇತ್ತು. ಆಗಿನ ಯುದ್ಧದಲ್ಲಿ ಇನ್ನು ಮೂರು ದಿನಗಳ ಕಾಲ ಅವಕಾಶ ಸಿಕ್ಕಿದರೆ ಪಾಕಿಸ್ತಾನದ ಸರ್ವನಾಶವಾಗುತ್ತಿತ್ತು ಆದರೆ ಕೆಲವು ಬದಲಾವಣೆಗಳಿಂದ ಯುದ್ಧ ಸ್ಥಗಿತಗೊಂಡಿತು ಈಗ ನಡೆದ ಅಪರೇಷನ್ ಸಿಂಧೂರ ಒಳ್ಳೆಯ ಬೆಳವಣಿಗೆ. ಭಯೋತ್ಪಾದಕರು ಇನ್ನು ಮುಂದೆ ಇಂಥ ನೀಚ  ಕೃತ್ಯಕ್ಕೆ ಕೈ ಹಾಕದ ಹಾಗೆ ಅವರ ಹುಟ್ಟಡಗಿಸಬೇಕು ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ಸಂತೋಷ್ ಬಳ್ಳಕೆರೆ.ರಮೇಶ್ ಕುಮಾರ್ ಜಾದವ್ ಸತೀಶ್ ಕುಮಾರ್ ಶೆಟ್ಟಿ. ರಾಜೇಶ್ ಕಾಮತ್  ದಿವಾಕರ್ ಶೆಟ್ಟಿ. ಹರೀಶ್. ರಾಹುಲ್ ಬಿದರೆ. ವೀರಭದ್ರಪ್ಪ ಪೂಜಾರ್. ಕಿರಣ್. ಜೈರಾಮ್ ಮೊದಲಾದವರಿದ್ದರು.

welcomes Operation Sindhur   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close