SUDDILIVE || SHIVAMOGGA
ಮೂವರು ಗಾಂಜಾ ಮಾರಾಟಗಾರ ಬಂಧನ-Three Ganja sellers arrested
ಸೆವೆನ್ ಹಿಲ್ಸ್ ಬಡಾವಣೆಯಲ್ಲಿ ಗಾಂಜಾ ಮಾರಾಟದ ಹಣ ಪಡೆಯಲು ಯತ್ನಿಸುತ್ತಿದ್ದ ವೇಳೆ ಸೆನ್ ಠಾಣೆ ಪಿಐ ಕೃಷ್ಣಮೂರ್ತಿ ಅವರ ಖಡಕ್ ದಾಳಿಯಿಂದಾಗಿ ಮೂವರನ್ನ ಬಂಧಿಸಲಾಗಿದೆ. ಮೂವರಿಗೂ ನ್ಯಾಯಾಂಗ ಬಂಧನವಾಗಿದೆ.
ಶನಿವಾರ ಮೇ.17 ರಂದು ಶಿವಮೊಗ್ಗ ನಗರದ ಸೋಮಿನಕೊಪ್ಪದಿಂದ ಗೆಜ್ಜೇನಹಳ್ಳಿಗೆ ಹೋಗುವ ದಾರಿಯ ಬಲಭಾಗದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ 7 ಹಿಲ್ಸ್ ನೂತನ ಬಡಾವಣೆಯ ಪಾರ್ಕ ಪಕ್ಕದಲ್ಲಿ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆದಿದೆ.
ಎಸ್ಪಿ ಮಿಥುನ್ ಕುಮಾರ್ ಜಿ. ಕೆ ಐಪಿಎಸ್, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭುಮರಡ್ಡಿರವರ ಮಾರ್ಗದರ್ಶನದಲ್ಲಿ, ಸೆನ್ ಠಾಣೆಯ ಪಿಐ ಕೃಷ್ಣಮೂರ್ತಿ ಕೆ ರವರ ನೇತೃತ್ವದಲ್ಲಿ ಸಿಬ್ಬಂಧಿಗಳಾದ ಶೇಖರ್ ಎಎಸ್ಐ, ಧರ್ಮಾ ನಾಯ್ಕ ಹೆಚ್ಸಿ, ಅವನಾಶ ಹೆಚ್ಸಿ, ನಾರಾಯಣ ಸ್ವಾಮಿ ಪಿಸಿ, ಪರಮೇಶ್ವರಪ್ಪ ಟಿ ಪಿಸಿ, ಫಿರ್ದೊಸ್ ಅಹಮದ್ ಪಿಸಿ, ರವಿ ಬಿ ಪಿಸಿ, ಆಂಡ್ರ್ಯೂಸ್ ಜೊನ್ಸ್ ಪಿಸಿ, ಮತ್ತು ಶರತ್ ಕುಮಾರ್ ಬಿ ಎಸ್ ಪಿಸಿ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದ್ದಾರೆ.
ಆರೋಪಿಗಳಾದ 1) ರಾಜೇಂದ್ರ ಕಾಣೋಜಿ, 22 ವರ್ಷ, ವಾಸ ರಾಜ್ಮಾಲಿ ಗ್ರಾಮ ಬರವಾನಿ ಜಿಲ್ಲೆ ಮದ್ಯ ಪ್ರದೇಶ ರಾಜ್ಯ, ಇವನು ಮದ್ಯ ಪ್ರದೇಶ ರಾಜ್ಯದಿಂದ ಬಸ್ ಮೂಲಕ ಶಿವಮೊಗ್ಗಕ್ಕೆ ಬಂದು ಗಾಂಜಾ ಸೊಪ್ಪನ್ನು 2) ಜಾವೀದ್ ಅಲ್ಲಿಸಾಬ್ ದೊಡ್ಮನಿ, 22 ವರ್ಷ, ವಾಸ ಆರ್ಶಯ ಬಡಾವಣೆ ಬೊಮ್ಮಕನಟ್ಟೆ ಶಿವಮೊಗ್ಗ. ಮತ್ತು 3) ಪರುಶುರಾಮ್ ಬಿನ್ ನಾಗೇಂದ್ರ ಹೆಚ್ 19 ವರ್ಷ ವಾಸ ಆರ್ಶಯ ಬಡಾವಣೆ ಬೊಮ್ಮನಕಟ್ಟೆ ಶಿವಮೊಗ್ಗ. ಇವರಿಗೆ ಮಾರಾಟ ಮಾಡಿ ಹಣ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದವರ ಮೇಲೆ ದಾಳಿ ನಡೆಸಲಾಗಿದೆ.
ಈ ಮೂರು ಆಸಾಮಿಗಳ ಬಳಿ ಇದ್ದ ಅಂದಾಜು ಮೌಲ್ಯ 70,000/- ರೂಗಳ 2 ಕೆಜಿ 735 ಗ್ರಾಂ ತೂಕದ ಒಣ ಗಾಂಜಾ ಮತ್ತು ಒಂದು ಹೊಂಡಾ ಕಂಪನಿಯ ಬೈಕ್ ಹಾಗೂ 02 ಮೊಬೈಲ್ಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ನೀಡಲಾಗಿದೆ.
Three Ganja sellers arrested